ETV Bharat / state

ನಿರುದ್ಯೋಗಿ ಯುವಕರಿಗೆ ಡ್ರೋನ್ ವರದಾನ; ಇಫ್ಕೋ ಕಂಪನಿಯ ನೆರವಿನ ಹಸ್ತ - Drone Distribution - DRONE DISTRIBUTION

ಇಫ್ಕೋ ಸಂಸ್ಥೆಯು ಕಿಸಾನ್ ಉಡಾನ್ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಡ್ರೋನ್ ವಿತರಿಸಿದೆ. ಇದರಿಂದಾಗಿ ಸಾಕಷ್ಟು ಯುವಕರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.

DRONE DISTRIBUTION
ನಿರುದ್ಯೋಗಿ ಯುವಕರಿಗೆ ಡ್ರೋನ್ ವರದಾನ (ETV Bharat)
author img

By ETV Bharat Karnataka Team

Published : Aug 21, 2024, 9:43 PM IST

Updated : Aug 22, 2024, 12:34 PM IST

ನಿರುದ್ಯೋಗಿ ಯುವಕರಿಗೆ ಡ್ರೋನ್ ವರದಾನ (ETV Bharat)

ಬೆಳಗಾವಿ: ರೈತರನ್ನು ಅತ್ಯಾಧುನಿಕ ಕೃಷಿಯತ್ತ ಸೆಳೆದಿರುವ ಡ್ರೋನ್, ನವೀನ ಉದ್ಯೋಗ ಅವಕಾಶಗಳನ್ನೂ ಸೃಷ್ಟಿಸಿದೆ. ನಿರುದ್ಯೋಗಿ ಯುವಕರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಫ್ಕೋ ಕಂಪನಿ ಯುವಕರ ಪಾಲಿಗೆ ಬೆಳಕಾಗಿದೆ.

140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಅತೀ ಹೆಚ್ಚು ಯುವಕರಿದ್ದಾರೆ. ಆದರೆ ಯುವಕರಿಗೆ ಸರಿಯಾದ ಉದ್ಯೋಗವಿಲ್ಲ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇದರ ನಡುವೆ ಕೃಷಿ ಚಟುವಟಿಕೆಗಳಿಗೆ ಕೂಲಿಕಾರರು ಸಿಗುತ್ತಿಲ್ಲ. ಹಾಗಾಗಿ, ರೈತರು ಆಧುನಿಕತೆ ಕಡೆ ಮುಖ ಮಾಡುತ್ತಿದ್ದಾರೆ. ಭೂಮಿಯಲ್ಲಿ ರೆಂಟೆ, ಕುಂಟೆ ಹೊಡೆಯಲು, ಕಳೆ ತೆಗೆಯಲು ಯಂತ್ರಗಳನ್ನೇ ಹೆಚ್ಚೆಚ್ಚು ಬಳಸುತ್ತಿದ್ದಾರೆ.

DRONE DISTRIBUTION
ನಿರುದ್ಯೋಗಿ ಯುವಕರಿಗೆ ಡ್ರೋನ್ ವರದಾನ (ETV Bharat)

ನಿರುದ್ಯೋಗಿ ಯುವಕರಿಗೆ ಉದ್ಯೋಗ ಮತ್ತು ರೈತರ ಬೆಳೆಗಳಿಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸುವ ನಿಟ್ಟಿನಲ್ಲಿ ಇಫ್ಕೋ ಸಂಸ್ಥೆ ಕಿಸಾನ್ ಉಡಾನ್ ಯೋಜನೆಯಡಿ ದೇಶಾದ್ಯಂತ 2,500, ರಾಜ್ಯದಲ್ಲಿ 200, ಬೆಳಗಾವಿ ಜಿಲ್ಲೆಯಲ್ಲಿ 20 ಯುವಕರಿಗೆ ಉತ್ತಮ ತರಬೇತಿ ನೀಡಿದೆ. ಅಲ್ಲದೇ ಒಬ್ಬ ಯುವಕನಿಗೆ 1 ಡ್ರೋನ್, 1 ವಿದ್ಯುತ್ ಚಾಲಿತ ತ್ರಿಚಕ್ರ ವಾಹನ, 4 ಬ್ಯಾಟರಿ, 1 ಜನರೇಟರ್​ ಸೇರಿ ಮತ್ತಿತರ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಗಿದೆ.

ಹೀಗೆ ಇಫ್ಕೋ ಸಂಸ್ಥೆಯ ನೆರವಿನೊಂದಿಗೆ ಕೆಲಸ ಆರಂಭಿಸಿರುವ ಯುವಕರು ಸೋಯಾಬಿನ್ ಸೇರಿ ಮತ್ತಿತರ ಬೆಳೆಗಳಿಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸಿ, ಪ್ರತಿದಿನ ಏನಿಲ್ಲ ಎಂದರೂ 5 ಸಾವಿರ ಆದಾಯ ಗಳಿಸುತ್ತಿದ್ದಾರೆ. ಕೆಲಸ ಇಲ್ಲದೇ ಕಂಗಾಲಾಗಿದ್ದ ಇವರೆಲ್ಲಾ ಈಗ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

