ತುಮಕೂರು: ಸೋಡಿಯಂ ಬಳಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಡ್ರೋನ್ ಪ್ರತಾಪ್‌ಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮಧುಗಿರಿ ಕೋರ್ಟ್ ಇಂದು ಆದೇಶ ನೀಡಿದೆ.
ಈ ತಿಂಗಳ 26ರ ವರೆಗೆ ನ್ಯಾಯಾಂಗ ಬಂಧನಕ್ಕೆ ಮಧುಗಿರಿಯ ಜೆಎಂಎಫ್ ಸಿ ನ್ಯಾಯಾಲಯದಿಂದ ಆದೇಶಿಸಲಾಗಿದೆ. ಇಂದು ಮಧುಗಿರಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್ನನ್ನು ಹಾಜರುಪಡಿಸಿದ್ದರು. ವಾದ ಆಲಿಸಿ 10 ದಿನಗಳ ಕಾಲ ಡ್ರೋನ್ ಪ್ರತಾಪ್ ಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಆದೇಶಿಸಲಾಗಿದೆ.
ಏನಿದು ಪ್ರಕರಣ: ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಡ್ರೋನ್ ಪ್ರತಾಪ್ ಸ್ಫೋಟಿಸಿದ್ದರು. ಬಳಿಕ ಸ್ಫೋಟಗೊಳ್ಳುವ ವಿಡಿಯೋವನ್ನು ಡ್ರೋನ್ ಪ್ರತಾಪ್ ಸಾಮಾಜಿಕ ಜಾಲತಾಣದಲ್ಲಿ, ಯೂಟ್ಯೂಬ್‌ನಲ್ಲೂ ಅಪ್ಲೋಡ್ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪ್ರತಾಪ್ ಅಲ್ಲದೇ, ಜಮೀನಿನ ಮಾಲೀಕ ಜಿತೇಂದ್ರ ಜೈನ್ ಮತ್ತು ಇತರರ ವಿರುದ್ಧ ಬಿಎನ್ಎಸ್ ಕಾಯ್ದೆ ಸೆಕ್ಷನ್ 176, ಸಿಆರ್‌ಪಿಸಿ 158ಎ ಮತ್ತು ಬಿ ಹಾಗೂ ಸ್ಫೋಟಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸೋಡಿಯಂ ಬಳಸಿ ಸ್ಫೋಟ ಪ್ರಕರಣ: ಡ್ರೋನ್ ಪ್ರತಾಪ್‌ಗೆ 3 ದಿನ ಪೊಲೀಸ್ ಕಸ್ಟಡಿ