ETV Bharat / state

ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕಾದ ಖರ್ಚೆಷ್ಟು? ಶತಮಾನೋತ್ಸವಕ್ಕಾಗುವ ಖರ್ಚೆಷ್ಟು? - BELAGAVI CONGRESS SESSION

ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕಾಂಗ್ರೆಸ್​ ಅಧಿವೇಶನಕ್ಕಾದ ಖರ್ಚುವೆಚ್ಚದ ಮಾಹಿತಿ ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. 'ಈಟಿವಿ ಭಾರತ್' ಪ್ರತಿನಿಧಿ ಸಿದ್ದನಗೌಡ ಪಾಟೀಲ್ ವಿಶೇಷ ವರದಿ

Mahatma Gandhi
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ (ETV Bharat)
author img

By ETV Bharat Karnataka Team

Published : 3 hours ago

ಬೆಳಗಾವಿ: ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಒಂದೇ ಬಾರಿ. ಅದು ಕರ್ನಾಟಕದ ಬೆಳಗಾವಿಯಲ್ಲಿ. ಈ ಐತಿಹಾಸಿಕ ಕಾರ್ಯಕ್ರಮಕ್ಕೀಗ ಶತಮಾನದ ಸಂಭ್ರಮ.

ಬ್ರಿಟೀಷರ ಕಪಿಮುಷ್ಠಿಯಿಂದ ಭಾರತವನ್ನು ಪಾರು ಮಾಡಿದವರಲ್ಲಿ ಮಹಾತ್ಮ ಗಾಂಧಿ ಅಗ್ರಗಣ್ಯರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಾತ್ರವನ್ನೂ ಮರೆಯುವಂತಿಲ್ಲ. ಬಾಪೂಜಿ ಕೂಡ ಅದೇ ಕಾಂಗ್ರೆಸ್ ವೇದಿಕೆಯ ಮೂಲಕವೇ ಆಂಗ್ಲರ ವಿರುದ್ಧ ಚಳುವಳಿ ನಡೆಸಿದ್ದರು. ಹೀಗೆ‌ 1924 ಡಿ.26, 27 ರಂದು ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ಎರಡು ದಿನ ಕಾಂಗ್ರೆಸ್ ಅಧಿವೇಶನ ಯಶಸ್ವಿಯಾಗಿ ಜರುಗಿತ್ತು. ಅವತ್ತಿ‌ನ ಮಟ್ಟಿಗೆ ಅದು ಇಡೀ ದೇಶ ಅಷ್ಟೇ ಅಲ್ಲದೇ ಬ್ರಿಟಿಷರ ಗಮನವನ್ನೂ ಸೆಳೆದಿತ್ತು.

Mahatma Gandhi
ಮಹಾತ್ಮ ಗಾಂಧೀಜಿ (ETV Bharat)

ಬಾಪೂಜಿ ಜೊತೆಗೆ ಜವಾಹರಲಾಲ್ ನೆಹರು, ಸರ್ದಾರ್​ ವಲ್ಲಭಬಾಯಿ ಪಟೇಲ್, ಸರೋಜಿನಿ ನಾಯ್ಡು, ಮೌಲಾನಾ ಅಬ್ದುಲ್ ಕಲಾಂ ಆಜಾದ್ ಸೇರಿ ಹಲವಾರು ರಾಷ್ಟ್ರೀಯ ನಾಯಕರ ದಂಡೇ ಬೆಳಗಾವಿಗೆ ಆಗಮಿಸಿತ್ತು. ಅಧಿವೇಶನದ ಸ್ವಾಗತ ಸಮಿತಿ ಅಧ್ಯಕ್ಷರಾದ ಗಂಗಾಧರರಾವ್ ದೇಶಪಾಂಡೆ ಮತ್ತು ಅವರ ತಂಡ, ನಾ.ಸು.ಹರ್ಡೇಕರ್ ಸ್ಥಾಪಿಸಿದ್ದ ರಾಷ್ಟ್ರೀಯ ಸೇವಾದಳ ಸೇರಿ ಮತ್ತಿತರ ನಾಯಕರ ಅವಿರತ ಶ್ರಮದಿಂದ ಬೆಳಗಾವಿ ಅಧಿವೇಶನ ಯಶಸ್ವಿಯಾಗಿತ್ತು.

