ಚಾಮರಾಜನಗರ: ವಿದ್ಯುತ್ ಸ್ಪರ್ಶದಿಂದ ಅಂದಾಜು ಎಡ್ಮೂರು ವರ್ಷದ ಹೆಣ್ಣು ಚಿರತೆಯೊಂದು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ನೇನೆಕಟ್ಟೆ ಗ್ರಾಮದಲ್ಲಿ ಶನಿವಾರ ನಡೆದಿದೆ.
ನೇನೆಕಟ್ಟೆ ಗ್ರಾಮದ ಜಮೀನೊಂದರ ಪಂಪ್ ಸೆಟ್‌ಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ಲೈನ್ ಹಾದುಹೋಗಿದ್ದ ಬೇವಿನ ಮರ ಏರುವಾಗ ವಿದ್ಯುತ್ ಪ್ರವಹಿಸಿ ಚಿರತೆ ಅಸುನೀಗಿದೆ. ಸ್ಥಳೀಯ ರೈತರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಗುಂಡ್ಲುಪೇಟೆ ಬಫರ್ ವಲಯದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ, ಮೃತ ಚಿರತೆಯ ಮರಣೋತ್ತರ ಪರೀಕ್ಷೆ ಬಳಿಕ ಮಾರ್ಗಸೂಚಿ ಪ್ರಕಾರ ಕಳೇಬರವನ್ನು ದಹಿಸಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹುಲಿ ಕಳೇಬರ ಪತ್ತೆ: ಮತ್ತೊಂದೆಡೆ, ಆಪರೇಷನ್ ಚಿರತೆ ಕೈಗೊಂಡಿದ್ದ ಸ್ಥಳದಲ್ಲೇ ಅಂದಾಜು 5 ರಿಂದ 6 ವರ್ಷದ ಹುಲಿ ಕಳೇಬರ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯ ಬಳಿ ನಡೆದಿದೆ. ಹುಲಿಯ ಭುಜದಲ್ಲಿ ಆಳ ಗಾಯವಾಗಿದ್ದು, ಸರಹದ್ದಿನ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವುದು ಮೇಲ್ನೋಟಕ್ಕೆ ದೃಢವಾಗಿದೆ.
ಹುಲಿ ಉಗುರು, ಹಲ್ಲುಗಳು ಸಂರಕ್ಷಿತವಾಗಿದ್ದು, ಸ್ವಾಭಾವಿಕವಾಗಿ ಹುಲಿ ಸಾವನ್ನಪ್ಪಿದೆ ಎಂದು ಬಿಆರ್ಟಿಡಿಸಿಎಫ್ ದೀಪಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಚ್ಚಿಬೀಳಿಸುವ ಚಿರತೆ ದಾಳಿಯ ಲೈವ್ ವಿಡಿಯೋ: ಭಯಾನಕ ದೃಶ್ಯ ಕಂಡು ಆತಂಕಗೊಂಡ ಜನ - Live video of leopard attack