ETV Bharat / state

ಬೆಣ್ಣೆನಗರಿಯಲ್ಲಿ ಹಂದಿಗಳ ಹಾವಳಿಗೆ ಬ್ರೇಕ್ ಹಾಕಲು ವರಾಹ ಶಾಲೆ ನಿರ್ಮಿಸಿದ ಪಾಲಿಕೆ: ಗ್ರಾಮಸ್ಥರಿಂದ ವಿರೋಧ - Davanagere Pig Center - DAVANAGERE PIG CENTER

ಹಂದಿಗಳ ಹಾವಳಿಗೆ ಕಡಿವಾಣ ಹಾಕಲು ದಾವಣಗೆರೆ ಮಹಾನಗರ ಪಾಲಿಕೆ ವರಹ ಶಾಲೆ ನಿರ್ಮಾಣ ಮಾಡಿದ್ದು, ಜನರಿಂದ ವಿರೋಧ ವ್ಯಕ್ತವಾಗಿದೆ.

Action to stop the pig Problem
ಹಂದಿ ಸಾಕಾಣಿಕೆ ಕೇಂದ್ರ ಆರಂಭಕ್ಕೆ ವಿರೋಧ (ETV Bharat)
author img

By ETV Bharat Karnataka Team

Published : Jul 4, 2024, 9:41 AM IST

ಹಂದಿ ಸಾಕಾಣಿಕೆ ಕೇಂದ್ರ ಆರಂಭಕ್ಕೆ ಪ್ರತಿಕ್ರಿಯೆ (ETV Bharat)

ದಾವಣಗೆರೆ: ನಗರದಲ್ಲಿ ಹಂದಿಗಳ ಉಪಟಳ ಹೆಚ್ಚಾಗಿದೆ. ಹಂದಿಗಳ ಹಾವಳಿಗೆ ಕಡಿವಾಣ ಹಾಕಲು ದಾವಣಗೆರೆ ಮಹಾನಗರ ಪಾಲಿಕೆ ವರಹ ಶಾಲೆ ನಿರ್ಮಾಣ ಮಾಡಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ಆದ್ರೆ ಈ ಕೇಂದ್ರ ಆರಂಭಕ್ಕೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗುತ್ತಿದೆ. ಹಂದಿ ಶೆಡ್ ಆರಂಭ ಮಾಡಲು ಬಿಡಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ದಾವಣಗೆರೆ ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾದ ಬೆನ್ನಲ್ಲೇ ಹಂದಿಗಳನ್ನು ಸ್ಥಳಾಂತರ ಮಾಡಲು ಮಹಾನಗರ ಪಾಲಿಕೆ ಪ್ಲ್ಯಾನ್​​ ಮಾಡಿದೆ. ಗುಡಾಳ್ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಹೊಸಹಳ್ಳಿ ಗ್ರಾಮದ ಹೊರವಲಯದಲ್ಲಿ ವರಹ ಶಾಲೆಯನ್ನು ಪಾಲಿಕೆಯಿಂದ 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ದಾವಣಗೆರೆ ನಗರದಲ್ಲಿನ ಹಂದಿಗಳ ಉಪಟಳಕ್ಕೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಇಲ್ಲಿನ ಹಂದಿಗಳನ್ನು ಸ್ಥಳಾಂತರ ಮಾಡಲು ಪಾಲಿಕೆ ತೆರೆಮರೆಯಲ್ಲಿ ಸಿದ್ಧತೆ ನಡೆಸಿತ್ತು. ಅದ್ರೆ ಹಂದಿ ಸ್ಥಳಾಂತರ ಮಾಡದಂತೆ ಹಂದಿ ಸಾಕಾಣಿಕೆದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಕೂಡ ಹಂದಿಗಳನ್ನು ಸ್ಥಳಾಂತರ ಮಾಡದಂತೆ ಸ್ಟೇ ನೀಡಿದ್ದು, ಪಾಲಿಕೆ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಾಲಿಕೆ ಈ ವರಾಹ ಶಾಲೆ ನಿರ್ಮಾಣ ಮಾಡಿಯೇ ಬಿಟ್ಟಿದೆ. ಹಂದಿಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವರಾಹ ಶಾಲೆಯ ಯೋಜನೆಯನ್ನು ಅಂದಿನ ಮೇಯರ್ ಎಸ್.ಟಿ ವೀರೇಶ್ ಅವರು ಕೈಗೆತ್ತಿಕೊಂಡಿದ್ದರು. ದಾವಣಗೆರೆ ತಾಲೂಕಿನ ಹೆಬ್ಬಾಳ ಬಳಿಯ ಹೊಸಹಳ್ಳಿ ಹೊರವಲಯದಲ್ಲಿ 7 ಎಕರೆ ಜಾಗದಲ್ಲಿ ವರಾಹ ಶಾಲೆ ನಿರ್ಮಿಸಲಾಗಿದೆ. ಆದ್ರಿನ್ನೂ ಹಂದಿಗಳನ್ನು ಸ್ಥಳಾಂತರ ಮಾಡಲಾಗಿಲ್ಲ. ಅಲ್ಲದೇ ಈ ವರಾಹ ಕೇಂದ್ರ ಆರಂಭ ಮಾಡಲು ಹೊಸಹಳ್ಳಿ ಗ್ರಾಮಸ್ಥರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇಲ್ಲಿ ಕೇಂದ್ರ ತೆರೆದರೆ ರೋಗರುಜಿನೆಗಳು ಶುರುವಾಗಲಿವೆ ಎಂಬುದು ಏಳು ಹಳ್ಳಿಯ ಬಹುತೇಕ ಜನರ ವಾದವಾಗಿದೆ.

