ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿ 87 ಅತಿಸೂಕ್ಷ್ಮ ಮತಗಟ್ಟೆಗಳು; ಡಿಸಿ ಗುರುದತ್ತ ಹೆಗಡೆ - SHIVAMOGGA LOK SABHA CONSTIUENCY

ಶಿವಮೊಗ್ಗ ಜಿಲ್ಲೆಯಲ್ಲಿನ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಡಿಸಿ ಗುರುದತ್ತ ಹೆಗಡೆ ಮಾಹಿತಿ ನೀಡಿದರು.

dc-gurudatta-hegde
ಡಿಸಿ ಗುರುದತ್ತ ಹೆಗಡೆ (dc-gurudatta-hegde)
author img

By ETV Bharat Karnataka Team

Published : May 5, 2024, 8:41 PM IST

ಡಿಸಿ ಗುರುದತ್ತ ಹೆಗಡೆ (ETV Bharat)

ಶಿವಮೊಗ್ಗ: ಲೋಕಸಭೆ ಚುನಾವಣೆಗೆ ಜಿಲ್ಲೆಯಲ್ಲಿ 17,52,885 ಮತದಾರರಿದ್ದು, ಈ ಪೈಕಿ 8,62,789 ಪುರುಷ, 8,90,061 ಮಹಿಳಾ ಅಭ್ಯರ್ಥಿಗಳಿದ್ದಾರೆ. ಮತಗಟ್ಟೆಗೆ ಮತದಾರರನ್ನು ಸೆಳೆಯಲು 40 ಸಖಿ ಮತದಾನ ಕೇಂದ್ರಗಳು, ಯುವ ಮತದಾರರಿಗೆ 8, ವಿಶೇಷ ಚೇತನರಿಗೆ 8 ಮಾದರಿ ಮತಗಟ್ಟೆಗಳು, ಧ್ಯೇಯ ಆಧಾರಿತ 8 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಡಿಸಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 325 ಸೂಕ್ಷ್ಮ ಹಾಗೂ 87 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದ್ದು, ಇಲ್ಲಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯಲು ಸಹಕಾರಿಯಾಗುವಂತೆ ಬೇರೆ ಊರುಗಳಿಂದ ಪ್ರಚಾರಕ್ಕೆ ಆಗಮಿಸಿದವರು 48 ಗಂಟೆಗಳ ಮುಂಚೆ ಜಿಲ್ಲೆಯನ್ನು ತೊರೆಯಬೇಕು. ಭಾನುವಾರ ಸಂಜೆ 5 ಗಂಟೆ ನಂತರ ಬಹಿರಂಗ ಪ್ರಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಮತದಾನ ಕೇಂದ್ರಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಎಲ್ಲಾ 2039 ಮತದಾನ ಕೇಂದ್ರಗಳಲ್ಲಿ ಕನಿಷ್ಠ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರಸ್ತುತ ಬಿಸಿಲು ಹೆಚ್ಚಾಗಿರುವುದರಿಂದ ಮತದಾರರಿಗೆ ಸನ್ ಸ್ಟ್ರೋಕ್ ತಪ್ಪಿಸಲು ನೆರಳಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ವೈದ್ಯಕೀಯ ಕಿಟ್‌ನ ವ್ಯವಸ್ಥೆ ಮಾಡಲಾಗುತ್ತಿದೆ. ಅಗತ್ಯ ಇರುವವರಿಗೆ ಓಆರ್‌ಎಸ್, ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು ಎಂದರು. ಮತದಾರರಿಗೆ ಮತದಾನದ ಮಾರ್ಗದರ್ಶನ ಗೈಡ್‌ಗಳನ್ನು ಹಾಗೂ ಯುವ ಮತದಾರರಿಗೆ ಪ್ರತ್ಯೇಕ ಗ್ರೀಟಿಂಗ್ ಪತ್ರಗಳನ್ನು ವಿತರಿಸಲಾಗುತ್ತಿದೆ ಎಂದರು.

ಮದ್ಯ ನಿಷೇಧ : ಮೇ 6ರ ಬೆಳಗ್ಗೆಯಿಂದ ಮೇ 7 ರ ಮಧ್ಯರಾತ್ರಿವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಚುನಾವಣೆ ಹಿನ್ನೆಲೆ ಚೆಕ್​ಪೋಸ್ಟ್ ತಪಾಸಣೆಗಳನ್ನು ತೀವ್ರಗೊಳಿಸಲಾಗಿದೆ. ಈವರೆಗೆ 19 ಕೋಟಿ ರೂ. ನಗದು ಹಾಗೂ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಈ ವೇಳೆ ಎಡಿಸಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿಗೆ ಪ್ರತಿಭಟನೆ: ಲೋಕಸಭೆ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ - Protest For Drinking Water

ETV Bharat Logo

Copyright © 2024 Ushodaya Enterprises Pvt. Ltd., All Rights Reserved.