₹2.20 ಲಕ್ಷ ಖರ್ಚು: ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 2,20,057 ರೂಪಾಯಿ ಖರ್ಚಾಗಿತ್ತು. ಅಧಿವೇಶನಕ್ಕೆ ಸಂಗ್ರಹವಾಗಿದ್ದು 2,20,829 ರೂಪಾಯಿ. ಎಲ್ಲಾ ಖರ್ಚು ತೆಗೆದು 772 ರೂ. ಹಣ ಉಳಿದಿತ್ತು. ಆ ಹಣವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ‌ ಬಳಿ ಉಳಿಸಿಕೊಳ್ಳಲಾಗಿತ್ತು.

Mahatma Gandhi
ಸುಭಾಷ್‌ಚಂದ್ರ ಬೋಸರ ಜೊತೆ ಗಾಂಧೀಜಿ (ETV Bharat)

ಯಾವುದಕ್ಕೆ ಎಷ್ಟು ಖರ್ಚು?:

  • ಆಡಳಿತ ಮಂಡಳಿ (ರೈಲ್ವೆ, ವಾಹನ ಸಾರಿಗೆ, ಟೆಲಿಗ್ರಾಂ ಸೇರಿ ಮತ್ತಿತರ ಖರ್ಚು): 66,749 ರೂಪಾಯಿ 5 ಆಣೆ
  • ಬಾವಿ ನಿರ್ಮಾಣಕ್ಕೆ 4,370 ರೂಪಾಯಿ 3 ಆಣೆ
  • ನೀರಿನ ವ್ಯವಸ್ಥೆಗೆ 19,545 ರೂಪಾಯಿ
  • ಪೆಂಡಾಲ್ ಖರ್ಚು: 23,480 ರೂಪಾಯಿ 15 ಆಣೆ, 6 ಪೈಸೆ
  • ಊಟಕ್ಕೆ ತಗುಲಿದ ವೆಚ್ಚ: 28,317 ರೂಪಾಯಿ 7 ಆಣೆ, 6 ಪೈಸೆ
  • ಗಾಂಧೀಜಿ ಕುಟೀರ ನಿರ್ಮಾಣಕ್ಕೆ: 350 ರೂಪಾಯಿ
  • ಒಟ್ಟು ಖರ್ಚು 2,20,057 ರೂಪಾಯಿ

    ಸಂಗ್ರಹವಾದ ಹಣದ ಲೆಕ್ಕ:
  • ಕಾಂಗ್ರೆಸ್ ಸದಸ್ಯತ್ವ ಶುಲ್ಕ: 1,19,420 ರೂಪಾಯಿ (ಒಬ್ಬರಿಗೆ 1 ರೂ.)
  • ಖಾದಿ ಸೇರಿ ಮತ್ತಿತರ ವಸ್ತುಗಳ ಮಾರಾಟ: 22,256 ರೂಪಾಯಿ
  • ದಾನಿಗಳಿಂದ 2,003 ರೂಪಾಯಿ
  • ಕಾಂಗ್ರೆಸ್ ಅಧಿವೇಶನ‌ ಮತ್ತು ವಸ್ತು ಪ್ರದರ್ಶನ ವೀಕ್ಷಿಸಲು ಬಂದ ಜನಸಾಮಾನ್ಯರಿಗೆ ನಿಗದಿಪಡಿಸಿದ್ದ ಟಿಕೆಟ್ ಶುಲ್ಕ: 29,390 ರೂಪಾಯಿ
  • ಒಟ್ಟು 2,20,829 ರೂ. ಹಣ ಸಂಗ್ರಹ.

