ETV Bharat / state

ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಪೂರ್ಣ: ಸೋಮವಾರ ಬೇಲ್ ಭವಿಷ್ಯ ನಿರ್ಧಾರ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಜಾಮೀನು ಅರ್ಜಿಯ ವಿಚಾರಣೆ ಮುಗಿದಿದ್ದು, ಸೋಮವಾರಕ್ಕೆ ಅಂತಿಮ ತೀರ್ಪು ಕಾಯ್ದಿರಿಸಲಾಗಿದೆ.

ದರ್ಶನ್​
ದರ್ಶನ್​ (ETV Bharat)
author img

By ETV Bharat Karnataka Team

Published : Oct 10, 2024, 5:39 PM IST

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಅಂತಿಮ ಆದೇಶ ಸೋಮವಾರ ಹೊರಬೀಳಲಿದೆ.

ಸರ್ಕಾರದ ಅಭಿಯೋಜಕ ಎಸ್​ಪಿಪಿ ಪ್ರಸನ್ನ‌ಕುಮಾರ್ ಹಾಗೂ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರ ಸುದೀರ್ಘ ವಾದ-ಪ್ರತಿವಾದ ಆಲಿಸಿದ 57ನೇ ಸಿಸಿಹೆಚ್ ನ್ಯಾಯಾಲಯದ ನ್ಯಾ. ಜೈಶಂಕರ್ ಅವರು ಅ.14ಕ್ಕೆ ಜಾಮೀನು ತೀರ್ಪು ಕಾಯ್ದಿರಿಸಿದ್ದಾರೆ. ಇದೇ ಪ್ರಕರಣದಲ್ಲಿ ಆರೋಪಿಗಳಾದ ಪವಿತ್ರಾಗೌಡ, ರವಿ, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಜಾಮೀನು ಆದೇಶ ಇದೇ ದಿನವೇ ಬರಲಿದೆ. ದರ್ಶನ್​​ಗೆ ಜಾಮೀನು‌ ಸಿಗದಿದ್ದರೆ ಹೈಕೋರ್ಟ್​​ಗೆ ಹೋಗುವ ಸಾಧ್ಯತೆಯಿದೆ.

ಸಾಕ್ಷಿಗಳ ಹೇಳಿಕೆ ದಾಖಲಿಸುವಲ್ಲಿ ವಿಳಂಬ ತೋರಿಸಿಲ್ಲ ಎಂದು ನಿನ್ನೆ(ಬುಧವಾರ) ಪ್ರಸನ್ನ ಕುಮಾರ್ ಅವರ ವಾದಕ್ಕೆ‌ ಇಂದು ಪ್ರತಿಯಾಗಿ ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದಿಸಿದರು. ಜೂನ್ 9ರಂದು ಆರೋಪಿ ಇರುವ ಸ್ಥಳದ ಬಗ್ಗೆ ಗೂಗಲ್ ನಕ್ಷೆ ಅಥವಾ ಸ್ಯಾಟಲೈಟ್ ಚಿತ್ರವನ್ನ ತೋರಿಸಿದ್ದಾರೆ ಎಂದು ಭಾವಿಸಿದ್ದೆ‌. ಪರಿಶೀಲಿಸಿದಾಗ ಪೊಲೀಸರು ಗೂಗಲ್ ಮ್ಯಾಪ್ ತೆಗೆದುಕೊಂಡು ಅಂಟಿಸಿ ನಕ್ಷೆ ತಯಾರಿಸಿರುವುದು ಗೊತ್ತಾಯಿತು‌. ಮಧ್ಯೆ ಪ್ರವೇಶಿಸಿದ ನ್ಯಾಯಾಧೀಶರು ನಕ್ಷೆಯ ಕೆಳಗೇ ಅದನ್ನು ಬರೆದಿದ್ದಾರೆ. ಲೊಕೇಷನ್ ಆಧಾರದಲ್ಲಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಪೊಲೀಸರೇ ಬರೆದಿದ್ದಾರೆ ಎಂದರು. ತನಿಖಾಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ನಕ್ಷೆಯನ್ನ ಸಿದ್ಧಪಡಿಸಿದ್ದಾರೆ. ಇದು ಗೂಗಲ್ ಪಿಕ್ಚರ್, ಸ್ಯಾಟಲೈಟ್ ಪಿಕ್ಚರ್ ಅಲ್ಲ‌. ಪೊಲೀಸ್ ಹೆಡ್ ಕಾನ್​ಸ್ಟೇಬಲ್ ಅಂಟಿಸಿದ ಚಿತ್ರವಾಗಿದೆ. ಗೂಗಲ್ ವಿಳಾಸ ಪಡೆದಿಲ್ಲ. ಕರೆ ವಿವರ ಸಂಗ್ರಹಿಸಿಲ್ಲ. ಅದ್ಯಾವುದೂ ಇಲ್ಲದೇ ಈ ಸಾಕ್ಷಿಗಳು ಕೃತ್ಯದ ಸ್ಥಳದಲ್ಲಿದ್ದರೆಂದು ಹೇಗೆ ಹೇಳುತ್ತಾರೆ ಎಂದು‌ ದರ್ಶನ್ ಪರ ವಕೀಲರು ಪ್ರಶ್ನಿಸಿದರು‌.

