ETV Bharat / state

ಮೂರು ಕ್ಷೇತ್ರಗಳಲ್ಲಿ ಜನತೆ ವಿಪಕ್ಷಕ್ಕೆ ಉತ್ತರ ಕೊಟ್ಟು, ಅಭಿವೃದ್ಧಿಗೆ ಮನ್ನಣೆ ನೀಡಿದ್ದಾರೆ: ಡಿ.ಕೆ. ಸುರೇಶ್​

ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಜಯಭೇರಿ ಬಾರಿಸಿದೆ. ಈ ಸಂತಸದಲ್ಲಿ ಡಿ.ಕೆ. ಸುರೇಶ್ ಬೆಂಗಳೂರಿನಲ್ಲಿ ಮಾತನಾಡಿದ್ದು, ವಿರೋಧ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

ಡಿ.ಕೆ. ಸುರೇಶ್​ ಗೆಲುವಿನ ಮಾತು
ಡಿ.ಕೆ. ಸುರೇಶ್​ ಗೆಲುವಿನ ಮಾತು (ETV Bharat)
author img

By ETV Bharat Karnataka Team

Published : 4 hours ago

ಬೆಂಗಳೂರು: "ರಾಜ್ಯದ ಮೂರು ಕ್ಷೇತ್ರಗಳಲ್ಲಿ ವಿರೋಧ ಪಕ್ಷಕ್ಕೆ ಜನ ಉತ್ತರ ನೀಡಿದ್ದಾರೆ" ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ ಉಪಚುನಾವಣೆ ಗೆಲುವಿನ ಟಾಂಗ್ ನೀಡಿದ್ದಾರೆ​.

ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮಾಜಿ ಪ್ರಧಾನಿ, ಮಾಜಿ ಸಿಎಂ ಎಲ್ಲರೂ ಸರ್ಕಾರದ ವಿರುದ್ಧ ಆರೋಪ ಮಾಡಿಕೊಂಡು ಬಂದರು. ಇದೀಗ ಜನರ ಅಭಿಪ್ರಾಯ ತಿಳಿಸಿದ್ದಾರೆ. ಈಗಲಾದರೂ ನಮ್ಮ ಪಕ್ಷದ ಮೇಲೆ, ಸಿಎಂ ಮೇಲೆ ಆರೋಪ ಮಾಡೋದು ಬಿಟ್ಟು ಅಭಿವೃದ್ಧಿಗೆ ಸಹಕರಿಸಬೇಕು. ರಾಜ್ಯದ ಮೂರು ಪ್ರದೇಶದಲ್ಲಿ ವಿರೋಧ ಪಕ್ಷಕ್ಕೆ ಉತ್ತರ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಬಿಜೆಪಿ, ಜೆಡಿಎಸ್​​ಗೂ ಜನ ಉತ್ತರ ಕೊಟ್ಟಿದ್ದಾರೆ. ಕುಮಾರಸ್ವಾಮಿ, ಬೊಮ್ಮಾಯಿ ಪುತ್ರ ಇಬ್ಬರಿಗೂ ಉತ್ತರ ಕೊಟ್ಟಿದ್ದಾರೆ" ಎಂದು ಟೀಕಿಸಿದರು.

ಡಿ.ಕೆ. ಸುರೇಶ್​ ಮಾಧ್ಯಮ ಪ್ರತಿಕ್ರಿಯೆ (ETV Bharat)