'ಈಟಿವಿ ಭಾರತ' ಜೊತೆಗೆ ಮಾತನಾಡಿದ ತಾಲೂಕಿನ ಯುವಕ ಅಭಯ್ ಕುಲಕರ್ಣಿ, "ಎರಡು ವರ್ಷ ಬೆಂಗಳೂರಲ್ಲಿ ಕೆಲಸ ಮಾಡಿದ ಬಳಿಕ ಊರಿಗೆ ಬಂದು ಮನೆಯಲ್ಲಿ ಖಾಲಿ ಇದ್ದೆ. ಇಫ್ಕೋ ಕಂಪನಿ ನನಗೆ ಅವಕಾಶ ನೀಡಿತು. ಚನ್ನೈನಲ್ಲಿ 20 ದಿನ ಡ್ರೋನ್ ಫೈಲಟ್ ಟ್ರೇನಿಂಗ್ ನೀಡಿದರು. ಇದಾದ ಒಂದು ತಿಂಗಳ ನಂತರ ಡ್ರೋನ್ ಕೊಟ್ಟರು. ಈ ವೇಳೆ ಡ್ರೋನ್ ನಿರ್ವಹಣೆ ತರಬೇತಿ ನೀಡಿದರು. ನಮಗೆ ಪೆಟ್ರೋಲ್, ಡೀಸೆಲ್ ಹಾಕಲು ಅನಾನುಕೂಲ ಆಗುತ್ತದೆ ಎಂದು ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ಒದಗಿಸಿದ್ದಾರೆ. ಪ್ರತಿ ದಿನ 10 ಎಕರೆ ಔಷಧಿ ಸಿಂಪಡಿಸುತ್ತಿದ್ದೇವೆ. ದಿನಕ್ಕೆ ಕನಿಷ್ಠ 4-5 ಸಾವಿರ ಆದಾಯ ಬರುತ್ತಿದೆ" ಎಂದು ಹೇಳಿದರು‌.

ಮತ್ತೋರ್ವ ಯುವಕ ಹನುಮಂತ ದಳವಾಯಿ ಮಾತನಾಡಿ, "ಇಫ್ಕೋ ಕಂಪನಿ ಆವಿಷ್ಕಾರ ಮಾಡಿರುವ ನ್ಯಾನೋ ಯೂರಿಯಾ ಔಷಧಿ ಸಿಂಪಡಣೆಯಿಂದ ಭೂಮಿ ಫಲವತ್ತತೆ ಉಳಿಯುತ್ತಿದೆ. ಇದರಿಂದ ರೈತರಿಗೆ ಅನುಕೂಲ ಆಗುವುದರ ಜೊತೆಗೆ ನಾವು ಕೂಡ ಬದುಕು ಕಟ್ಟಿಕೊಳ್ಳುತ್ತಿದ್ದೇವೆ" ಎಂದು ಹೇಳಿದರು.

ಇಫ್ಕೋ ಕ್ಷೇತ್ರಾಧಿಕಾರಿ‌ ನವೀನ‌ ಪಾಟೀಲ ಮಾತನಾಡಿ, "ಹೊಲಗಳಲ್ಲಿ ಔಷಧಿ ಸಿಂಪಡಣೆ ಮಾಡಲು ರೈತರಿಗೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಅಲ್ಲದೇ ಹಾವು, ಚೇಳು ಕಡಿಸಿಕೊಂಡು ಅನೇಕ ರೈತರು ಸಾವನ್ನಪ್ಪಿದ ಉದಾಹರಣೆಗಳೂ ಇವೆ. ಹಾಗಾಗಿ, ರೈತರಿಗೆ ಉಪಯೋಗ ಆಗಬೇಕು ಮತ್ತು ಇದ್ದ ಊರಲ್ಲಿ ಯುವಕರಿಗೆ ಕೆಲಸ ನೀಡುವ ಉದ್ದೇಶದಿಂದ ಡ್ರೋನ್ ನೀಡಲಾಗಿದೆ. ತಿಂಗಳಿಗೆ ಸುಮಾರು 60-70 ಸಾವಿರ ರೂ. ಗಳಿಸುತ್ತಿದ್ದಾರೆ. ಈ ಮೊದಲು ರೈತರು 1 ಎಕರೆ ಕೈ ಪಂಪ್​ನಿಂದ ಔಷಧಿ ಸಿಂಪಡಿಸಲು ಐದಾರು ಗಂಟೆ ಬೇಕಾಗುತ್ತಿತ್ತು. ಈಗ ಡ್ರೋನ್​ನಿಂದ ಕೇವಲ 8-10 ನಿಮಿಷದಲ್ಲಿ ಔಷಧಿ ಸಿಂಪಡಿಸಬಹುದು. ಇದರಿಂದ ರೈತರಿಗೆ ಹಣದ ಜೊತೆಗೆ ಸಮಯದ ಉಳಿತಾಯವೂ ಆಗಲಿದೆ" ಎಂದು ವಿವರಿಸಿದರು.

ಇದನ್ನೂ ಓದಿ: ಭಾರತೀಯ ಕೃಷಿಯಲ್ಲಿ ಮಹಿಳಾ ಡ್ರೋನ್​​ ಪೈಲಟ್​ಗಳ ಕ್ರಾಂತಿ

Last Updated : Aug 22, 2024, 12:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.