ETV Bharat / state

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ - DEADLY ATTACK

ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ವೇಳೆ ದುಷ್ಕರ್ಮಿಗಳ ತಂಡವೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ.

DEADLY ATTACK YOUNG MAN
ಹಲ್ಲೆಗೊಳಗಾದ ಯುವಕ ಮಲ್ಲೇಶ ಪೂಜಾರಿ (ETV Bharat)
author img

By ETV Bharat Karnataka Team

Published : Nov 2, 2024, 12:49 PM IST

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ‌ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕನ ಮೇಲೆ‌ ಮಾರಣಾಂತಿಕ‌ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯ ಸೋಷಿಯಲ್ ಕ್ಲಬ್ ಎದುರು ನಿನ್ನೆ ರಾತ್ರಿ ನಡೆದಿದೆ.

ಖಾನಾಪುರ ರಸ್ತೆಯಲ್ಲಿರುವ ಕಮಲ‌ ನಗರದ ಮಲ್ಲೇಶ ಪೂಜಾರಿ (29) ಹಲ್ಲೆಗೊಳಗಾದ ಯುವಕ. ತೀವ್ರ ಗಾಯಗೊಂಡ ಯುವಕನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರೂಪಕ ವಾಹನದಲ್ಲಿ ಕುಳಿತಿದ್ದ ಮಲ್ಲೇಶ ಪೂಜಾರಿ ಮೇಲೆ ಹಿಂದಿನಿಂದ ಬಂದ ದುಷ್ಕರ್ಮಿಗಳು ಏಕಾಏಕಿ ದಾಳಿ‌ ಮಾಡಿದ್ದಾರೆ. ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ಮಲ್ಲೇಶ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಬಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಹಿರಿಯ ಕನ್ನಡ ಹೋರಾಟಗಾರ ಮಹಾದೇವ ತಳವಾರ ಸೇರಿ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಆರೋಗ್ಯ ವಿಚಾರಿಸಿದ್ದಾರೆ. ಬೆಳಗಾವಿಯ ಖಡೇಬಜಾರ್ ‌ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ.

ಇದನ್ನೂ ಓದಿ: ತುಮಕೂರು: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.