ETV Bharat / state

ಕುಮಾರಸ್ವಾಮಿ ಎಂಪಿ ಆಗೋದು ಅನುಮಾನ: ಡಿಸಿಎಂ ಡಿ.ಕೆ.ಶಿವಕುಮಾರ್​ - D K Shivakumar - D K SHIVAKUMAR

ಹೆಚ್​ಡಿಕೆ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸದರಾಗುವುದು ಅನುಮಾನ ಎಂದು ಡಿಕೆಶಿ ಹೇಳಿದ್ದಾರೆ.

ಕುಮಾರಸ್ವಾಮಿ ಎಂಪಿ ಆಗೋದು ಅನುಮಾನ
ಕುಮಾರಸ್ವಾಮಿ ಎಂಪಿ ಆಗೋದು ಅನುಮಾನ
author img

By ETV Bharat Karnataka Team

Published : Apr 15, 2024, 3:53 PM IST

Updated : Apr 15, 2024, 10:55 PM IST

ಡಿಸಿಎಂ ಡಿ.ಕೆ.ಶಿವಕುಮಾರ್​

ಬೆಳಗಾವಿ: ಹೆಚ್​.ಡಿ.ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾಗುವುದೇ ಅನುಮಾನ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.​ ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಚರ್ಚೆ ಮಾಡುತ್ತೇನೆಂದಿದ್ದರು. ಕಳೆದ ಬಾರಿಯೂ ಚರ್ಚೆಗೆ ಕರೆದಾಗ ಬರಲೇ ಇಲ್ಲ ಆಸಾಮಿ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಎಲ್ಲ‌ ಮಹಿಳೆಯರಿಗೆ ಇದು ಸ್ವಾಭಿಮಾನದ ಪ್ರಶ್ನೆ. ಇವರಿಗೆ ತಕ್ಕ ಪಾಠ ಕಲಿಸಲು ಎಲ್ಲರೂ ಪ್ರತಿಯೊಂದು ತಾಲೂಕಿನಲ್ಲಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಬಳಿಕ ರಮೇಶ್ ಜಾರಕಿಹೊಳಿ ಆರೋಪಕ್ಕೆ ತಿರುಗೇಟು ನೀಡಿದ ಡಿಕೆಶಿ, ಅವರು ನನ್ನ ಲೇವಲ್ ಅಲ್ಲ. ನನ್ನ ಲೇವಲ್ ಇದ್ದವರ ಬಗ್ಗೆ ಮಾತ್ರ ಮಾತನಾಡುವೆ ಎಂದರು. ನಂತರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಬೆಂಗಳೂರು ನೀರಿನ ಸಮಸ್ಯೆಗೆ ‌ನಿಮ್ಮ ಕೊಡುಗೆ ಏನು? ಮಹಾದಾಯಿ ವಿಚಾರದಲ್ಲಿ ಸಂಭ್ರಮ ಮಾಡಿದರು. ಯಾಕೆ ಇನ್ನೂ ಅನುಮತಿ ಕೊಡಿಸಲು ಸಾಧ್ಯವಾಗಿಲ್ಲ. ಯಾವುದಾದ್ರು ಕೋರ್ಟ್ ಅಡ್ಡ ಬಂದಿದೆಯಾ‌..? 14 ಜನ ಅಭ್ಯರ್ಥಿಗಳನ್ನು ಯಾಕೆ ಬದಲಾವಣೆ ಮಾಡಿದರು. ಕುರುಬರಿಗೆ, ಅಲ್ಪಸಂಖ್ಯಾತರಿಗೆ ಒಂದೂ ಸೀಟ್ ಕೊಟ್ಟಿಲ್ಲ. ಐದು ಸಲ ಗೆದ್ದ ಅನಂತಕುಮಾರ್ ಹೆಗಡೆ ಬದಲಾವಣೆ ಮಾಡಿದ್ದಿರಿ ಎಂದ ಅವರು ಈ ಎಲ್ಲಾ ದೃಷ್ಟಿಯಿಂದ ಬಿಜೆಪಿ ಚುನಾವಣೆಯಲ್ಲಿ ಸೋಲುತ್ತದೆ ಎಂದು ಭವಿಷ್ಯ ನುಡಿದರು.

ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಸಮೀಕ್ಷೆಯಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದ್ದರು. 135 ಸ್ಥಾನ ಗೆದ್ದು ಸರ್ಕಾರ ರಚನೆ ಮಾಡಿದ್ದೇವೆ. ನಿನ್ನೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಚುನಾವಣೆಗೆ ಪ್ರಣಾಳಿಕೆಯಿಂದ ಶಕ್ತಿ ಯಾವತ್ತು ಬರಲ್ಲ. ಸರ್ಕಾರ ಇದ್ದಾಗ ಜನರ ಪರ ಕೆಲಸ ಮಾಡುವ ಅವಕಾಶ ಇತ್ತು. ಸರ್ಕಾರ ಇದ್ದಾಗ ಕೇವಲ ಭಾವನೆ ಬಗ್ಗೆ ಮಾತನಾಡಿದ್ರು ಬದುಕಿನ ಬಗ್ಗೆ ಚಿಂತನೆ ಮಾಡಲಿಲ್ಲ. ಹಾಗಾಗಿ, ಅವರ ಪ್ರಣಾಳಿಕೆ ಅನುಷ್ಠಾನಕ್ಕೆ ಬರಲು ಸಾಧ್ಯವಿಲ್ಲ.

ಈ ಹಿಂದೆ ಕಪ್ಪು ಹಣ ತಂದು ಹಂಚುತ್ತೇವೆ ಎಂದಿದ್ದರು. ಎಷ್ಟು ಕಪ್ಪು ಹಣ ಬಂತು, ಯಾರಿಗೆ ಹಣ ಹಾಕಿದ್ದಾರೆ. ಜನ್ ಧನ್ ಅಕೌಂಟ್ ಮಾಡಿಸಿ ಹಣ ಹಾಕಿದ್ರಾ‌..? ಇದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಬೇಕು. ರೈತರ ಆದಾಯ ಡಬಲ್ ಮಾಡ್ತಿನಿ ಅಂದಿದ್ರು. ಯಾವ ರೈತರ ಆದಾಯ ಡಬಲ್ ಆಗಿದೆ ಎಂದು ಹೇಳಬೇಕು. 700 ಜನ ರೈತರು ಪ್ರಾಣ ತ್ಯಾಗದ ಬಳಿಕ ರೈತ ವಿರೋಧಿ ಕಾನೂನು ವಾಪಸ್ ಪಡೆದರು. ಎರಡು ಕೋಟಿ ಉದ್ಯೋಗ ಕೊಟ್ಟಿರೋ ಬಗ್ಗೆಯೂ ಬಿಜೆಪಿ ಪಟ್ಟಿ ಬಿಡುಗಡೆ ಮಾಡಬೇಕು ಎಂದ ಡಿಕೆಶಿ ಒತ್ತಾಯಿಸಿದರು.

ಇದನ್ನೂ ಓದಿ: ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ - HD KUMARASWAMY

Last Updated : Apr 15, 2024, 10:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.