ಇದೇ ಟವರ್ ಲೊಕೇಷನ್ ವ್ಯಾಪ್ತಿಯಲ್ಲಿಯೇ ಆರೋಪಿಗಳ ವಾಸಸ್ಥಾನವಿದೆ‌. ಹೀಗಿರುವುದರಿಂದ ಕೃತ್ಯ ನಡೆದಾಗ ಇವರೆಲ್ಲಾ ಶೆಡ್​​ನಲ್ಲಿದ್ದರೆಂದು ಸಾಬೀತಾಗುವುದಿಲ್ಲ. ಐಪಿ ಅಡ್ರೆಸ್ ಮೂಲಕ ಇರುವ ಸಿಟಿ ಮಾತ್ರ ತೋರಿಸಬಹುದು. ನಾನು ಈಗ ನ್ಯೂಯಾರ್ಕ್ ನಲ್ಲಿರುವಂತೆಯೂ ತೋರಿಸಬಹುದು. ತಾಂತ್ರಿಕ ವರದಿಗಳ ಪ್ರಕಾರ 5 ಮೈಲಿಗಳಿಂದ 25 ಮೈಲಿಗಳವರೆಗೂ ಇದರ ವ್ಯಾಪ್ತಿಯಿದೆ. ಹೀಗಿದ್ದಾಗ ಪಟ್ಟಣಗೆರೆ ಶೆಡ್​​ನಲ್ಲೇ ಇವರೆಲ್ಲರೂ ಇದ್ದರೆಂದು ಹೇಳುವುದು ಹೇಗೆ ಎಂದರು.

ರೇಣುಕಾಸ್ವಾಮಿ ಕೊಲೆಯಾದಾಗ ಸಾಕ್ಷಿಗಳು ಅಲ್ಲಿಯೇ ಇದ್ದರೆಂದು ಹೇಳುವುದು ಹೇಗೆ? ಆರೋಪಿಗಳು ಅಲ್ಲಿಯೇ ಇದ್ದರೆಂದು ಐಪಿ ಅಡ್ರೆಸ್ ಮೂಲಕವೂ ಹೇಳುವುದಕ್ಕೆ ನಂಬಲಸಾಧ್ಯ‌.‌ ನಾನು ಕಚೇರಿಯಿಂದ ನೇರವಾಗಿ ಈ ಕೋರ್ಟ್​ಗೆ ಬಂದಿದ್ದೇನೆ. ಆದರೆ ನಾನು ನನ್ನ ಕಚೇರಿಯಿಂದ ಎಸಿಪಿ ಚಂದನ್ ಕುಮಾರ್ ಕಚೇರಿಗೆ, ನಂತರ ವಿಧಾನಸೌಧಕ್ಕೆ ಹೋಗಿದ್ದಾಗಿ ಎಡಿಟ್ ಮಾಡಬಹುದು. ಗೂಗಲ್ ಮ್ಯಾಪ್ ಅನ್ನು ಎಡಿಟ್ ಮಾಡಲೂ ಅವಕಾಶವಿದೆ ಎಂದು ವಿವರಿಸಿದರು.

ಪ್ರತ್ಯಕ್ಷ ಸಾಕ್ಷಿಯೋರ್ವರು ಮಲೆಮಹದೇಶ್ವರ ಬೆಟ್ಟ, ಗೋವಾ, ತಿರುಪತಿಗೆ ಹೋಗಿದ್ದರು. ಹೀಗಾಗಿ ಅವರ ಹೇಳಿಕೆ ದಾಖಲಿಸಲು ವಿಳಂಬವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇವರ ಹೇಳಿಕೆಯು ಗಣೇಶ-ಸುಬ್ರಹ್ಮಣ್ಯನ ಕಥೆಯಂತಿದೆ. ಪ್ರಪಂಚ ಸುತ್ತಿ ಬರಲು ಹೇಳಿದಾಗ ಸುಬ್ರಹ್ಮಣ್ಯ ಎಲ್ಲವನ್ನೂ ಸುತ್ತಿ ಬಂದರೆ, ಗಣೇಶ ಶಿವ ಪಾರ್ವತಿ ಮಾತ್ರ ಸುತ್ತಿದನಂತೆ. ಈ ಕೇಸಿನ ಸಾಕ್ಷಿಯ ಕಥೆಯೂ ಹೀಗೇ ಇದೆ. ಈತ ಎಲ್ಲೂ ಹೋಗಿರಲಿಲ್ಲ. ಇವರೇ ಅವನು ಸುತ್ತಾಡಿದಂತೆ ತೋರಿಸಿದ್ದಾರೆ ಎಂದು ವಾದಿಸಿದರು.

