ETV Bharat / state

ಗುದನಾಳದಲ್ಲಿ ಬಚ್ಚಿಟ್ಟು ₹58 ಲಕ್ಷ ಮೌಲ್ಯದ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ಸೆರೆ - Gold Smuggling - GOLD SMUGGLING

ಪ್ರಯಾಣಿಕನೊಬ್ಬ ಗುದನಾಳದಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದುದನ್ನು ಮಂಗಳೂರು ಕಸ್ಟಮ್ಸ್‌ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದ ವ್ಯಕ್ತಿ ಬಂಧನ: ₹58 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

author img

By ETV Bharat Karnataka Team

Published : Apr 12, 2024, 10:45 PM IST

ಮಂಗಳೂರು: ಪ್ರಯಾಣಿಕನೊಬ್ಬ ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದುದನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಏಪ್ರಿಲ್ 11ರಂದು ದುಬೈನಿಂದ ಬಂದ ವಿಮಾನದಲ್ಲಿದ್ದ ಪ್ರಯಾಣಿಕನಿಂದ 58 ಲಕ್ಷದ 78 ಸಾವಿರದ 880 ರೂ. ಮೌಲ್ಯದ 812 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನ ವಶಪಡಿಸಿಕೊಂಡಿದ್ದಾರೆ. ಗುದನಾಳದಲ್ಲಿ ಅಂಡಾಕಾರದ 3 ವಸ್ತುಗಳಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಮರೆಮಾಡಿ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು. ಪ್ರಯಾಣಿಕನನ್ನು ಬಂಧಿಸಿದ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ: ನಕಲಿ ಕೀ ಬಳಸಿ ಪಕ್ಕದ ಮನೆಯಿಂದ ನಗದು, ಚಿನ್ನ ಕಳ್ಳತನ; ಕದ್ದ ಮಾಲಿನಲ್ಲಿ ದೇವರಿಗೂ ಪಾಲು! - Bengaluru Theft Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.