ರಾಯಚೂರು: ಚುನಾವಣಾ ಕರ್ತವ್ಯ ನಿರತ ಬೂತ್ ಮಟ್ಟದ ಅಧಿಕಾರಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದೇವದುರ್ಗ ತಾಲೂಕಿನ ಜಾಗೀರಜಾಡಲದಿನ್ನಿ ಗ್ರಾಮದ ಮತಗಟ್ಟೆಯಲ್ಲಿ ನಡೆದಿದೆ. ಬಸವರಾಜ್ (56) ಮೃತರು.
ಮುಖ್ಯೋಪಾಧ್ಯಾಯರಾಗಿದ್ದ ಬಸವರಾಜ್ ಅವರನ್ನು ಬಿಎಲ್ಒ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯದ ವೇಳೆ ಏಕಾಏಕಿ ಕುಸಿದುಬಿದ್ದ ಬಸವರಾಜ್ರನ್ನು ಇತರೆ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಈ ವೇಳೆ ಮಾರ್ಗಮಧ್ಯೆಯೇ ಬಸವರಾಜ್ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ದಾವಣಗೆರೆ : ಸಖಿ ವಿಶೇಷ ಮತಗಟ್ಟೆಯಲ್ಲಿ ಮಂಗಳಮುಖಿಯರಿಂದ ಮತದಾನ - TRANSGENDERS VOTING