ಎಫ್​​ಎಸ್​​ಎಲ್ ಹಾಗೂ ಪಂಚರ ಸಮ್ಮುಖದಲ್ಲಿ ದರ್ಶನ್ ಮಣ್ಣು ಮೆತ್ತಿದ‌ ಶೂ ವಶಕ್ಕೆ ಪಡೆಯಲಾಗಿದೆ‌. ಪಂಚನಾಮೆ ವೇಳೆ ಇಲ್ಲದ ರಕ್ತದ ಕಲೆ ಎಫ್​​ಎಸ್​​ಎಲ್​​ನಲ್ಲಿ ಹೇಗೆ ಬಂದಿತು. ಮೇಲ್ನೋಟಕ್ಕೆ ಪೊಲೀಸರು ಸಾಕ್ಷ್ಯ ಸೃಷ್ಟಿಸಿದ್ದಾರೆ. ಕೃತ್ಯ ನಡೆದ ಶೆಡ್​ನಲ್ಲಿ ಸಿನಿಮಾ ಶೂಟಿಂಗ್ ನಡೆಯುತಿತ್ತು‌. ದರ್ಶನ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಪಂಚನಾಮೆಯಲ್ಲಿ‌ ರಕ್ತವೇ ಸಿಗದೆ ಕೇವಲ ವಾದದಲ್ಲಿ ಅರೇಬಿಯನ್ ನೈಟ್ಸ್ ಅಲ್ಲ ರಕ್ತಚರಿತ್ರೆಯಾಗಿದೆ ಎಂದು ವಾದ ಮಂಡಿಸಲಾಗಿದೆ. ಆದರೆ ಇವೆಲ್ಲವೂ ಪೇಕ್ಷಕರಿಗಾಗಿ ಮಾಡಿದ ವಾದವಾಗಿದೆ. ದರ್ಶನ್​​ಗೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳಿರುವುದು ನಿಜ‌. ಸಿನಿಮಾ‌ ಶೂಟಿಂಗ್​ಗೆ ನಿರ್ಮಾಪಕರು ಹಣ ಹೂಡಿದ್ದಾರೆ. ಪ್ರತಿನಿತ್ಯ 500 ಕುಟುಂಬಗಳು ದರ್ಶನ್ ಚಿತ್ರದ‌ ಮೇಲೆ ಅವಲಂಬಿತವಾಗಿವೆ. ಅವರಿಗೆಲ್ಲ‌ ಈಗ ಕೆಲಸ ಇಲ್ಲದಂತಾಗಿದೆ. ಹೀಗಾಗಿ ತಮ್ಮ ಕಕ್ಷಿದಾರರಿಗೆ ಜಾಮೀನು ಪುರಸ್ಕರಿಸಬೇಕೆಂದು ದರ್ಶನ್ ಪರ ವಕೀಲರು ಮನವಿ ಮಾಡಿದರು.

ಎಸ್​ಪಿಪಿ ಪ್ರಸನ್ನ‌ಕುಮಾರ್ ಮಂಡಿಸಿದ ವಾದವೇನು?

ಪಟ್ಟಣಗೆರೆ ಶೆಡ್​​ನಲ್ಲಿ ಮಣ್ಣಷ್ಟೇ ಅಲ್ಲ, ರಕ್ತದ ಕಲೆಯೂ ಸಿಕ್ಕಿದೆ. ಮನೆಯಲ್ಲಿ ಶೂ ಇಟ್ಟ ಬಗ್ಗೆ ದರ್ಶನ್ ಸ್ವ ಇಚ್ಛಾ ಹೇಳಿಕೆ ನೀಡಿದ್ದಾರೆ‌. ನಂತರ ಪತ್ನಿ ಮನೆಯಲ್ಲಿ ಪೊಲೀಸರು ಶೂ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಹಾಗೂ ಸಾಕ್ಷಿಗಳ ಕರೆ ದತ್ತಾಂಶ ವಿಶ್ಲೇಷಿಸಲಾಗಿದೆ. ಸುಮಾರು 10 ಸಾವಿರ‌ ಪುಟಗಳ ಸಿಡಿಆರ್ ದತ್ತಾಂಶ ವಿಶ್ಲೇಷಣೆ ಮಾಡಲಾಗಿದೆ. ತನಿಖಾಧಿಕಾರಿಗಳ ಕರ್ತವ್ಯವಾಗಿರುವುದರಿಂದ ಸಿಡಿಆರ್ ಹಾಗೂ ಟವರ್ ಲೋಕೆಷನ್ ಮ್ಯಾಪ್ ಸಿದ್ಧಪಡಿಸಿದ್ದಾರೆ. ನಾವಿರುವ ಸ್ಥಳದ ನಿಖರತೆ ಬಗ್ಗೆ ತಂತ್ರಜ್ಞಾನದಿಂದ ಪತ್ತೆ ಹಚ್ಚಬಹುದಾಗಿದೆ. ಕೇವಲ 5 ಮೀಟರ್ ವ್ಯತ್ಯಾಸವಾಗಬಹುದಾಗಿದೆ. ತಂತ್ರಜ್ಞಾನ ತುಂಬಾ ಅಭಿವೃದ್ಧಿಯಾಗಿದೆ‌. ಹೀಗಾಗಿ ವ್ಯಕ್ತಿಯ ಇರುವಿಕೆಯ ಸ್ಥಳದ ನಿಖರತೆ ಪತ್ತೆ ಹಚ್ಚಬಹುದಾಗಿದೆ ಎಂದರು.

