ರಾಯಚೂರು: ಮಾವನೇ ತನ್ನ ಸೊಸೆಯನ್ನು ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆ ರಾಯಚೂರಿನ ಜುಲಮಗೇರಾ ಗ್ರಾಮದಲ್ಲಿ ಶನಿವಾರ ನಡೆದಿದೆ. ಮೃತ ಮಹಿಳೆಗೆ 27 ವರ್ಷ ವಯಸ್ಸಾಗಿತ್ತು. ಆರೋಪಿ ಮಾವ ಗ್ರಾಮದಿಂದ ಪರಾರಿಯಾಗಿದ್ದಾನೆ.
ಆರೋಪಿ ಮಾವ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೊಸೆಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಸಂತ್ರಸ್ತೆ ತಪ್ಪಿಸಿಕೊಳ್ಳುವಾಗ ಕಬ್ಬಿಣದ ಸಲಾಕೆಯಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಎರಡು ಮೂರು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ್ದಾಗ ತಪ್ಪಿಸಿಕೊಂಡ ಸಂತ್ರಸ್ತೆ ತನ್ನ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು. ಆಗ ಮನೆಯ ಮರ್ಯಾದೆ ವಿಷಯವೆಂದು ಬೈದು ಬುದ್ಧಿ ಹೇಳಲಾಗಿತ್ತು. ಆದರೂ ಬದಲಾಗದ ಆರೋಪಿ ಮತ್ತೆ ಅದೇ ಕೃತ್ಯಕ್ಕೆ ಮುಂದಾಗಿ ಸೊಸೆಯ ಪ್ರಾಣ ತೆಗೆದಿದ್ದಾನೆ.
ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ: ಪತ್ನಿ, ಆಕೆಯ ತಾಯಿ, ಸಹೋದರ ಅರೆಸ್ಟ್