ETV Bharat / state

ಎಕ್ಸಲ್​ ಕಟ್​ ಆಗಿ ಬಲಕ್ಕೆ ತಿರುಗಿದ ಓಮಿನಿಗೆ ಗುದ್ದಿದ ಕಾರು, ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆ! - Car Accident - CAR ACCIDENT

ಹೈವೇಯಲ್ಲಿ ಚಲಿಸುತ್ತಿದ್ದ ಓಮಿನಿಯ ಎಕ್ಸಲ್​ ಕಟ್​ ಆಗಿ ಬಲಕ್ಕೆ ತಿರುಗಿದ್ದು, ಹಿಂದಿನಿಂದ ಬಂದ ಕಾರೊಂದು ರಭಸವಾಗಿ ಗುದ್ದಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಕಂಡು ಬಂದಿದೆ. ಈ ಘಟನೆ ದೃಶ್ಯ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಯ ಮೂಡಿಸುವಂತಿದೆ.

OMINI CAR ACCIDENT  CAR AXLE CUT  ACCIDENT CAPTURED IN CAR CAMERA  DAVANAGERE
ಅಪಘಾತದ ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆ (ETV Bharat)
author img

By ETV Bharat Karnataka Team

Published : Jun 19, 2024, 12:37 PM IST

Updated : Jun 19, 2024, 4:43 PM IST

ಅಪಘಾತದ ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆ (ETV Bharat)

ದಾವಣಗೆರೆ: ಎಕ್ಸಲ್ ಕಟ್ ಆಗಿ ಬಲಕ್ಕೆ ತಿರುಗಿದ ಓಮಿನಿ ಕಾರಿಗೆ ಮತ್ತೊಂದು ಕಾರು ಗುದ್ದಿದ ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಮಿನಿ ಹಾಗೂ ಕಿಯಾ ಕಾರು ನಡುವೆ ಭೀಕರ ಅಪಘಾತ ನಡೆದಿದೆ.

ಜಗಳೂರು ತಾಲೂಕಿನ ಕಾನನಕಟ್ಟೆ- ಆಲೂರು ಮಧ್ಯ ಈ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲಿ ಓಮಿನಿ ಕಾರು ಸಂಚರಿಸುವ ವೇಳೆ ಎಕ್ಸಲ್ ಕಟ್ ಆಗಿದೆ. ಪರಿಣಾಮ ಓಮಿನಿ ಕಾರು ಬಲಕ್ಕೆ ತಿರುಗಿದ್ದು, ಹಿಂಬದಿಯಲ್ಲಿ ವೇಗವಾಗಿ ಬಂದ ಮತ್ತೊಂದು ಕಾರು ಓಮಿನಿಗೆ ಗುದ್ದಿದೆ. ಕಿಯಾ ಕಾರು ಗುದ್ದಿದ ರಭಸಕ್ಕೆ ಓಮಿನಿ ಪಲ್ಟಿಯಾಗಿ, ವಾಹನ ಮೇಲಿದ್ದ ಲಗೇಜ್​ ಮತ್ತು ವಸ್ತುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಇನ್ನು ತಮಿಳುನಾಡಿನ ಮೂಲದ ಕಿಯಾ ಕಾರು ಹೊಸಪೇಟೆ ಕಡೆಯಿಂದ ಬೆಂಗಳೂರು ಹೊರಟಿತ್ತು.‌ ಓಮಿನಿ ಕಾರು ಕೂಡ ಬೆಂಗಳೂರು ಕಡೆಗೆ ಹೊರಟಿತ್ತು. ಓಮಿನಿಯಲ್ಲಿದ್ದ 7 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಅಪಘಾತದ ಭೀಕರ ದೃಶ್ಯ ಓಮಿನಿ ಕಾರಿಗೆ ಡಿಕ್ಕಿ ಹೊಡೆದ ಕಿಯಾ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಆ ವಿಡಿಯೋ ಮಾಧ್ಯಮಕ್ಕೆ ದೊರೆತಿದೆ.

ಓದಿ: ಡಿವೈಡರ್​ಗೆ ಗುದ್ದಿದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷರಿದ್ದ ಕಾರು: ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - Car accident in Davanagere

Last Updated : Jun 19, 2024, 4:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.