ETV Bharat / state

ಮಂಗಳೂರು: ನಡುರಸ್ತೆಯಲ್ಲೇ ಇಫ್ತಾರ್ ಕೂಟ, ಆಯೋಜಕರಿಗೆ ಚುನಾವಣಾ ಆಯೋಗ ನೋಟಿಸ್ - Iftar Party - IFTAR PARTY

ಇಫ್ತಾರ್ ಕೂಟದ ಆಯೋಜಕರಿಗೆ ಚುನಾವಣಾ ಆಯೋಗವು ನೋಟಿಸ್ ಜಾರಿ ಮಾಡಿದೆ.

iftar party
ನಡುರಸ್ತೆಯಲ್ಲೇ ಇಫ್ತಾರ್ ಕೂಟ: ಆಯೋಜಕರಿಗೆ ಚುನಾವಣಾ ಆಯೋಗ ನೋಟಿಸ್
author img

By ETV Bharat Karnataka Team

Published : Apr 1, 2024, 3:23 PM IST

Updated : Apr 1, 2024, 6:27 PM IST

ಮಂಗಳೂರು: ನಗರದ ಹೊರವಲಯದಲ್ಲಿರುವ ಮುಡಿಪುವಿನಲ್ಲಿ ನಡುರಸ್ತೆಯಲ್ಲಿ ನಡೆದ ಇಫ್ತಾರ್ ಕೂಟದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಚುನಾವಣಾ ಆಯೋಗವು ಆಯೋಜಕರಿಗೆ ನೋಟಿಸ್ ಜಾರಿಗೊಳಿಸಿದೆ.

ಮುಡಿಪು ಪೇಟೆಯ ರಾಜ್ಯ ಹೆದ್ದಾರಿಯಲ್ಲೇ ಶುಕ್ರವಾರ ಸಂಜೆ 'ಆಟೋ ರಾಜಕನ್ಮಾರ್' ಜಿಲ್ಲಾ ಆಟೋ ಚಾಲಕರ ಸಂಘಟನೆಯು ಸೌಹಾರ್ದ ಇಫ್ತಾರ್ ಕೂಟ ನಡೆಸಿತ್ತು. ಇದರ ವಿಡಿಯೋ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ಇದರ ಬೆನ್ನಲ್ಲೇ ಇಫ್ತಾರ್ ಕೂಟದಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಎಸ್‌.ಜೆ. ಅವರಿಗೆ ಲಿಖಿತ ದೂರು ನೀಡಿದೆ. ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿತ್ತು.

ಸದ್ಯ ಚುನಾವಣಾ ಆಯೋಗದಿಂದ ಇಫ್ತಾರ್ ಕೂಟದ ಆಯೋಜಕರಿಗೆ ಅನುಮತಿ ಪತ್ರ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ನೋಟಿಸ್ ಜಾರಿಯಾಗಿದೆ.

ಇದನ್ನೂ ಓದಿ: ವಿಂಟೇಜ್ ಕಾರ್, ಬೈಕ್ ರ‍್ಯಾಲಿಯ ಮೂಲಕ ಮತದಾನ ಜಾಗೃತಿ - LOK SABHA ELECTION 2024

Last Updated : Apr 1, 2024, 6:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.