ಬೆಂಗಳೂರು: ನಗರದ ಕೆಲಕಡೆಗಳಲ್ಲಿ ನಾಳೆ ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಾರ್ಷಿಕ ನಿರ್ವಹಣಾ ಕೆಲಸವನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಆಗಸ್ಟ್ 11ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ರಾಘವೇಂದ್ರ ಲೇಔಟ್, ಕಮ್ಮಗೊಂಡನಹಳ್ಳಿ, ಧನಪಾಲ್ ಲೇಔಟ್, ಶೆಟ್ಟಿಹಳ್ಳಿ, ಲಕ್ಷ್ಮೀಪುರ ಕ್ರಾಸ್, ಲಕ್ಷ್ಮೀಪುರ ಗ್ರಾಮ, ಶ್ರೀರಾಮ್ ಸಮೀಕ್ಷಾ ಅಪಾರ್ಟ್‌ಮೆಂಟ್, ಸಿಂಗಾಪುರ, ಭದ್ರಸ್ವಾಮಿ ಲೇಔಟ್, ಸಿಂಗಾಪುರ ಗಾರ್ಡನ್, ಅಬ್ಬಿಗೆರೆ ಗ್ರಾಮ, ನಿಸರ್ಗ ಲೇಔಟ್, ಲಕ್ಷ್ಮೀ ದೇವಾಲಯ ರಸ್ತೆ, ಕೆಂಪೇಗೌಡ ಉದ್ಯಾನ, ಕುವೆಂಪುನಗರ, ವೀಶ್ವಯ್ಯಗೌಡರಳ್ಳಿ, ಹೆಚ್.ವಿ.ಕಾನ್ಶಿರಾಮನಗರ, ನೇತಾಜಿ ಲೇಔಟ್, ಸೆವೆನ್ ಹಿಲ್ಸ್ ಕೌಂಟಿ, ಲಕ್ಷ್ಮೀಪುರ ಮುಖ್ಯ ರಸ್ತೆ, ಬ್ರಿಗೇಡ್ ಅಪಾರ್ಟ್‌ಮೆಂಟ್, ಐಸಿಟಿಎಸ್, ಕೆರೆಗುಡ್ಡದಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಸ್ಕಾಂ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, 66/11 ಕೆವಿ ಅಬ್ಬಿಗೆರೆ ಮಸ್ ಸೆಕೆಂಡ್ ರನ್ 11ಕೆವಿ 1000 ಸ್ಕ್ವೇರ್ ಎಂ ಎಂ ಕೇಬಲ್ ಟಿ.ಆರ್ 1 ರಿಂದ ಬ್ಯಾಂಕ್-1 ಮತ್ತು ಟಿ.ಆರ್-2 ರಿಂದ ಬ್ಯಾಂಕ್-2ಗೆ ಐಸೋಲೇಟರ್ ಕೆಲಸ ಮತ್ತು ವಾರ್ಷಿಕ ನಿರ್ವಹಣೆಗಾಗಿ, 11ಕೆವಿ ಬ್ರೇಕರ್, ಬಸ್ ಜಿ.ಒ.ಎಸ್ ನಿರ್ವಹಣೆ ಇರುವುದರಿಂದ ಈ ಉಪಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಲೂಟಿ ಮಾಡುವ ಡಿ.ಕೆ. ಶಿವಕುಮಾರ್ಗೆ ನಾನು ನಾಗರ ಹಾವು ಇದ್ದ ಹಾಗೆ: ಹೆಚ್.ಡಿ. ಕುಮಾರಸ್ವಾಮಿ - H D Kumaraswamy