ETV Bharat / state

ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ‌ ಇಯುಎಸ್‌ ಎಂಡೋಸ್ಕೋಪಿ, ಅಲ್ಟ್ರಾಸೌಂಡ್‌ ಹೊಸ ಟೆಕ್ನಾಲಾಜಿ ಆರಂಭ - new technology launched at KLE - NEW TECHNOLOGY LAUNCHED AT KLE

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಇಯುಎಸ್‌ ಎಂಡೋಸ್ಕೋಪಿ ಮತ್ತು ಅಲ್ಟ್ರಾಸೌಂಡ್‌ನ ನೂತನ ಸೇವೆಗೆ ಹೆಚ್‌ ಎನ್‌ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಇನ್ಸಿಟ್ಯೂಟ್‌ ಆಫ್‌ ಗ್ಯಾಸ್ಟ್ರೋಸೈನ್ಸ್ ಮುಖ್ಯಸ್ಥ ಡಾ. ಅಮಿತ ಮೆಡಿಯೋ ಚಾಲನೆ ನೀಡಿದರು.

EUS Endoscopy Ultrasound service started at Prabhakar Kore Hospital
ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಇಯುಎಸ್‌ ಎಂಡೋಸ್ಕೋಪಿ ಅಲ್ಟ್ರಾಸೌಂಡ್‌ನ ಸೇವೆ ಆರಂಭ (ETV Bharat)
author img

By ETV Bharat Karnataka Team

Published : May 22, 2024, 9:15 PM IST

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೋ ಎಂಟ್ರಾಲಾಜಿ ವಿಭಾಗದಲ್ಲಿ ನೂತನವಾಗಿ ಅಳವಡಿಸಿರುವ ಇಯುಎಸ್‌ ಎಂಡೋಸ್ಕೋಪಿ ಮತ್ತು ಅಲ್ಟ್ರಾಸೌಂಡ್‌ನ ನೂತನ ವೈದ್ಯಕೀಯ ಸೇವೆಗೆ ಹೆಚ್‌ ಎನ್‌ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಇನ್ಸಿಟ್ಯೂಟ್‌ ಆಫ್‌ ಗ್ಯಾಸ್ಟ್ರೋಸೈನ್ಸ್ ಮುಖ್ಯಸ್ಥರು ಹಾಗೂ ಎಂಡೋಸ್ಕೋಪಿ ತಜ್ಞ ವೈದ್ಯರಾದ ಡಾ. ಅಮಿತ ಮೆಡಿಯೋ ಚಾಲನೆ ನೀಡಿದರು.

ನೂತನ ಸೇವೆ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆ ವೈದ್ಯ ವಿಜ್ಞಾನ ಸಾಕಷ್ಟು ಪ್ರಗತಿ ಹೊಂದುತ್ತಿದೆ. ಅದರಂತೆ ಆಹಾರ ಪದ್ದತಿ ಹಾಗೂ ಜೀವನ ಶೈಲಿಯಿಂದ ಲೀವರ್ ಸಮಸ್ಯೆಗಳು ಅಧಿಕಗೊಳ್ಳುತ್ತಿವೆ. ಹಾಗಾಗಿ ಅದರ ಕುರಿತು ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಮೆಟ್ರೋ ನಗರಗಳಲ್ಲಿ ಇರುವಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡ ಆಸ್ಪತ್ರೆ ಇಲ್ಲಿದೆ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಕಾರ್ಯ ಅತ್ಯಂತ ಶ್ಲಾಘನೀಯ. ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭಿಸುತ್ತಿರುವುದು ಈ ಭಾಗದ ಜನರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದೆ ಎಂದು ಶ್ಲಾಘಿಸಿದರು.

ಡಾ. ಪ್ರಭಾಕರ ಕೋರೆ ಮಾತನಾಡಿ, ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಈ ಭಾಗದ ಜನರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಲೀವರ್ ಸಮೇತ ಬಹುವಿಧ ಅಂಗಾಂಗಳನ್ನು ಕಸಿ ಮಾಡುವ ಕೇಂದ್ರ ಇದೊಂದೇ. ಇಂತಹ ಅತ್ಯಾಧುನಿಕ ಯಂತ್ರವು ಬೆಳಗಾವಿ ಮತ್ತು ಸುತ್ತ ಮುತ್ತಲಿನ ಜನರಿಗೆ ಆರಂಭಿಕ ರೋಗ ನಿರ್ಣಯ ಮತ್ತು ಜಿಐ ರೋಗಗಳ ನಿರ್ವಹಣೆಗೆ ಉಪಯುಕ್ತವಾಗಿದೆ ಎಂದು ಹೇಳಿದರು.

ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಾಜಿ ಹಿರಿಯ ತಜ್ಞವೈದ್ಯ ಡಾ. ಸಂತೋಷ್ ಹಜಾರೆ ಮಾತನಾಡಿ,ನೂತನವಾಗಿ ಅಳವಡಿಸಲಾದ ಇಯುಎಸ್‌ ಎಂಡೋಸ್ಕೋಪಿ ಮತ್ತು ಅಲ್ಟ್ರಾಸೌಂಡ್‌ ಬೆಳಗಾವಿಯಲ್ಲಿ ಪ್ರಥಮವಾಗಿದ್ದು, ಇದು ಜಿಐ ಟ್ರಾಕ್ಟ್‌ನ ಅಕ್ಕ ಪಕ್ಕದ ರಚನೆಗಳನ್ನು ಪರಿಶೀಲಿಸಿ, ಆರಂಭಿಕ ಹಂತದಲ್ಲಿಯೇ ರೋಗನಿರ್ಣಯಕ್ಕೆ ಸಹಾಯ ಮಾಡುತ್ತದೆ. ಹಾನಿಕಾರಕವಲ್ಲದ ಮತ್ತು ಕ್ಯಾನ್ಸರ್ ಗೆಡ್ಡೆಗಳ ನಡುವಿನ ವ್ಯತ್ಯಾಸವನ್ನು ಗಮನಿಸಿ ಸರಿಯಾದ ಮಾಹಿತಿ ನೀಡುತ್ತದೆ. ಕುಳಿಗಳಲ್ಲಿ ಕೀವು ಹೊರತೆಗೆಯಲು, ಬಯಾಪ್ಸಿ ತಪಾಸಣೆ ಹಾಗೂ ಆಂತರಿಕ ನಾಳಗಳಲ್ಲಿ ಉಂಟಾಗುವ ತುರ್ತು ರಕ್ತಸ್ರಾವವನ್ನು ನಿಲ್ಲಿಸಲು ಸಹಕರಿಸುತ್ತದೆ ಎಂದು ತಿಳಿಸಿದ್ದಾರೆ. ಈ ವೇಳೆ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವ್ಹಿ. ಜಾಲಿ, ಡಾ. ಸುದರ್ಶನ ಚೌಗಲಾ, ಡಾ. ರಾಜಶೇಖರ ಸೋಮನಟ್ಟಿ ಸೇರಿ ಮತ್ತಿತರರು ಇದ್ದರು.

ಇದನ್ನೂಓದಿ:ಡಿಸಿಇಟಿ 2024: ಜೂನ್ 22ರಂದು ಆಫ್ ಲೈನ್ ಪರೀಕ್ಷೆ, ಈ ಜಿಲ್ಲೆಗಳಲ್ಲಿ ಮಾತ್ರ ನಡೆಯುತ್ತೆ ಎಕ್ಸಾಂ - DCET 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.