ETV Bharat / state

ಅಪ್ರಾಪ್ತರ ಕೈಗೆ ವಾಹನ ಕೊಟ್ಟ 6 ಮಂದಿ ಪೋಷಕರಿಗೆ ತಲಾ ₹25 ಸಾವಿರ ದಂಡ - ಕೋರ್ಟ್‌ ದಂಡ

ಅಪ್ರಾಪ್ತರಿಗೆ ವಾಹನ ನೀಡಿದ್ದ ಆರು ಮಂದಿ ಪೋಷಕರಿಗೆ ಬೆಂಗಳೂರಿನ 2ನೇ ಎಂಎಂಟಿಸಿ ಸಂಚಾರ ನ್ಯಾಯಾಲಯ ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

court fined parents
ಅಪ್ರಾಪ್ತರಿಗೆ ವಾಹನಕೊಟ್ಟ ಪೋಷಕರಿಗೆ ದಂಡ
author img

By ETV Bharat Karnataka Team

Published : Feb 12, 2024, 7:20 PM IST

ಬೆಂಗಳೂರು: ಅಪ್ರಾಪ್ತರಿಗೆ ವಾಹನ ನೀಡಿ ಅಪಘಾತದ ಜೊತೆಗೆ ಅಪಾಯಕಾರಿ ವ್ಹೀಲಿಂಗ್ ಮಾಡಲು ಪರೋಕ್ಷವಾಗಿ ಕಾರಣವಾಗಿದ್ದ ಆರು ಮಂದಿ ಪೋಷಕರಿಗೆ ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 25 ಸಾವಿರ ದಂಡ ವಿಧಿಸಿ 2ನೇ ಎಂಎಂಟಿಸಿ ಸಂಚಾರ ನ್ಯಾಯಾಲಯ ಆದೇಶಿಸಿದೆ. ಅಪಾಪ್ತರಿಗೆ ವಾಹನ ಚಲಾಯಿಸಲು ನೀಡದಂತೆ ಸಂಚಾರ ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ ಪೋಷಕರು ನಿರ್ಲಕ್ಷ್ಯ ತೋರಿ ಮಕ್ಕಳ ಕೈಗೆ ದ್ವಿಚಕ್ರ ವಾಹನಗಳನ್ನು ನೀಡಿದ್ದರು.

ಈ ಪೈಕಿ ಅಜಾಗರೂಕತೆಯ ಚಾಲನೆಯಿಂದ ಇಬ್ಬರು ಮೂರು ಅಪಘಾತವೆಸಗಲು ಕಾರಣರಾದರೆ, ಇನ್ನು ಮೂವರು ವಾಹನ ಸವಾರರು ಅಪಾಯಕಾರಿ ವ್ಹೀಲಿಂಗ್ ಮಾಡಿ ಸಂಚಾರ‌ ನಿಯಮ ಉಲಂಘಿಸಿದ್ದರು. ಕಾಮಾಕ್ಷಿಪಾಳ್ಯ ಟ್ರಾಫಿಕ್ ಪೊಲೀಸರು ಕಳೆದ ವರ್ಷ ಪ್ರತ್ಯೇಕ ಆರು ಪ್ರಕರಣಗಳನ್ನು ದಾಖಲಿಸಿ ಬಾಲ ನ್ಯಾಯಮಂಡಳಿಗೆ ಅಪ್ರಾಪ್ತ ವಾಹನ ಸವಾರರ ಪೋಷಕರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 18 ವರ್ಷದೊಳಗಿನ ಮಕ್ಕಳಿಗೆ ದ್ವಿಚಕ್ರ ವಾಹನ ಸವಾರ ಮಾಡಲು ಅವಕಾಶ ನೀಡಿದ ಆರು ಮಂದಿ ಪೋಷಕರಿಗೆ ಜುಲ್ಮಾನೆ ವಿಧಿಸಿದೆ.

ನಿರಂತರ ಕಾರ್ಯಾಚರಣೆ: "ವ್ಹೀಲಿಂಗ್ ಮಾತ್ರವಲ್ಲದೆ ಸಿಗ್ನಲ್‌ ಜಂಪ್, ವೇಗವಾಗಿ ಚಾಲನೆ, ಹೆಲ್ಮೆಟ್‌ರಹಿತ ಚಾಲನೆ ಸೇರಿದಂತೆ ಇನ್ನಿತರ ಸಂಚಾರ ನಿಯಮ ಉಲ್ಲಂಘಿಸಿದ್ದ ಅಪ್ರಾಪ್ತ ವಾಹನ ಸವಾರರ ಬಗ್ಗೆ ಗಮನಹರಿಸಲಾಗುತ್ತಿದೆ. ಕಳೆದ‌ ನವೆಂಬರ್​ನಿಂದ ಇದುವರೆಗೂ ಅಪ್ರಾಪ್ತ ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.‌ ಈ ಪೈಕಿ ಇತ್ತೀಚೆಗೆ ಕಾಮಾಕ್ಷಿಪಾಳ್ಯದಲ್ಲಿ ದಾಖಲಾಗಿದ್ದ ಆರು ಪ್ರತ್ಯೇಕ ಪ್ರಕರಣಗಳಲ್ಲಿ ಪೋಷಕರಿಗೆ ನ್ಯಾಯಾಲಯವು ಒಟ್ಟು 1.50 ಲಕ್ಷ ರೂ ದಂಡ ಹಾಕಿದೆ. ಅಪ್ರಾಪ್ತ ವಾಹನ ಸವಾರರ ವಿರುದ್ಧ ಕಾರ್ಯಾಚರಣೆ ನಿರಂತರವಾಗಿ ಮುಂದುವರೆಸಲಾಗಿದೆ" ಎಂದು ಪಶ್ಚಿಮ ವಲಯದ ಸಂಚಾರ ಡಿಸಿಪಿ ಅನಿತಾ ಬಿ.ಹದ್ದಣನವರ್ ತಿಳಿಸಿದ್ದಾರೆ.

ಇದನ್ನೂ ಓದಿ: 300ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘನೆ: ಸ್ಕೂಟರ್‌ ಮಾಲೀಕನಿಗೆ ₹3.20 ಲಕ್ಷ ದಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.