ETV Bharat / state

ತಮಿಳುನಾಡು ಕೇಳಿದರೂ, ಕೇಂದ್ರ ಸರ್ಕಾರ ಹೇಳಿದ್ರೂ ಕಾವೇರಿ ನೀರು ಬಿಡಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ - CM Siddaramaiah reaction

ನೀರು ಇದ್ದರಲ್ಲವೇ ಕೊಡೋದು, ತಮಿಳುನಾಡಿಗೆ ಒಂದು ತೊಟ್ಟು ನೀರು ಸಹ ಕೊಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

CM Siddaramaiah
ಸಿಎಂ ಸಿದ್ದರಾಮಯ್ಯ
author img

By ETV Bharat Karnataka Team

Published : Mar 12, 2024, 5:15 PM IST

ಚಾಮರಾಜನಗರ: "ಸಂವಿಧಾನ ಬದಲಿಸುವುದು ಬಿಜೆಪಿ ಹಿಡನ್ ಅಜೆಂಡಾ, ಸಂಸದ ಅನಂತ ಕುಮಾರ್ ಹೆಗಡೆ ಮೂಲಕ ಹೇಳಿಸುತ್ತಿದ್ದಾರೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅನಂತ ಕುಮಾರ್ ಹೆಗಡೆ ಸಾಮಾನ್ಯ ವ್ಯಕ್ತಿ ಅಲ್ಲ, 5 ಬಾರಿ ಸಂಸದರಾಗಿದ್ದವರು, ಸಚಿವರಾಗಿದ್ದವರು. ಅಂತಹ ವ್ಯಕ್ತಿ ಸಂವಿಧಾನ ಬದಲಿಸುವ ವಿಚಾರ ಹೇಳಬೇಕಾದರೆ ಪಕ್ಷದ ತೀರ್ಮಾನ ಆಗಿರದೇ, ತಾವೇ ವೈಯಕ್ತಿಕವಾಗಿ ಹೇಳಲು ಆಗುತ್ತಾ? ಬಿಜೆಪಿಯವರು ಅವರ ವಿರುದ್ಧ ಏನಾದರೂ ಕ್ರಮ ತೆಗೆದುಕೊಂಡರಾ?" ಎಂದು ಪ್ರಶ್ನೆ ಮಾಡಿದರು.

"ಮನುಸ್ಮೃತಿ ಮೇಲೆ ನಂಬಿಕೆ ಇಟ್ಟಿರುವ ಪಕ್ಷ ಅದಾಗಿದ್ದು, ಮನುವಾದದಲ್ಲಿ ನಂಬಿಕೆ ಇಟ್ಟವರು. ಸಂವಿಧಾನ ಜಾರಿಯಾದ ದಿನದಿಂದಲೂ ಅವರು ಸಂವಿಧಾನ ವಿರೋಧ ಮಾಡಿಕೊಂಡೇ ಬಂದಿದ್ದಾರೆ. ಈಗ ಅನಂತ ಕುಮಾರ್ ಹೆಗಡೆ ಮೂಲಕ ಹೇಳಿಸುತ್ತಿದ್ದಾರೆ" ಎಂದರು. "ಸಿಎಎ ಅನ್ನು ಈಗ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಏಕೆ ಜಾರಿ ಮಾಡಬೇಕಿತ್ತು? ಧರ್ಮದ ಆಧಾರದ ಮೇಲೆ ಪೌರತ್ವ ಕೊಡಲು ನಮ್ಮ ವಿರೋಧವಿದೆ" ಎಂದು ಸಿಎಎ ಜಾರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ ಎಂಬ ಆರ್.ಆಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿ, "ಯಾರಾದರೂ ಕದ್ದು ಮುಚ್ಚಿ ನೀರು ಬಿಡುತ್ತಾರಾ? ನೀರು ಇದ್ದರಲ್ಲವೆ ಬಿಡೋದು? ಅವರು ಹೇಳುವುದು ಸುಳ್ಳು, ತಮಿಳುನಾಡಿಗೆ ತೊಟ್ಟು ನೀರು ಕೊಡುವುದಿಲ್ಲ. ಕುಡಿಯಲು ನೀರು ಇಟ್ಟುಕೊಳ್ಳದೇ ನಾವು ಕೊಡುವುದಿಲ್ಲ. ಅವರು ನೀರು ಕೊಡಿ ಎಂದು ಕೇಳಿಯೂ ಇಲ್ಲ. ಸುಖಾ - ಸುಮ್ಮನೇ ಯಾಕೆ ನೀರು ಕೊಡುತ್ತೇವೆ? ತಮಿಳುನಾಡಿಗೆ ನೀರು ಕೊಡುವ ಪ್ರಶ್ನೆಯೇ ಇಲ್ಲ. ತಮಿಳುನಾಡು ಸರ್ಕಾರ ಕೇಳಿದರೂ ನೀರು ಕೊಡಲ್ಲ. ಕೇಂದ್ರ ಹೇಳಿದರು ನೀರು ಕೊಡಲ್ಲ. ಯಾರೂ ಹೇಳಿದರು ನೀರು ಕೊಡಲ್ಲ" ಎಂದರು.

"ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಾರೆ ಎಂದು ಬಿಜೆಪಿಯವರು ಅಭ್ಯರ್ಥಿ ಬದಲಾವಣೆ ಮಾಡುತ್ತಿರಬಹುದು. ಆ ಬಗ್ಗೆ ನನಗೆ ಗೊತ್ತಿಲ್ಲ. ಯದುವೀರ್ ಅವರು ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂದು ಮಾಧ್ಯಮವರೇ ಸೃಷ್ಟಿ ಮಾಡಿಕೊಂಡು ಹೇಳುತ್ತಿದ್ದೀರಿ. ಹೊಂದಾಣಿಕೆ ರಾಜಕೀಯ ಎಂದರೆ ಹೇಗೆ?" ಎಂದು ಕಿಡಿಕಾರಿದರು.

ತಾನು ಎಂಪಿಯಾದರೇ ಸಿಎಂ ಕುರ್ಚಿ ಅಲುಗಾಡಲಿದೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಟಾಂಗ್ ನೀಡಿ, "ಎರಡು ಸಾರಿ ಎಂಪಿ ಆಗಿದ್ದಾರಲ್ಲ ನನ್ನ ಕುರ್ಚಿ ಅಲುಗಾಡಲೇ ಇಲ್ಲ. ಕ್ಯಾಂಡಿಡೇಟ್ ಯಾರದಾರೂ ಆಗಲಿ ನಾವು ಈ ಬಾರಿ ಬಿಜೆಪಿಯನ್ನು ಸೋಲಿಸುತ್ತೇವೆ" ಎಂದರು.

ಇದನ್ನೂ ಓದಿ: ಅನಂತ್‌ ಕುಮಾರ್‌ ಹೆಗಡೆ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು: ಮುಖ್ಯಮಂತ್ರಿ ಚಂದ್ರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.