ಬಳ್ಳಾರಿ: ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಮನೆ ಹಾಗೂ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸತತ ಎರಡು ದಿನಗಳಿಂದ ದಾಳಿ ನಡೆಸುತ್ತಿದ್ದಾರೆ. ಮೋಕಾ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಎಂಟರ್ಪ್ರೈಸ್ ಹಾಗೂ ಗ್ರಾನೈಟ್ ಕಂಪನಿಯಲ್ಲಿರುವ ಕಚೇರಿಗಳಲ್ಲಿ ಕಡತಗಳ ಪರಿಶೀಲನೆ ನಡೆಯುತ್ತಿದೆ.
2ನೇ ದಿನವೂ ಪರಿಶೀಲನೆ: ನಿನ್ನೆ (ಶನಿವಾರ) ದಿನವಿಡೀ ಅಧಿಕಾರಿಗಳು ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದರು. ಇಂದೂ ಕೂಡ ಶೋಧ ಆರಂಭಿಸಿದ್ದಾರೆ. ಶಾಸಕರ ಮನೆಗೆ ಬಂದ ಕೆಲಸದವರನ್ನು ಭದ್ರತಾ ಸಿಬ್ಬಂದಿ ವಾಪಸ್ ಕಳುಹಿಸಿದರು.
ಇದನ್ನೂ ಓದಿ: ಮಾಸಾಶನ ಪ್ರಮಾಣ ಪತ್ರಕ್ಕೆ ₹6 ಸಾವಿರ ಲಂಚ; ಅಧಿಕಾರಿ ಲೋಕಾಯುಕ್ತ ಬಲೆಗೆ