ಮಂಡ್ಯ: ಹೆಚ್.ಡಿ.ಕುಮಾರಸ್ವಾಮಿ ನುಡಿದಂತೆ ನಡೆಯಲಿ, ಕೊಟ್ಟ ಮಾತು ತಪ್ಪುವುದನ್ನು ಬಿಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಡ್ಯದ ಮೈಶುಗರ್ ಮೈದಾನದಲ್ಲಿಂದು ನಡೆದ ಸಮಾವೇಶಕ್ಕೆ ಡಿ.ಕೆ.ಶಿವಕುಮಾರ್ ಜ್ಯೋತಿ ಬೆಳಗುವ ಮೂಲಕ ಚಾಲನೆ ಕೊಟ್ಟರು.
ನಂತರ ಮಾತನಾಡಿದ ಅವರು, ನನಗೆ ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಲಕ್ಷ್ಮಿ ಹೆಬ್ಬಾಳ್ಕರ್, ಸಂತೋಷ್ ಲಾಡ್, ಮುನಿಯಪ್ಪ ಮೇಲೆ ನಂಬಿಕೆ ಇಲ್ಲ. ಆದರೆ ಕುಮಾರಸ್ವಾಮಿ, ಯಡಿಯೂರಪ್ಪ, ಜಿ. ಟಿ.ದೇವೇಗೌಡ, ಯೋಗೇಶ್ವರ್, ಯತ್ನಾಳ್ ಮೇಲೆ ನಂಬಿಕೆ ಜಾಸ್ತಿ ಎಂದರು.
ಯು ಟರ್ನ್ ಕುಮಾರ, ದೋಸ್ತಿ ರಾಂಗ್ ಟರ್ನ್ ಹೆಸರಲ್ಲಿ ವಿಡಿಯೋ ಪ್ಲೇ ಮಾಡಿಸಿದರು. ಅಂದು, ಇಂದು ಎಂಬ ಎರಡು ಫ್ರೇಮ್ನಲ್ಲಿ ಹೆಚ್ಡಿಕೆ ಹೇಳಿಕೆಗಳ ವಿಡಿಯೋ ಪ್ಲೇ ಮಾಡಿಸಿದರು. ನಾನು ಹೆಚ್ಚು ಭಾಷಣ ಮಾಡೋದಿಲ್ಲ. ಇದಕ್ಕೆ ಉತ್ತರ ಕೊಡಲಿ ಸಾಕು ಎಂದು ಹೇಳಿದರು.
5 ನಿಮಿಷದಲ್ಲಿ ಮೇಕೆದಾಟು ಅನುಮತಿ ಕೊಡಿಸ್ತೀನಿ ಎಂದಿದ್ರು ಕುಮಾರಸ್ವಾಮಿ. ಆದರೆ ಈಗ ನಾನು ಹೇಳಿಲ್ಲ ಅಂತಿದ್ದಾರೆ. ಮಂಡ್ಯದ ಗಂಡು ಭೂಮಿಯ ಜನ ನಿನ್ನ ಗೆಲ್ಲಿಸಿದ್ದಾರೆ. ನೀನು ಇಲ್ಲಿ ಬಂದು ಉತ್ತರ ಕೊಡಬೇಕು. ಎಸ್.ಎಂ.ಕೃಷ್ಣ ಮಂಡ್ಯದಲ್ಲಿ ಹಲವೆಡೆ ಕೈಗಾರಿಕಾ ಪ್ರದೇಶ ಮಾಡಿದ್ರು. ನೀನು ಈಗ ಕೇಂದ್ರ ಕೈಗಾರಿಕಾ ಮಂತ್ರಿ. 10 ಸಾವಿರ ಜನಕ್ಕೆ ಉದ್ಯೋಗ ಕೊಡ್ತೀನಿ ಎಂದಿದ್ದೀಯ. ನಿನಗೆ ಏನು ಬೇಕಾದರೂ ಸಹಕಾರ ಕೊಡ್ತೀನಿ. ನಮ್ಮ ಯುವಕರಿಗೆ ಕೆಲಸ ಕೊಡಪ್ಪಾ ಸಾಕು. ನುಡಿದಂತೆ ನಡೆಯಬೇಕು, ಉಲ್ಟಾ ಹೊಡೆಯಬೇಡ ಎಂದು ಗರಂ ಆದರು.
ಬಿಜೆಪಿ-ಜೆಡಿಎಸ್ದು ನೂರಾರು ಹಗರಣಗಳಿವೆ: ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ, ಅಶೋಕ್ ನೇತೃತ್ವದಲ್ಲಿ ಪಾದಯಾತ್ರೆ ಮಾಡ್ತಿದ್ದಾರೆ. ಪಾದಯಾತ್ರೆ ಮಾಡಬೇಕಾ? ಬೇಡ್ವಾ ಎಂದು ಎರಡು ದಿನ ತಳ್ಳಾಡಿದ್ರು. ಕುಮಾರಸ್ವಾಮಿ ಮೊದಲು ಬೆಂಬಲ ಕೊಡಲ್ಲ ಅಂದ್ರು. ಬಳಿಕ ಪಾದಯಾತ್ರೆಗೆ ಬೆಂಬಲ ಕೊಡ್ತೇನೆ ಎಂದರು. ಬಿಜೆಪಿಯಲ್ಲಿಯೇ ಅಶೋಕ್ದು ಒಂದು ಗುಂಪು, ವಿಜಯೇಂದ್ರನದ್ದು ಒಂದು ಗುಂಪಾಗಿದೆ. ಮುಡಾ ಹಗರಣ ತಾವೇ ಮಾಡಿರುವ ಅಪರಾಧ ಎಂಬುದು ಅವರಿಗೆ ಗೊತ್ತು. ಮುಡಾ ವಿಚಾರವನ್ನು ಕೈ ಬಿಡುವುದು ಒಳ್ಳೆಯದು ಎಂದು ಅವರೇ ಅಸೆಂಬ್ಲಿಯಲ್ಲಿ ಚರ್ಚೆ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ದು ನೂರಾರು ಹಗರಣಗಳಿವೆ ಎಂದರು.
ಇದನ್ನೂ ಓದಿ: ಕುಮಾರಸ್ವಾಮಿ ಹಿಟ್ ಅಂಡ್ ರನ್, ಬ್ಲಾಕ್ ಮೇಲರ್ : ಡಿಸಿಎಂ ಡಿ. ಕೆ ಶಿವಕುಮಾರ್ - D K SHIVAKUMAR OUTRAGE AGAINST HDK