ETV Bharat / state

78ನೇ ಸ್ವಾತಂತ್ಯ್ರ ದಿನಾಚರಣೆ: ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿರುವ ಡಿಕೆಶಿ, ಸಿಪಿವೈ - D K Shivakumar C P Yogeshwar

author img

By ETV Bharat Karnataka Team

Published : Aug 14, 2024, 10:51 PM IST

ಚನ್ನಪಟ್ಟಣದ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆಯುವ ಸ್ವಾತಂತ್ಯ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿರುವ ಡಿಕೆಶಿ ಹಾಗೂ ಸಿಪಿವೈ
ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿರುವ ಡಿಕೆಶಿ ಹಾಗೂ ಸಿಪಿವೈ (ETV Bharat)

ರಾಮನಗರ: ಚನ್ನಪಟ್ಟಣ ತಾಲೂಕಿನ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 78ನೇ ಸ್ವಾತಂತ್ಯ್ರ ದಿನಾಚರಣೆಯನ್ನು ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಅದ್ಧೂರಿಯಾಗಿ ಸಮಾರಂಭ ಆಚರಿಸಲು ತಾಲೂಕು ಆಡಳಿತ ಸಜ್ಜಾಗಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆ ಇದೇ ಮೊದಲ ಬಾರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಹಾಲಿ ಸಚಿವ ಸಿ.ಪಿ.ಯೋಗೇಶ್ವರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಿ.ಪಿ.ಯೋಗೇಶ್ವರ್ ಉಪಸ್ಥಿತರಿರಲಿದ್ದಾರೆ.

ರಾಜ್ಯದ ಮೂರು ವಿಧಾನಸಭಾ ಚುನಾವಣಾ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಮೂರು ಕ್ಷೇತ್ರಗಳ ಪೈಕಿಯಲ್ಲಿ ಚನ್ನಪಟ್ಟಣದಲ್ಲಿ ಉಪಚುನಾವಣೆಯ ಕಾವು ಈಗಾಗಲೇ ಶುರುವಾಗಿದೆ. ಒಂದು ಕಡೆ ಕಾಂಗ್ರೆಸ್ ಚುನಾವಣೆ ಗೆಲ್ಲಲೇಬೇಕು ಅಂತ ಡಿಸಿಎಂ ಡಿಕೆಶಿ ಅಖಾಡಕ್ಕೆ ಇಳಿದಿದ್ದರೆ, ಇತ್ತ ಮೈತ್ರಿ ಪಕ್ಷದ ಅಭ್ಯರ್ಥಿಗಳು ಕೂಡ ಒಳಗೊಳಗೆ ಭಾರೀ ತಂತ್ರ ಹೆಣೆಯುತ್ತಿದ್ದಾರೆ.

ಬೊಂಬೆನಾಡು ಚನ್ನಪಟ್ಟಣ ಉಪವಿಧಾನಸಭೆ ಚುನಾವಣೆ ಇನ್ನೂ ಬಹಳಷ್ಟು ಸಮಯ ಇದೆ. ಆದರೆ ಕಾವು ಮಾತ್ರ ಕ್ಷೇತ್ರದ ಮೂರು ಪಕ್ಷದ ಕಾರ್ಯಕರ್ತರಿಗೆ ಈಗಿನಿಂದಲೇ ತಟ್ಟಲು ಶುರುಮಾಡಿದೆ. ಕ್ಷೇತ್ರವನ್ನ ಹೇಗಾದರೂ ಮಾಡಿ ವಶಪಡಿಸಿಕೊಳ್ಳದೇ ನೆಮ್ಮದಿಯಿಲ್ಲ ಎಂಬಂತೆ ವಾರಕ್ಕೆ ಎರಡು ಬಾರಿ ಚನ್ನಪಟ್ಟಣ ಸುತ್ತುತ್ತಿರುವ ಡಿ.ಕೆ.ಶಿವಕುಮಾರ್, ಈ ಬಾರಿ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡಲು ಆಗಮಿಸಲಿದ್ದಾರೆ.

