ETV Bharat / state

ಕೋವಿಡ್ ಅಕ್ರಮದ ವಿಚಾರಣಾ ಆಯೋಗದ ಅವಧಿ ಎರಡನೇ ಬಾರಿ ವಿಸ್ತರಿಸಿ ಆದೇಶ - Covid

author img

By ETV Bharat Karnataka Team

Published : May 26, 2024, 2:33 PM IST

ಕೋವಿಡ್​​-19 ಅಕ್ರಮದ ವಿಚಾರಣಾ ಆಯೋಗದ ಅವಧಿಯನ್ನು 25-05-2024 ರಿಂದ 31-08-2024 ರವರೆಗೆ ಮೂರು ತಿಂಗಳು ವಿಸ್ತರಿಸಿ ಸರ್ಕಾರದ ಆದೇಶಿಸಿದೆ.

ವಿಧಾನಸೌಧ
ವಿಧಾನಸೌಧ (Etv Bharat)

ಬೆಂಗಳೂರು: ಕೋವಿಡ್​​-19 ಅಕ್ರಮದ ವಿಚಾರಣಾ ಆಯೋಗದ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಹೈಕೋರ್ಟ್​ ನಿವೃತ್ತ ನ್ಯಾಯಾಧೀಶರಾದ ಜಾನ್​ ಮೈಕಲ್​ ಕುನ್ಹಾ ನೇತೃತ್ವದ ತನಿಖಾ ಆಯೋಗದ ಅವಧಿಯನ್ನು 25-05-2024 ರಿಂದ 31-08-2024 ರವರೆಗೆ ಮೂರು ತಿಂಗಳು ವಿಸ್ತರಿಸಿ ಸರ್ಕಾರದ ಆದೇಶಿಸಿದೆ. 25-08-2023 ಏಕ ಸದಸ್ಯ‌ ತನಿಖಾ ಆಯೋಗ ರಚಿಸಿದ್ದ ಸರ್ಕಾರ ಅದರ ಅವಧಿಯನ್ನು 22-11-2023 ಮೊದಲ ಬಾರಿ ವಿಸ್ತರಣೆ ಮಾಡಿತ್ತು. 24-08-2024 ರಂದು ಎರಡನೇ ಬಾರಿ ವಿಚಾರಣಾ ಆಯೋಗದ ಅವಧಿಯನ್ನು ವಿಸ್ತರಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ನಿವಾರಣೆ ಹಾಗೂ ತಡೆಗಟ್ಟುವಿಕೆ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಇತರೆ ಇಲಾಖೆಗಳು ಹಾಗೂ ಈ ಇಲಾಖೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಸ್ಥೆಗಳಲ್ಲಿ ಔಷಧಿ, ಉಪಕರಣಗಳು ಹಾಗೂ ಸಾಮಗ್ರಿಗಳ ಖರೀದಿ, ಆಮ್ಲಜನಕ ನಿರ್ವಹಣೆ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳು ಹಾಗೂ ಇತ್ಯಾದಿ ವಿಷಯಗಳ ಕುರಿತು 2021ರ ಜುಲೈ-ಆಗಸ್ಟ್ ನಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿರುವ ವರದಿಯಲ್ಲಿನ ಗಂಭೀರವಾದ ಆರೋಪಗಳ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಿತ್ತು.

ವಿಚಾರಣಾ ಆಯೋಗದ ಅವಧಿಯು 24-05-2024ಕ್ಕೆ ಕೊನೆಗೊಳ್ಳಲಿರುವುದರಿಂದ, 25-05-2024 ರಿಂದ 31-08-2024 ರವರೆಗೆ ವಿಚಾರಣಾ ಆಯೋಗವನ್ನು ವಿಸ್ತರಿಸಲು ಕೋರಿದ್ದರು. ಅದರಂತೆ ಇದೀಗ ಮೂರನೇ ಬಾರಿ ವಿಚಾರಣಾ ಆಯೋಗದ ಅವಧಿಯನ್ನು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ:ಲಸಿಕೆಗಳು ಮತ್ತು ಪುನರಾವರ್ತಿತ ಕೋವಿಡ್​ ಸೋಂಕುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ: ಅಧ್ಯಯನ ವರದಿ - Covid 19 Vaccines And Immunity

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.