ಹೇಗಿರಲಿದೆ ನೂತನ ವರಾಹ ಶಾಲೆ? ಇಡೀ ರಾಜ್ಯದಲ್ಲೇ ಎಲ್ಲೂ ಇಲ್ಲದ ವರಾಹ ಶಾಲೆಯನ್ನು ದಾವಣಗೆರೆಯಲ್ಲಿ ತೆರೆಯಲಾಗಿದೆ. ಒಟ್ಟು 7 ಎಕರೆ ಜಾಗದಲ್ಲಿ 13 ಅಡಿ ಎತ್ತರದ ಕಾಂಪೌಂಡ್ ಹಾಕಿ ಅಲ್ಲಿ ಹಂದಿಗಳನ್ನು ಬಿಡಲಾಗುವುದು. ಕುಡಿಯುವ ನೀರಿನ‌ ವ್ಯವಸ್ಥೆ, ಹಂದಿ ಮಾಲೀಕರು ಅಲ್ಲಿಗೆ ತೆರಳಲು ರಸ್ತೆ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಲೆಕ್ಕಾಚಾರ ಹಾಕಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಹಂದಿಗಳಿಗೆ ಆಹಾರ ವ್ಯವಸ್ಥೆಗಾಗಿ ಪಾಲಿಕೆಯಿಂದ, ಮನೆಗಳಿಂದ, ಹೋಟೆಲ್​​ಗಳಿಂದ ಸಿಗುವ ಹಸಿ ತ್ಯಾಜ್ಯವನ್ನು ಹಂದಿಗಳಿಗೆ ಹಾಕಲಾಗುವುದು. ಜೊತೆಗೆ ಹಂದಿಗಳನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಅಲ್ಲೇ ಉಳಿದುಕೊಳ್ಳುವವರಿಗೆ ಶೆಡ್ ಮಾದರಿಯ ವಸತಿ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ.‌

