ದಾವಣಗೆರೆ: ಸಾಕು ನಾಯಿಗಳು ರೈತನ ಜೀವ ಉಳಿಸಿದ ಘಟನೆ ಜಗಳೂರು ತಾಲೂಕಿನ ಬೈರನಾಯಕನಹಳ್ಳಿಯಲ್ಲಿ ನಡೆದಿದೆ. ಹೌದು, ಜಮೀನಿನಲ್ಲಿ ರೈತ ಹನುಮಂತಪ್ಪ ಎಂಬವರು ಕೆಲಸ ಮಾಡುವಾಗ ನಾಲ್ಕು ಕರಡಿಗಳು ಏಕಕಾಲದಲ್ಲಿ ದಾಳಿ ಮಾಡಿವೆ. ಇದನ್ನು ಗಮನಿಸಿದ ಸಾಕು ನಾಯಿಗಳು ಜೋರಾಗಿ ಬೊಗಳಿ ಕರಡಿಗಳನ್ನು ಬೆದರಿಸಿ ರೈತನನ್ನು ರಕ್ಷಿಸಿವೆ.
ಕರಡಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ರೈತ ಹನುಮಂತಪ್ಪನನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಂಗಯ್ಯನ ದುರ್ಗ ಅರಣ್ಯಕ್ಕೆ ಹೊಂದಿಕೊಂಡ ಜಮೀನಿನಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರಡಿಗಳಿದ್ದು, ಇಲ್ಲೊಂದು ಕರಡಿಧಾಮ ಮಾಡುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: 94ನೇ ವಸಂತಕ್ಕೆ ಕಾಲಿಟ್ಟ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ - Shamanur Shivashankarappa Birthday