ETV Bharat / state

ಇಂದು ದತ್ತಮಾಲಾ ಅಭಿಯಾನ: 1,700ಕ್ಕೂ ಹೆಚ್ಚು ಪೊಲೀಸರ ನಿಯೋಜನೆ; ಬಾಟಲಿಯಲ್ಲಿ ಪೆಟ್ರೋಲ್ ನೀಡದಂತೆ ಸೂಚನೆ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂದು ದತ್ತಮಾಲಾ ಅಭಿಯಾನ ನಡೆಯಲಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ದತ್ತಮಾಲಾ ಅಭಿಯಾನ ಹಿನ್ನೆಲೆ 1,700ಕ್ಕೂ ಅಧಿಕ ಪೊಲೀಸರ ನಿಯೋಜನೆ
ದತ್ತಮಾಲಾ ಅಭಿಯಾನಕ್ಕೆ ಪೊಲೀಸ್ ಭದ್ರತೆ (ETV Bharat)
author img

By ETV Bharat Karnataka Team

Published : Nov 10, 2024, 7:57 AM IST

Updated : Nov 10, 2024, 8:06 AM IST

ಚಿಕ್ಕಮಗಳೂರು: ಶ್ರೀರಾಮಸೇನಾ ದತ್ತಮಾಲಾ ಅಭಿಯಾನದ ಅಂಗವಾಗಿ ಇಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ನಡೆಯಲಿದ್ದು, ನಗರ ಹಾಗೂ ದತ್ತಪೀಠದ ಸುತ್ತಮುತ್ತಲು ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.

ಸಾವಿರಾರು ಭಕ್ತರು ಶಂಕರಮಠದ ಬಳಿ ಧರ್ಮಸಭೆ ನಡೆಸಿದ ನಂತರ ಶೋಭಾಯಾತ್ರೆ ಹಾಗೂ ದತ್ತಪೀಠದಲ್ಲಿ ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ದತ್ತಪೀಠ ಹಾಗೂ ಚಿಕ್ಕಮಗಳೂರು ನಗರದಲ್ಲಿ 1,700ಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

ಶನಿವಾರ ಚಿಕ್ಕಮಗಳೂರು ಜಿಲ್ಲೆಯ ನಗರದಲ್ಲಿ ಗಸ್ತು ಹೊಡೆದ ಪೊಲೀಸರು. (ETV Bharat)

ಓರ್ವ ಎಸ್ಪಿ, ಓರ್ವ ಹೆಚ್ಚುವರಿ ಎಸ್ಪಿ, 6 ಡಿವೈಎಸ್ಪಿ, 15 ಸಿಪಿಐ ಸೇರಿದಂತೆ 100 ಪಿಎಸ್ಐ, 1,500 ಸಿವಿಲ್ ಪೊಲೀಸರು ಹಾಗೂ 8 ಕೆ.ಎಸ್.ಆರ್.ಪಿ. ತುಕಡಿಗಳು, 11 ಡಿಎಆರ್​ ತುಕಡಿ ಕ್ಯೂ.ಆರ್​.ಟಿ. ಟೀಂಗಳು ಮತ್ತು 2 ಎಸಿ ಟೀಂಗಳನ್ನು ನಿಯೋಜಿಸಲಾಗಿದೆ. ದತ್ತಪೀಠ ಮಾರ್ಗದ ಸೂಕ್ಷ್ಮ ಪ್ರದೇಶದಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ದತ್ತಮಾಲಾ ಅಭಿಯಾನ ಹಿನ್ನೆಲೆ ಪೊಲೀಸರಿಂದ ಗಸ್ತು
ದತ್ತಮಾಲಾ ಅಭಿಯಾನಕ್ಕೆ ಪೊಲೀಸ್ ಭದ್ರತೆ (ETV Bharat)

ಪೆಟ್ರೋಲ್‌ ಬಂಕ್ ಮಾಲೀಕರಿಗೆ ಸೂಚನೆ: ಈ ಬಾರಿ ಹೆಚ್ಚು ಡ್ರೋನ್​ ಕ್ಯಾಮರಾಗಳನ್ನು ಬಳಸಲಾಗಿದೆ. ಬಾಟಲಿಯಲ್ಲಿ ಪೆಟ್ರೋಲ್ ಕೊಡದಂತೆ ಬಂಕ್ ಮಾಲೀಕರಿಗೆ ನೋಟಿಸ್​ ನೀಡಲಾಗಿದೆ ಎಂದು ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ತಿಳಿಸಿದರು.

ಇದನ್ನೂ ಓದಿ: ದತ್ತಪೀಠದಲ್ಲಿ ದತ್ತಮಾಲಾ ಸಂಭ್ರಮ; ಮಾಲಾಧಾರಿಗಳಿಂದ ಪಡಿ ಸಂಗ್ರಹ

Last Updated : Nov 10, 2024, 8:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.