ದಾವಣಗೆರೆ: ಮೋಸ ಹೋಗುವವರು ಎಲ್ಲಿಯವರೆಗೆ ಇರೋತ್ತಾರೆ ಅಲ್ಲಿಯವರೆಗೆ ಮೋಸ ಮಾಡೋರೋ ಇದ್ದೇ ಇರುತ್ತಾರೆ. ದುರಾಸೆಗೆ ಬಿದ್ದು ಸಾಕಷ್ಟು ಜನರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ. ಮೋಸ ಮಾಡುವವರು ಇದೀಗ ತಂತ್ರಜ್ಞಾನ ಬಳಸಿಕೊಂಡು ವಂಚನೆ ಎಸಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಎಸ್ಪಿ ಮನವಿ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಇದೀಗ ಪೆಡೆಕ್ಸ್ ಕೋರಿಯರ್ ಬಲೆಗೆ ಬಿದ್ದು, ಸಾರ್ವಜನಿಕರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿರುವವರ ಪ್ರಕರಣಗಳು ಬೆಳಕಿಗೆ ಬಂದಿವೆ. ಹೌದು ದೂರವಾಣಿ ಮೂಲಕ ಜನರನ್ನು ಸಂಪರ್ಕಿಸುತ್ತಿರುವ ಸೈಬರ್ ಕ್ರೈಮ್ ಖದೀಮರು ನಿಮಗೆ ಪೆಡಕ್ಸ್ ಕೋರಿಯರ್ ಬಂದಿದ್ದು, ಅದರಲ್ಲಿ ಡ್ರಗ್ಸ್ ಇದೇ. ಪೊಲೀಸ್ ಕೇಸ್ ಆಗಲಿದೆ ಎಂದು ಜನರನ್ನು ಹೆದರಿಸುತ್ತಾರೆ ಎಂದು ಎಸ್ಪಿ ಹೇಳಿದರು.
ಇಷ್ಟಕ್ಕೆ ಸುಮ್ಮನಾಗದ ಅವರು ನಮ್ಮ ಪೊಲೀಸ್ ಮೇಲಾಧಿಕಾರಿಗಳು ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಾರೆ ಎಂದು ಹೆದರಿಸುತ್ತಾರೆ. ಆಗ ಅವರು ಹಣಕ್ಕೆ ಬೇಡಿಕೆ ಇಟ್ಟು ನಾವು ಕೇಸ್ ದಾಖಲಿಸುವುದಿಲ್ಲ. ಇಲ್ಲವಾದರೆ ನೀವು ಜೈಲಿಗೆ ಹೋಗ ಬೇಕಾಗುತ್ತದೆ ಎಂದು ಹೆದರಿಸುತ್ತಾರೆ. ಆಗ ಅಮಾಯಾಕ ಜನ ಅವರಿಗೆ ಹಣ ಹಾಕುತ್ತಿದ್ದಾರೆ. ಕೋರಿಯರ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅದೊಂದು ಮೋಸದ ಜಾಲ. ಜನರು ಯಾವುದೇ ಕಾರಣಕ್ಕೂ ಮೋಸ ಹೋಗ ಬಾರದು ಎಂದು ಎಸ್ಪಿ ಉಮಾಪ್ರಶಾಂತ್ ಮನವಿ ಮಾಡಿದ್ದಾರೆ.
ಸಾರ್ವಜನಿಕರಿಗೆ ಅನಾಮದೇಯ ದೂರವಾಣಿ ಕರೆ ಬಂದರೆ ಅವುಗಳನ್ನು ಸ್ವೀಕರಿಸ ಬೇಡಿ. ಒಂದು ವೇಳೆ ಸ್ವೀಕರಿಸಿದರೂ ಅವರೊಟ್ಟಿಗೆ ಮಾತನಾಡಿ, ಸ್ಥಳೀಯ ಪೊಲೀಸರಿಗೆ ಅಥವಾ ನನಗೆ ಕರೆ ಮಾಡಿ. ನಾವು ಅವರನ್ನು ಬಂಧಿಸುವ ಕೆಲಸ ಮಾಡುತ್ತೇವೆ. ಅದನ್ನು ಬಿಟ್ಟು ಸಾರ್ವಜನಿಕರು ಮೋಸದ ಜಾಲಗಳಿಗೆ ಬೀದ್ದು ಹಣ ಕಳೆದು ಕೊಳ್ಳಬೇಡಿ ಎಂದು ಎಸ್ಪಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕ್ಯೂಅರ್ ಕೋಡ್ ಸ್ಕ್ಯಾನ್ ಎಚ್ಚರ: ಇನ್ನು ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಮೂಲಕ ಸೈಬರ್ ಖದೀಮರು ಕವರ್ ಕಳಿಸುತ್ತಿದ್ದಾರೆ. ಕಳುಸಿದ ಬಳಿಕ ದೂರವಾಣಿ ಮೂಲಕ ಕರೆ ಮಾಡುವ ಅವರು ನಿಮಗೆ ಪೋಸ್ಟ್ ಬಂದಿದೆ. ಸ್ಕ್ರ್ಯಾಚ್ ಮಾಡಿ. ಅದರಲ್ಲಿರುವ ಎಸ್ಎಮ್ಎಸ್ ಕೋಡ್ ಹೇಳಿ, ನಿಮ್ಮ ಖಾತೆಗೆ ಹಣ ಬರಲಿದೆ. ಅಲ್ಲದೇ ಅದರಲ್ಲಿರುವ ಕ್ಯೂ ಅರ್ ಕೋಡ್ ಸ್ಕ್ಯಾನ್ ಮಾಡಿ ಎಂದು ಸೈಬರ್ ಖದೀಮರು ಹೊಸ ವರಸೆ ಆರಂಭ ಮಾಡಿದ್ದಾರೆ. ಒಂದು ವೇಳೆ ಕ್ಯೂ ಅರ್ ಕೋಡ್ ಸ್ಕ್ಯಾನ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣ ಖಾಲಿಯಾಗಲಿದೆ. ಈ ರೀತಿಯ ಪೋಸ್ಟ್ಗಳು ಕೊರಿಯಾರ್ಗಳು ನಿಮ್ಮ ವಿಳಾಸಕ್ಕೆ ಬಂದ್ರೇ ತಕ್ಷಣ ಪೋಲಿಸರ ಗಮನಕ್ಕೆ ತನ್ನಿ ಎಂದು ಎಸ್ಪಿ ತಿಳಿಸಿದರು.
ಓದಿ: ವಾಲ್ಮೀಕಿ ನಿಗಮದ ಹಗರಣ: ವಿಧಾನಸೌಧಕ್ಕೆ ಬಿಜೆಪಿ ನಾಯಕರ ಪಾದಯಾತ್ರೆ - BJP Leaders Protest