ETV Bharat / state

ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ 'ಅತ್ಯುತ್ತಮ ಶಾಸಕ ಪ್ರಶಸ್ತಿ' ಪ್ರದಾನ - BEST MLA AWARD

ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಸುವರ್ಣಸೌಧದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ
ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ (ETV Bharat)
author img

By ETV Bharat Karnataka Team

Published : 5 hours ago

ಬೆಳಗಾವಿ: ರಾಜ್ಯ ಸರ್ಕಾರ ದೆಹಲಿ ವಿಶೇಷ ಪ್ರತಿನಿಧಿ, ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಸುವರ್ಣಸೌಧದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ವಿಧಾನಸಭೆಯಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೇರಿದಂತೆ ವಿವಿಧ ಗಣ್ಯರು ಟಿ.ಬಿ.ಜಯಚಂದ್ರ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿದರು.

ಶಾಸಕ ಜಯಚಂದ್ರ ಅವರ ಸಮಯಪಾಲನೆ ಹಾಗೂ ಶಿಸ್ತುಬದ್ದ ಕಾರ್ಯ ನಿರ್ವಹಣೆ, ಕಲಾಪದಲ್ಲಿ ಅವರು ತೊಡಗಿಸಿಕೊಳ್ಳುವ ರೀತಿಯ ಬಗ್ಗೆ ಕೊಂಡಾಡಿದರು. ಸದನದಲ್ಲಿ ಹಾಜರಿದ್ದು ಸಭೆಯ ಗಾಂಭೀರ್ಯತೆ ಕಾಪಾಡುವುದರ ಮೂಲಕ ಕಿರಿಯ ಶಾಸಕರಿಗೆ ತೋರಿದ ಮಾರ್ಗದರ್ಶನ ಮೆಚ್ಚುವಂಥದ್ದು ಎಂದು ಸ್ಪೀಕರ್ ಅಭಿಪ್ರಾಯಪಟ್ಟರು.

ಟಿ.ಬಿ.ಜಯಚಂದ್ರ ಅವರು ಕಳ್ಳಂಬೆಳ್ಳ ಮತ್ತು ಶಿರಾದಿಂದ ಒಟ್ಟು 7 ಬಾರಿ ಶಾಸಕರಾಗಿದ್ದು, ಅವರು ರಾಜ್ಯದಲ್ಲಿ ಸಚಿವರಾಗಿ ಕೃಷಿ, ಸಂಸದೀಯ ವ್ಯವಹಾರ ಖಾತೆಗಳನ್ನು ನಿರ್ವಹಿಸಿದ್ಧಾರೆ. ವಿವಿಧ ನಿಗಮ ಮಂಡಳಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ದೆಹಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಸದನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇದಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ್​, ಉಪಸಭಾಪತಿ ರುದ್ರಮಪ್ಪ ಲಮಾಣಿ ಸಾಕ್ಷಿಯಾದರು. ಸದನದಲ್ಲಿ ಉಪಸ್ಥಿತರಿದ್ದ ಸರ್ವ ಸದಸ್ಯರು ಮೇಜುಕುಟ್ಟಿ ಅಭಿನಂದಿಸಿದರು.

ಇದನ್ನೂ ಓದಿ: ಹೆಚ್ಚುವರಿ ತೆರಿಗೆ ವಿಧಿಸುವ 'ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ' ವಿಧೇಯಕ ಅಂಗೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.