ಈ ಮೂಲಕ ಚನ್ನಪಟ್ಟಣದ ಇತಿಹಾಸದಲ್ಲೇ ಯಾವೊಬ್ಬ ಸಚಿವರಿಂದ ಧ್ವಜಾರೋಹಣವೇ ಆಗದ ಇತಿಹಾಸವನ್ನು ಅಳಿಸಿ, ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡಿದ ಮೊದಲ ಉಪಮುಖ್ಯಮಂತ್ರಿ ಎಂಬ ಮೈಲುಗಲ್ಲನ್ನು ಸೃಷ್ಟಿಸಲು ಡಿಸಿಎಂ ಡಿಕೆಶಿ ಹೊರಟಿದ್ದಾರೆ. ಹಾಗೆಯೇ ಇತ್ತ ಚನ್ನಪಟ್ಟಣ ಸೈನಿಕ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕೂಡ ದೆಹಲಿಯಿಂದ ಹೊರಟಿದ್ದು ಇಂದು ನಡೆಯಲಿರುವ ಧ್ವಜಾರೋಹಣಕ್ಕೆ ಆಗಮಿಸಲಿದ್ದಾರೆಂಬ ಮಾಹಿತಿ ಇದೆ.

ಮತ್ತೊಂದೆಡೆ, ಯೋಗೇಶ್ವರ್ ಯಾವುದೇ ಕಾರಣಕ್ಕೂ ಜೆಡಿಎಸ್​ಗೆ ಟಿಕೆಟ್ ನೀಡದೇ ತಮಗೆ ಬಿಜೆಪಿ ಟಿಕೆಟ್ ಕೊಟ್ಟು ಕ್ಷೇತ್ರ ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ಜೊತೆ ಕೂಡ ಚರ್ಚೆ ನಡೆಸಿದ್ದಾರೆ. ತಾವು ಕ್ಷೇತ್ರದಲ್ಲಿ ಮತದಾರರ ಜೊತೆ ಯಾವ ರೀತಿ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ, ಹಾಗೆಯೆ ತಾವು ಸ್ಪರ್ಧಿಸಿದ ಹಲವು ಚುನಾವಣೆಯ ಫಲಿತಾಂಶವನ್ನು ಹೈಕಮಾಂಡ್ ಮುಂದಿಟ್ಟು ಈ ಬಾರಿ ಟಿಕೆಟ್​ಗೆ ಭಾರೀ ಲಾಬಿ ನಡೆಸುತ್ತಿದ್ದಾರೆ.

ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ: ಮತ್ತೊಂದೆಡೆ, ಚನ್ನಪಟ್ಟಣದಲ್ಲಿ ಈಗ ಜೆಡಿಎಸ್​ಗೆ ಅನುಕೂಲಕರ ಪರಿಸ್ಥಿತಿ ಹಿಂದೆಂದಿಗಿಂತಲು ಈಗ ಚೆನ್ನಾಗಿದೆ. ಅಲ್ಲದೇ ನಿಖಿಲ್ ಕುಮಾರಸ್ವಾಮಿ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸಂಸತ್ತಿಗೋ ಅಥವಾ ವಿಧಾನಸಭೆಗೋ ಹೋಗೋದನ್ನು ಕಣ್ಣಾರೆ ಕಾಣಬೇಕು ಅಂತ ಇರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕನಸನ್ನು ನೆನಸು ಮಾಡಬೇಕು ಅಂತ ಹಲವು ಅಭಿಮಾನಿಗಳು ಪಟ್ಟು ಹಿಡಿದು ಕೂತಿದ್ದಾರೆ‌. ಈ ಬಾರಿ ಚನ್ನಪಟ್ಟಣದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲೇಬೇಕು ಅಂತ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಒತ್ತಡ ಹಾಕುತ್ತಿದ್ದಾರೆ.

ಇದನ್ನೂ ಓದಿ: ಸಚಿವ ಭೈರತಿ ಸುರೇಶ್ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ: ಹೆಚ್.ವಿಶ್ವನಾಥ್‌ - H Vishwanath

ETV Bharat Logo

Copyright © 2024 Ushodaya Enterprises Pvt. Ltd., All Rights Reserved.