ETV Bharat / state

ದೇಶದಲ್ಲೇ ಮೊದಲ ಬಾರಿಗೆ ಕಾರ್ಪೊರೇಟ್‌ ಸಿಬ್ಬಂದಿ ಸಾರಿಗೆಗೆ ಇವಿ ಬಸ್‌ ಸೇವೆ - EV Bus Service - EV BUS SERVICE

ಕಾರ್ಪೊರೇಟ್‌ ಸಿಬ್ಬಂದಿ ಸಾರಿಗೆಗೆ ಬೆಂಗಳೂರಿನ ಎನ್‌ವಿಎಸ್‌ ಟ್ರಾವೆಲ್‌ ಸೊಲ್ಯೂಷನ್ಸ್‌ ವಿದ್ಯುಚ್ಚಾಲಿತ (ಇವಿ) ಬಸ್‌ ಸೇವೆ ಆರಂಭಿಸಿದೆ.

electronic bus
ಇವಿ ಬಸ್‌ (ETV Bharat)
author img

By ETV Bharat Karnataka Team

Published : Jun 16, 2024, 7:49 AM IST

ಬೆಂಗಳೂರು: ಶಾಲಾ ಮಕ್ಕಳು ಮತ್ತು ಕಾರ್ಪೊರೇಟ್‌ ಸಿಬ್ಬಂದಿ ಸಾರಿಗೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಎನ್‌ವಿಎಸ್‌ ಟ್ರಾವೆಲ್‌ ಸೊಲ್ಯೂಷನ್ಸ್‌ ದೇಶದಲ್ಲಿಯೇ ಮೊದಲ ಬಾರಿಗೆ ವಿದ್ಯುಚ್ಚಾಲಿತ (ಇವಿ) ಬಸ್‌ಗಳನ್ನು ಪರಿಚಯಿಸಿದೆ. ಇವಿ ಬಸ್‌ ತಯಾರಕ ಕಂಪೆನಿಯಾಗಿರುವ ಐಷರ್‌ ಮೊದಲ ಬ್ಯಾಚ್​ನ ಬಸ್‌ಗಳನ್ನು ಶನಿವಾರ ಎನ್‌ವಿಎಸ್‌ ಟ್ರಾವೆಲ್‌ ಸೊಲ್ಯೂಷನ್ಸ್‌ಗೆ ಹಸ್ತಾಂತರಿಸಿತು.

ಮೊದಲ ಬಸ್‌ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ವಿಎಸ್‌ ಟ್ರಾವೆಲ್‌ ಸೊಲ್ಯೂಷನ್ಸ್ ಸ್ಥಾಪಕ ಮತ್ತು ಸಿಇಒ ಎನ್‌.ವಿ.ನಾಗರಾಜ್‌, ''ಇವಿ ಬಸ್‌ಗಳಿಗೆ ಸರ್ಕಾರ ಸಹಾಯಧನ ನೀಡುವುದಿಲ್ಲ. ಹಾಗಾಗಿ, ಈ ಬಸ್‌ಗಳು ದುಬಾರಿಯಾಗಿವೆ. ಅನೇಕ ಕಂಪೆನಿಗಳು ಸುಸ್ಥಿರ ಮತ್ತು ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಒಲವು ಹೊಂದಿದ್ದು, ಇವಿ ಬಸ್‌ಗಳು ಸಾಮಾನ್ಯ ಬಸ್‌ಗಳಿಗಿಂತ ಮೂರ್ನಾಲ್ಕು ಪಟ್ಟು ದುಬಾರಿಯಾಗುವುದರಿಂದ ತಾವೇ ಖರೀದಿಸಲು ಮುಂದಾಗುತ್ತಿಲ್ಲ. ಖಾಸಗಿ ಸೇವಾ ಸಂಸ್ಥೆಗಳೂ ಇದೇ ಕಾರಣಕ್ಕೆ ಹಿಂದೇಟು ಹಾಕುತ್ತವೆ. ಆದರೆ, ವಿನೂತನ ವಹಿವಾಟು ಮಾದರಿಯೊಂದನ್ನು ಅಭಿವೃದ್ಧಿಪಡಿಸಿದ್ದು, ಆ ಮೂಲಕ ಖಾಸಗಿ ಕಂಪೆನಿಗಳು ಮತ್ತು ಉತ್ಪಾದಕ ಕಂಪೆನಿಗಳ ಕಾರ್ಬನ್‌ ಫುಟ್‌ಪ್ರಿಂಟ್‌ ಇಳಿಕೆಯ ಗುರಿ ಈಡೇರಿಕೆಗೆ ನೆರವಾಗಲು ಪ್ರಯತ್ನಿಸುತ್ತಿದ್ದೇವೆ'' ಎಂದು ತಿಳಿಸಿದರು.

''ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಎನ್‌ವಿಎಸ್‌ ಸಿಬ್ಬಂದಿ ಸಾರಿಗೆ ಸೊಲ್ಯೂಷನ್‌ ಪರಿಚಯಿಸಿದ್ದು ವಿಶ್ವಾಸಾರ್ಹತೆ, ಸಮಯದ ನಿಖರತೆ, ಸುರಕ್ಷತೆ ಮತ್ತು ಸ್ಪರ್ಧಾತ್ಮಕ ಬೆಲೆಗೆ ಒತ್ತು ನೀಡುತ್ತಿದ್ದೇವೆ. ಸೇವೆಗಾಗಿ ಹಲವು ಆಯ್ಕೆಗಳನ್ನು ನಾವು ಗ್ರಾಹಕ ಕಂಪೆನಿಗಳಿಗೆ ಒದಗಿಸುತ್ತಿದ್ದೇವೆ'' ಎಂದು ಹೇಳಿದರು.

''ಕಾರ್ಪೊರೇಟ್‌ ಸಿಬ್ಬಂದಿ ಸಾರಿಗೆ ಕ್ಷೇತ್ರದಲ್ಲಿ ಇವಿ ಬಸ್‌ಗಳ ಪರಿಚಯ ಸ್ವಚ್ಛ ಮತ್ತು ಪರಿಸರಸ್ನೇಹಿ ಭವಿಷ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಕಾರ್ಪೊರೇಟ್‌ ಸಾರಿಗೆ ಕ್ಷೇತ್ರದಲ್ಲಿ ಇದು ಹೊಸ ಬೆಂಚ್‌ಮಾರ್ಕ್‌ ಸೃಷ್ಟಿಸಲಿದೆ. ದೇಶದ ಕಾರ್ಪೊರೇಟ್‌ ಸಾರಿಗೆ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಲಿದೆ'' ಎಂದರು.

electronic bus
ಇವಿ ಬಸ್‌ (ETV Bharat)

''2007ರಲ್ಲಿ ಆರಂಭವಾದ ಎನ್‌ವಿಎಸ್‌ ಪ್ರಸ್ತುತ ಬಸ್‌, ಮಿನಿಬಸ್‌ ಮತ್ತು ಕಾರುಗಳು ಸೇರಿದಂತೆ ಸುಮಾರು 900 ಬಸ್‌ ಹಾಗೂ 500ಕ್ಕೂ ಹೆಚ್ಚು ವಾಹನಗಳ ಒಡೆತನ ಹೊಂದಿದೆ. ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾಸಗಿ ತಂತ್ರಜ್ಞಾನ ಅಪ್ಲಿಕೇಷನ್‌ ಪರಿಚಯಿಸಿದ ಕೀರ್ತಿ ಹೊಂದಿದೆ. ಕಂಪೆನಿಯ ರೂರೈಡ್ಸ್ ಅಪ್ಲಿಕೇಷನ್‌ ಮೂಲಕ ಎನ್‌ವಿಎಸ್‌ ಸಂಕೀರ್ಣವಾಗಿರುವ ಕಾರ್ಪೊರೇಟ್‌ ಸಿಬ್ಬಂದಿ ಮತ್ತು ಶಾಲಾಮಕ್ಕಳ ಸಾರಿಗೆಯನ್ನು ಸರಳಗೊಳಿಸಿದ್ದು, ಬಳಕೆದಾರರ ಅನುಭವವನ್ನು ವಿಸ್ತರಿಸಿದೆ'' ಎಂದು ಮಾಹಿತಿ ನೀಡಿದರು.