ಜಮೀರ್​ ಹೇಳಿಕೆ ಮೊದಲ ಸಲ ಅಲ್ಲ: "ಜಮೀರ್​ ಅಹ್ಮದ್​ ಹೇಳಿಕೆ ಇದು ಮೊದಲನೇ ಬಾರಿಯದ್ದಲ್ಲ. ಅವರು ಯಾರ ಮೇಲೆ ಆ ವಿಚಾರವನ್ನು ಹೇಳಿದ್ದರೋ ಅದನ್ನು ಅವತ್ತೇ ಮಾಧ್ಯಮದವರು ಅಥವಾ ಯಾರ ಮೇಲೆ ಆ ವಿಚಾರ ಬಂದಿತ್ತೋ ಅವರಾದರೂ ಹೇಳಬಹುದಿತ್ತು. ಅದು ಬಿಟ್ಟು ಚುನಾವಣೆ ಬಂದಾಗ ನಮ್ಮ ಅಭ್ಯರ್ಥಿಯನ್ನು ಗುರಿಯಾಗಿ ಇಟ್ಟುಕೊಂಡು ಮಾಡುತ್ತಿರುವುದು ಸರಿಯಾ ಎಂಬದು ನಮ್ಮ ವಿಚಾರವಾಗಿತ್ತು" ಎಂದು ಸ್ಪಷ್ಟನೆ ನೀಡಿದರು.

ಜನ ಮನ್ನಣೆ ಕೊಟ್ಟಿದ್ದಾರೆ: "ಅವರ ನಿಲುವು, ಬದ್ಧತೆಗೆ ಕಡಿವಾಣ ಹಾಕಬೇಕು. ರಾಜ್ಯದ ಅಭಿವೃದ್ಧಿಗೆ ಜನ ಮನ್ನಣೆ ಕೊಟ್ಟಿದ್ದಾರೆ. ಗ್ಯಾರಂಟಿ ವಿರುದ್ಧ, ಸಿಎಂ ವಿರುದ್ಧ ಆರೋಪ ಮಾಡುತ್ತಿದ್ದ ಅವರಿಗೆ ಮೂರು ಭಾಗದಿಂದ ಜನ ಸ್ಪಷ್ಟ ಸಂದೇಶ ನೀಡಿದ್ದಾರೆ. ಕಾಂಗ್ರೆಸ್​​ಗೆ ಗೆಲುವು ಕೊಡುವುದರ ಮೂಲಕ ವಿರೋಧ ಪಕ್ಷಗಳಿಗೆ ಉತ್ತರ ನೀಡಿದ್ದಾರೆ. ನೀವು ಮಾಡುವ ಆರೋಪ ಮತ್ತು ಇಲ್ಲ ಸಲ್ಲದ ಹೇಳಿಕೆಗಳು ಸರಿಯಿಲ್ಲ‌ ಅಂತ ಜನ ನಮಗೆ ಮನ್ನಣೆ ನೀಡಿದ್ದಾರೆ".

ಚನ್ನಪಟ್ಟಣದಲ್ಲಿ ಗೆದ್ದ ಸೈನಿಕ-ನಿಖಲ್​ ಗೆ ಹ್ಯಾಟ್ರಿಕ್​ ಸೋಲು; ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಸಿ ಪಿ ಯೋಗೇಶ್ವರ್​ ಗೆದ್ದು ಬೀಗಿದ್ದಾರೆ. ಈ ಹಿಂದೆ 2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆ, 2023ರಲ್ಲಿ ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ನಿಖಲ್​ ಕುಮಾರಸ್ವಾಮಿ ಮೂರನೇ ಬಾರಿಗೆ ಸೋಲುಂಡಿದ್ದಾರೆ.

ಶಿಗ್ಗಾಂವಿಯಲ್ಲಿ ಭರತ್​ ಬೊಮ್ಮಾಯಿಗೆ ಸೋಲು- ಸಿಗ್ಗಾಂವಿ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಸೋಲುಂಡಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಯಾಸಿರ್​ ಪಠಾಣ್​ ಗೆಲುವಿನ ಪತಾಕೆ ಹಾರಿಸಿದ್ದಾರೆ. ​

ಸಂಡೂರಲ್ಲಿ ಅನ್ನಪೂರ್ಣ ತುಕಾರಾಂಗೆ ಜಯ; ಸಂಡೂರು ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಜಯದ ನಗೆ ಬೀರಿದ್ದರೆ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಸೋಲನುಭವಿಸಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿನಲ್ಲಿ ಕಾಂಗ್ರೆಸ್​ ಮುನ್ನಡೆ: ಕೈ ಕಾರ್ಯಕರ್ತರಿಂದ ಸಂಭ್ರಮಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.