ಇದನ್ನೂ ಓದಿ ರಾಜ್ಯದ ಜನರಿಗೆ ಸಿಹಿ ಸುದ್ದಿ; ಆಸ್ತಿ ತೆರಿಗೆ ಪಾವತಿಗೆ ಶೇ.5ರಷ್ಟು ರಿಯಾಯಿತಿ ಅವಧಿ ವಿಸ್ತರಿಸಿದ ಸರ್ಕಾರ - Tax Payment Period Extended

ವರಾಹಶಾಲೆ ಆರಂಭಕ್ಕೆ ಹೊಸಹಳ್ಳಿ ಗ್ರಾಮಸ್ಥರ ವಿರೋಧ: "ದಿಕ್ಕು ತಪ್ಪಿಸಿ ಈ ಕಾಮಗಾರಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಇಲ್ಲಿ ಹಂದಿ ಸಾಕಾಣಿಕೆ ಮಾಡಲು ಬಿಡುವುದಿಲ್ಲ. 37 ಎಕರೆ ಜಮೀನಿನಲ್ಲಿ ವರಾಹ ಶಾಲೆ, ಗೋಶಾಲೆ, ಸಂತ್ರಸ್ತರಿಗೆ ಹೀಗೆ ಭೂಮಿ ಹಂಚಲಾಗಿದೆ.‌ ಇಲ್ಲಿ ಜನರಿಗೆ ತೊಂದರೆಯಾಗಲಿದೆ. ಹಂದಿಗಳನ್ನು ಸಾಕುವುದರಿಂದ ರೋಗರುಜಿನೆಗಳು ಸೃಷ್ಟಿಯಾಗಲಿವೆ. ಏಳು ಗ್ರಾಮಗಳಿಗೆ ತೊಂದರೆ ಆಗಲಿದೆ. ಹಂದಿ ಸಾಕಾಣಿಕೆಯನ್ನು ಸಿಟಿಯಲ್ಲೇ ಮಾಡಲಿ. ಇಲ್ಲಿ ಆರಂಭಿಸಿದ್ರೆ ಹಂದಿ ಶೆಡ್ ಒಡೆದು ಹಂದಿಯನ್ನು ಹೊರಕ್ಕೆ ಬಿಡ್ತೇವೆ" ಎಂದು ಗ್ರಾ.ಪಂ ಸದಸ್ಯ ಕುಮಾರ್ ನಾಯ್ಕ್ ತಿಳಿಸಿದರು.

ಇದನ್ನೂ ಓದಿ: ದಾವಣಗೆರೆ ಸಿಲಿಂಡರ್ ಸ್ಫೋಟ ಪ್ರಕರಣ: ಐವರು ಗಾಯಾಳುಗಳ ಪೈಕಿ ಓರ್ವ ಮಹಿಳೆ ಸಾವು - Davangere Cylinder Blast

ಪಾಲಿಕೆ ಕಮಿಷನರ್ ಹೇಳಿದ್ದೇನು? ದೂರವಾಣಿಯಲ್ಲಿ ಈಟಿವಿ ಭಾರತ್​ಗೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತೆ ರೇಣುಕಾ ಅವರು "ಈ ಪ್ರಕರಣ ಕೋರ್ಟ್​​ನಲ್ಲಿದೆ. ಹಂದಿ ಸ್ಥಳಾಂತರ ಮಾಡದಂತೆ ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಹಂದಿ ಸಾಕಾಣಿಕೆ ಕೇಂದ್ರ ಆರಂಭಿಸದಂತೆ ಹೊಸಹಳ್ಳಿ ಗ್ರಾಮಸ್ಥರು ಮನವಿ ನೀಡಿದ್ದಾರೆ. ಪರಿಶೀಲನೆ ನಡೆಸಲಾಗುವುದು. ಇದಲ್ಲದೇ ವರಾಹ ಶಾಲೆಯ ಕಾಮಗಾರಿ ಈಗಾಗಲೇ ಮುಗಿದಿದೆ. ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಹಂದಿಗಳ ಸ್ಥಳಾಂತರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ" ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.