ETV Bharat / state

ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದಲ್ಲಿ ಬಾಲಕಿ ಮೃತದೇಹ ಪತ್ತೆ; ಮಾಹಿತಿ ಕಲೆ ಹಾಕಿದ ಪೊಲೀಸರು - Girl Dead Body Found Case - GIRL DEAD BODY FOUND CASE

ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದಲ್ಲಿ ಮೃತದೇಹ ಪತ್ತೆಯಾದ ಪ್ರಕರಣದಲ್ಲಿ, ಬಾಲಕಿಯ ವಿವರ ಲಭ್ಯವಾಗಿದೆ.

girl found dead
ಘಟನಾ ಸ್ಥಳ (ETV Bharat)
author img

By ETV Bharat Karnataka Team

Published : Jul 14, 2024, 1:58 PM IST

ಬೆಂಗಳೂರು: ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಇತ್ತೀಚೆಗೆ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಇದೀಗ ಮೃತ ಬಾಲಕಿಯ ವಿವರವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹತ್ಯೆಯಾದ ಬಾಲಕಿ ಮರಿಯಮ್ (5) ಎಂದು ಆಕೆಯ ತಂದೆ ಗುರುತಿಸಿದ್ದಾರೆ.

ಜುಲೈ 3ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಹತ್ಯೆಯಾದ ಬಾಲಕಿಯ ತಾಯಿ ಹೀನಾ, ಗಂಡನನ್ನ ತೊರೆದು ರಾಜು ಎಂಬಾತನ ಜೊತೆ ವಾಸವಿದ್ದಳು. ಭಿಕ್ಷಾಟನೆ ಮಾಡಿಕೊಂಡಿದ್ದ ಹೀನಾ ಹಾಗೂ ರಾಜು ಜೊತೆಯಲ್ಲಿಯೇ ಮರಿಯಮ್ ಸಹ ಇರುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಮರಿಯಮ್ ಮೃತದೇಹ ಪತ್ತೆಯಾದ ದಿನದಿಂದಲೂ ಹೀನಾ ಹಾಗೂ ರಾಜು ನಾಪತ್ತೆಯಾಗಿದ್ದಾರೆ. ಇಬ್ವರೂ ಸೇರಿ ಮರಿಯಮ್​ಳನ್ನು ಹತ್ಯೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಸದ್ಯ ಹೀನಾ ಹಾಗೂ ರಾಜುಗಾಗಿ ಬೆಂಗಳೂರು ಕೇಂದ್ರ ರೈಲ್ವೆ ಠಾಣಾ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಆಷಾಢಕ್ಕೆ ತವರಿಗೆ ಬಂದ ನವವಿವಾಹಿತೆ ಪ್ರೇಮಿ ಜೊತೆ ಆತ್ಮಹತ್ಯೆ - Suicide Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.