''ಪ್ರಸ್ತುತ ಎಲೆಕ್ಟ್ರಿಕ್‌ ಬಸ್‌ಗಳನ್ನೂ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪರಿಚಯಿಸುವ ಮೂಲಕ ಎನ್‌ವಿಎಸ್‌ ದೇಶದಲ್ಲಿಯೇ ಈ ಸಾಧನೆ ಮಾಡಿದ ಮೊದಲ ಕಂಪೆನಿ ಎನಿಸಿದೆ. ಇವಿ ಬಸ್‌ ವೆಚ್ಚ ಬಹಳ ದುಬಾರಿಯಾಗಿದ್ದು, ಒಂದು ಬಸ್‌ನ ವೆಚ್ಚದಲ್ಲಿ ಮೂರರಿಂದ ನಾಲ್ಕು ಸಾಮಾನ್ಯ ಡೀಸೆಲ್‌ಚಾಲಿತ ಬಸ್‌ಗಳನ್ನು ಖರೀದಿಸಲು ಸಾಧ್ಯವಾಗುವುದರಿಂದ ಆದಾಯ- ವೆಚ್ಚದ ಲೆಕ್ಕಾಚಾರದಲ್ಲಿ ಇವಿ ಬಸ್‌ಗಳನ್ನು ಸಿಬ್ಬಂದಿ ಸಾರಿಗೆಗೆ ಬಳಸುವುದು ಆದಾಯಾತ್ಮಕವಾಗಿ ಸವಾಲಿನ ಸಂಗತಿಯಾಗಿದೆ. ಈ ಕಾರಣಕ್ಕಾಗಿಯೇ ಕೇವಲ ಸರ್ಕಾರಿ ಘಟಕಗಳು ಮಾತ್ರ ಇವಿ ಬಸ್‌ಗಳನ್ನು ಖರೀದಿಸಿವೆ ಅಥವಾ ಉತ್ಪಾದಕರೊಂದಿಗೆ ಒಪ್ಪಂದದ ಮೂಲಕ ಬಳಸುತ್ತಿವೆ'' ಎಂದು ಎನ್‌.ವಿ.ನಾಗರಾಜ್‌ ಹೇಳಿದರು.

ಐಷರ್‌ ಎಕ್ಸಿಕ್ಯೂಟಿವ್‌ ವೈಸ್‌ ಪ್ರೆಸಿಡೆಂಟ್‌ ಸುರೇಶ್‌ ಚೆಟ್ಟಿಯಾರ್‌ ಮಾತನಾಡಿ, ''ಸುಸ್ಥಿರ ಭವಿಷ್ಯಕ್ಕೆ ಇವಿ ಬಸ್‌ಗಳು ಸಹಕಾರಿಯಾಗಿವೆ. ಪರಿಸರಸ್ನೇಹಿ ಮೊಬಿಲಿಟಿ ಮೂಲಕ ಇಂಗಾಲದ ಮಾಲಿನ್ಯವನ್ನು ಗಮನಾರ್ಹವಾಗಿ ತಗ್ಗಿಸಲು ಕಂಪೆನಿಯು ಹಲವು ವಿನೂತನ ಪರ್ಯಾಯ ತಂತ್ರಜ್ಞಾನಗಳನ್ನು ಬಳಸುತ್ತಿದೆ. ಪರಿಸರಸ್ನೇಹಿ ಭವಿಷ್ಯದತ್ತ ಹೆಜ್ಜೆ ಹಾಕಲು ನಮ್ಮ ಗ್ರಾಹಕರಿಗೆ ನೆರವಾಗುತ್ತಿದ್ದೇವೆ'' ಎಂದರು.

ಇದನ್ನೂ ಓದಿ: ನಮ್ಮ ಮೆಟ್ರೋ ಡಬಲ್ ಡೆಕ್ಕರ್ ಮೇಲ್ಸೇತುವೆ ಕಾಮಗಾರಿ ಪೂರ್ಣ; ಶೀಘ್ರದಲ್ಲೇ ಸಂಚಾರ ಆರಂಭ - Namma Metro

ETV Bharat Logo

Copyright © 2025 Ushodaya Enterprises Pvt. Ltd., All Rights Reserved.