ವಿಜಯಪುರ : 60 ಅಡಿ ಆಳದ ಪಾಳುಬಿದ್ದ ಬಾವಿಗೆ ಬಿದ್ದಿದ್ದ ಆಕಳು ರಕ್ಷಣೆ ಮಾಡಿದ ಘಟನೆ ವಿಜಯಪುರ ನಗರದ ಜ್ಯೋತಿ ಪೈಪ್ ಫ್ಯಾಕ್ಟರಿ ಬಳಿ ನಡೆದಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಈ ಆಕಳನ್ನ ರಕ್ಷಣೆ ಮಾಡಲಾಗಿದೆ.
ಗಂಗಾಧರ ಹಿರೇಮಠ ಎನ್ನುವವರಿಗೆ ಸೇರಿದ್ದ ಆಕಳು ಇದಾಗಿದ್ದು, ಬಾವಿಗೆ ಬಿದ್ದಿದ್ದ ಆಕಳನ್ನು ಕ್ರೇನ್ ಮೂಲಕ ಎತ್ತಿ ರಕ್ಷಣೆ ಮಾಡಲಾಗಿದೆ. ನೀರು ಕುಡಿಯಲು ತೆರಳಿದ ವೇಳೆ ಪಾಳು ಬಿದ್ದ ಬಾವಿಗೆ ಹಸು ಬಿದ್ದಿತ್ತು ಎಂಬುದಾಗಿ ತಿಳಿದು ಬಂದಿದೆ. ಸ್ಥಳೀಯರ ಸಹಾಯದಿಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಈ ಗೋರಕ್ಷಣಾ ಕಾರ್ಯಕ್ಕೆ ಮುಂದಾಗಿ ರಕ್ಷಣೆ ಮಾಡಿದ್ದಾರೆ. ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಉಡುಪಿ: ರೈಲ್ವೆ ಬ್ರಿಡ್ಜ್ನಲ್ಲಿ ಸಿಲುಕಿದ ಹಸುವಿನ ರಕ್ಷಣೆ - ವಿಡಿಯೋ