ಎ 14 ಪ್ರದೋಶ್ ಸಾಕ್ಷಿ ನಾಶ ಮಾಡಲು ಗೂಗಲ್ ಸರ್ಚ್ ಮಾಡಿದ್ದಾನೆ. ಕೃತ್ಯದಲ್ಲಿ ಭಾಗಿಯಾಗಿಲ್ಲವೆಂದರೆ ಯಾಕೆ ಗೂಗಲ್ ಸರ್ಚ್ ಮಾಡುತ್ತಿದ್ದ ಎಂದು‌ ಪ್ರಶ್ನಿಸಿದರು. 10 ಸಾವಿರ ಪುಟಗಳನ್ನು ಕೊಡುವ ಬದಲು ಸುಲಭವಾಗಿ ಅರ್ಥವಾಗಲು ನಕ್ಷೆ ತಯಾರಿಸಿದ್ದಾರೆ. ತಾಂತ್ರಿಕ ಸಾಕ್ಷಿಗಳು ತನಿಖೆ ಹಾಗೂ ಆರೋಪಪಟ್ಟಿ ಪ್ರಮುಖ ಭಾಗವಾಗಿವೆ. 2020-21 ರಲ್ಲಿ ಶೆಡ್ ನಲ್ಲಿ ದರ್ಶನ್ ಸಿನಿಮಾ ಚಿತ್ರೀಕರಣವಾಗಿದೆ‌. ಐಪಿ‌ ವಿಳಾಸ ಆಧಾರದ ಮೇರೆಗೆ ತನಿಖೆ ನಡೆಸಿಲ್ಲ. ಹೇಮಂತ್ ಹೆಸರಿನಲ್ಲಿ ದರ್ಶನ್ ಸಿಮ್ ಬಳಸುತ್ತಿದ್ದಾರೆ ಎಂದು‌ ಆರೋಪಿ ಪರ ವಕೀಲರು ವಾದಿಸಿದ್ದಾರೆ. ಪವಿತ್ರಾ ಗೌಡ ಜೊತೆ ಚಾಟ್ ಮಾಡಿರುವುದೆಲ್ಲವೂ ಹೇಮಂತ್ ಎಂದು ಹೇಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ಬಿಲಿಯೇನರ್ ಬಳಿ ಸಾವಿರಾರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಎಂಬ ಮಾತ್ರಕ್ಕೆ ಜಾಮೀನು ನೀಡಲಾಗಲ್ಲ. ಉದ್ಯಮಿ ಸುಬ್ರತಾ ರಾಯ್​​ಗೆ ಸುಪ್ರೀಂಕೋರ್ಟ್ ಜಾಮೀನು ನೀಡಿರಲಿಲ್ಲ. ಹೀಗಾಗಿ ದರ್ಶನ್​​ಗೆ ಜಾಮೀನು ನೀಡಬಾರದೆಂದು ಮನವಿ ಮಾಡಿದರು. ಎರಡು ಕಡೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಸೋಮವಾರಕ್ಕೆ ಜಾಮೀನು ಆದೇಶವನ್ನ ಕಾಯ್ದಿರಿಸಿತು.

ಇದನ್ನೂ ಓದಿ: 'ಇದು ದರ್ಶನ್ ರಕ್ತಚರಿತ್ರೆ' -ಎಸ್​ಪಿಪಿ ಪ್ರಸನ್ನ ಕುಮಾರ್ ವಾದ: ದರ್ಶನ್​ಗೆ ಮತ್ತೆ ಸಿಗದ ಜಾಮೀನು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.