ETV Bharat / state

ಜ್ಞಾನವಾಪಿ ಪ್ರಕರಣ: ವಾರಾಣಸಿ ಕೋರ್ಟ್​ ಆದೇಶಕ್ಕೆ ಬಿಜೆಪಿ ನಾಯಕರಿಂದ ಸ್ವಾಗತ

ಜ್ಞಾನವಾಪಿ ಮಸೀದಿ ಪ್ರದೇಶದಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಾಣಸಿ ಜಿಲ್ಲಾ ಕೋರ್ಟ್ ತೀರ್ಪಿಗೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.

Etv Bharateshawarppa-and-ct-ravi-reaction-on-court-order-in-gyanvapi-mosque-case
ಜ್ಞಾನವಾಪಿ ಪ್ರಕರಣ: ವಾರಾಣಸಿ ಕೋರ್ಟ್​ ಆದೇಶಕ್ಕೆ ಬಿಜೆಪಿ ನಾಯಕರಿಂದ ಸ್ವಾಗತ
author img

By ETV Bharat Karnataka Team

Published : Jan 31, 2024, 8:56 PM IST

Updated : Jan 31, 2024, 10:45 PM IST

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ರಾಯಚೂರು/ಚಿಕ್ಕಮಗಳೂರು: ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾರಾಣಸಿ ನ್ಯಾಯಾಲಯವು ನೀಡಿದ ಆದೇಶವು ಎಲ್ಲ ಹಿಂದೂಗಳಿಗೆ ಸಂತೋಷದ ವಿಷಯವಾಗಿದೆ. ಕಾನೂನು ಮತ್ತು ಸಂವಿಧಾನ ನಂಬಿಕೊಂಡು ಬಂದಿರುವ ದೇಶ ಭಾರತ, ಇದರಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ರಾಯಚೂರಿನ ಪ್ರವಾಸ ಮಂದಿರದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶಿ ವಿಶ್ವನಾಥನ ದೇವಸ್ಥಾನ ಒಡೆದು ಮಸೀದಿ ಕಟ್ಟಿರುವ ಬಗ್ಗೆ ವಾದ, ವಿವಾದಗಳು ನಡೆದವು. ಇಂದು ವಾರಾಣಸಿ ಜಿಲ್ಲಾ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಪುರಾತನ ಇಲಾಖೆಯ 800 ಪುಟಗಳ ವರದಿ ಆಧರಿಸಿ ಕೋರ್ಟ್ ತೀರ್ಪು ಕೊಟ್ಟಿದೆ. ಮುಂದಿನ ಏಳು ದಿನಗಳಲ್ಲಿ ಪೂಜೆಗೆ ಅವಕಾಶ ನೀಡಲಾಗಿದೆ ಎಂದರು.

ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ಅನೇಕ ವಿಚಾರ ಹೇಳುತ್ತಾ ಬಂದಿದೆ. ಬಿಜೆಪಿಯವರು ರಾಮಮಂದಿರ ಕಟ್ಟುವುದೇ ಇಲ್ಲ, ಬರೀ ಚುನಾವಣೆ ವೇಳೆಯಲ್ಲಿ ಮಾತ್ರ ರಾಮಮಂದಿರದ ವಿಚಾರ ತೆಗೆಯುತ್ತಾರೆ. ರಾಮಮಂದಿರದ ಕೋರ್ಟ್ ತೀರ್ಪು ಬಂದ ಮೇಲೆ, ರಾಮ ಮಂದಿರ ಕಟ್ಟುತ್ತೇವೆ ಎಂದು ಹೇಳುತ್ತಾರೆ ತಾರೀಖು ಹೇಳುವುದಿಲ್ಲ ಎಂದು ಟೀಕಿಸುತ್ತಿದ್ದರು. ಈಗ ಭವ್ಯ ರಾಮಮಂದಿರ ನಿರ್ಮಾಣ ಆಗಿದೆ. ಈಗ ಬಿಜೆಪಿಯ ರಾಮನೆಂದು ಹೇಳಲು ಶುರು ಮಾಡಿದ್ದಾರೆ. ರಾಮಮಂದಿರ ವಿಚಾರದಲ್ಲಿ ಮಾಡಿದ ತಪ್ಪು, ಕಾಶಿ ವಿಶ್ವನಾಥನ ವಿಚಾರದಲ್ಲಿ ಮಾಡಬೇಡಿ. ಯಾವುದೇ ಕಾರಣಕ್ಕೂ, ಸಹ ಸಮಾಜ ಒಡೆಯಬೇಡಿ. ಎಲ್ಲರೂ ಒಟ್ಟಾಗಿ ಕಾಶಿಯಲ್ಲಿ ದೇವಸ್ಥಾನ ಕಟ್ಟೋಣ ಎಂದು ಹೇಳಿದರು.

ಸಿ.ಟಿ ರವಿ ಪ್ರತಿಕ್ರಿಯೆ: ವಾರಾಣಸಿ ನ್ಯಾಯಾಲಯದ ತೀರ್ಪಿನ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ಜ್ಞಾನವ್ಯಾಪಿ ಮಸೀದಿಯು ಈ ಹಿಂದೆ ದೇವಾಲಯವಾಗಿತ್ತು. ಹೀಗೆಯೇ 42,000 ಹಿಂದೂ ದೇವಾಲಯ ನಾಶ ಮಾಡಲಾಗಿದೆ. ಈ ಬಗ್ಗೆ ಸೀತಾರಾಮ್ ಗೋಯಲ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂದರು.

ಸಿ.ಟಿ ರವಿ ಪ್ರತಿಕ್ರಿಯೆ

ನಾನು ಹಿಂದೂ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ತನ್ನ ನಿಲುವು ತಿಳಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಸತ್ಯಕ್ಕೆ ಎಂದಿಗೂ ಜಯ, ಅದು ಸೋಲಲೂ ಸಾಧ್ಯವಿಲ್ಲ. ಇದು ಜಗದ ನಿಯಮ. ಸತ್ಯ ಹಾಗೂ ಧರ್ಮದ ಪರವಾಗಿ ಪಾಂಡವರು ಗೆದ್ದಿದ್ದಾರೆ. ಕಾಂಗ್ರೆಸ್ ಅಸತ್ಯದ ಪರವಾಗಿ ನಿಂತಿದ್ದು, ಹೀಗಾಗಿ ರಾಜಕೀಯವಾಗಿ ನಾಶವಾಗಿ ಹೋಯಿತು ಎಂದು ಸಿ ಟಿ ರವಿ ಹೇಳಿದ್ದಾರೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಆವರಣದಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಿಂದೂಗಳಿಗೆ ಕೋರ್ಟ್​ ಅವಕಾಶ

Last Updated : Jan 31, 2024, 10:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.