    ಈಟಿವಿ ಭಾರತಕ್ಕೆ ಹಿರಿಯ ಪತ್ರಕರ್ತ ಸುಭಾಷ ಕುಲಕರ್ಣಿ ಪ್ರತಿಕ್ರಿಯಿಸಿ, "ಅಧಿವೇಶನದ ಲೆಕ್ಕ ಪರಿಶೋಧಕರಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಎಸ್.ಎಸ್.ಪೂಜಾರಿ, ಕೆ.ಪಾಂಡುರಂಗರಾವ್, ಅಕೌಂಟೆಂಟ್ ಉಡುಪಿ ಗೋವಿಂದರಾವ್, ಖಜಾಂಚಿ ಎನ್.ವ್ಹಿ.ಹೇರೇಕರ್ ಮತ್ತು ಎಲ್.ವ್ಹಿ.ದೇಶಪಾಂಡೆ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಬಿ.ಪೋತದಾರ್ ಇದ್ದರು. ಅಧಿವೇಶನ ಮುಗಿದ 3 ತಿಂಗಳೊಳಗೆ ಗಂಗಾಧರರಾವ್ ದೇಶಪಾಂಡೆ ಲೆಕ್ಕ ಒಪ್ಪಿಸುವ ಮೂಲಕ ಪಾರದರ್ಶಕತೆ ಮೆರೆದಿದ್ದರು" ಎಂದು ತಿಳಿಸಿದರು.

"ಅವತ್ತು ರೂಪಾಯಿ, ಪೈಸೆ ಕೂಡಿಸಿ ಯಾವುದೇ ದುಂದುವೆಚ್ಚವಾಗದಂತೆ ಅಷ್ಟೊಂದು ದೊಡ್ಡ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಗಿತ್ತು. ಆದರೆ, ಈಗ ಶತಮಾನೋತ್ಸವಕ್ಕೆ ಕೋಟಿ, ಕೋಟಿ ರೂಪಾಯಿ ಖರ್ಚಾಗುತ್ತಿದೆ. ಆಗಿನ ಕಾಲಕ್ಕೂ ಇಂದಿಗೂ ಅಜಗಜಾಂತರ ವ್ಯತ್ಯಾಸವಾಗಿದೆ. ಆದರೂ, ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರ ಅನಾವಶ್ಯಕವಾಗಿ ದುಡ್ಡು ಖರ್ಚು ಮಾಡದೇ, ಅರ್ಥಪೂರ್ಣವಾಗಿ ಅಂದಿನ ಕಾಂಗ್ರೆಸ್ ಅಧಿವೇಶನ ನೆನಪಿಸುವ ನಿಟ್ಟಿನಲ್ಲಿ ಆಯೋಜಿಸಲಿ" ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಸುಭಾಷ ಕುಲಕರ್ಣಿ ಪ್ರತಿಕ್ರಿಯೆ (ETV Bharat)

ಶತಮಾನೋತ್ಸವಕ್ಕೆ‌ ₹25 ಕೋಟಿ ಬಿಡುಗಡೆ: ಡಿ.26, 27ರಂದು ನಡೆಯಲಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಈಗಾಗಲೇ 25 ಕೋಟಿ ರೂ.‌ ಸರ್ಕಾರ ಬಿಡುಗಡೆ ಮಾಡಿದೆ ಎಂದು‌ ಶತಮಾನೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಸಚಿವ ಹೆಚ್‌.ಕೆ.ಪಾಟೀಲ ತಿಳಿಸಿದ್ದಾರೆ. ಅಲ್ಲದೇ 4 ಕೋಟಿ ರೂ ವೆಚ್ಚದಲ್ಲಿ ಸುವರ್ಣ ವಿಧಾನಸೌಧದ ಬಳಿ ಗಾಂಧೀಜಿ ಪುತ್ಥಳಿ ಪ್ರತಿಷ್ಠಾಪಿಸಲಾಗುತ್ತಿದೆ. ಅಧಿವೇಶನ ನಡೆದ ಸ್ಥಳ ವೀರಸೌಧ, ಹುದಲಿ ಸೇರಿ ಜಿಲ್ಲೆಯಲ್ಲಿನ ಗಾಂಧೀಜಿ ಕುರುಹುಗಳ ಅಭಿವೃದ್ಧಿಗೂ ಸರ್ಕಾರ ಮುಂದಾಗಿದೆ. ವರ್ಷವಿಡೀ 'ಗಾಂಧಿ ಭಾರತ' ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇನ್ನೂ ಹೆಚ್ಚು ಖರ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಬರಾಕ್ ಒಬಾಮಾ ಅವರನ್ನೇ ರಾಜ್ಯ ಸರ್ಕಾರ ಆಹ್ವಾನಿಸಿದ್ದೇಕೆ? - CENTENARY OF BELAGAVI SESSION

ETV Bharat Logo

Copyright © 2024 Ushodaya Enterprises Pvt. Ltd., All Rights Reserved.