ETV Bharat / state

ಕುಕ್ಕರ್ ಸ್ಫೋಟ: ಸವದತ್ತಿ‌ ಯಲ್ಲಮ್ಮನ ದರ್ಶನಕ್ಕೆ ಬಂದಿದ್ದ 8 ಜನರಿಗೆ ಗಾಯ - Cooker Blast - COOKER BLAST

ಕುಕರ್​ ಸ್ಫೋಟಗೊಂಡು ಗಾಯಗೊಂಡ 8 ಮಂದಿಯಲ್ಲಿ ಇಬ್ಬರನ್ನು ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಗೆ ಹಾಗೂ 6 ಮಂದಿಯನ್ನು ಸವದತ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Cooker blast
ಕುಕ್ಕರ್ ಸ್ಫೋಟಗೊಂಡು ಇಬ್ಬರಿಗೆ ಗಂಭೀರ ಗಾಯ (ETV Bharat)
author img

By ETV Bharat Karnataka Team

Published : Aug 13, 2024, 5:06 PM IST

Updated : Aug 13, 2024, 7:15 PM IST

ಬೆಳಗಾವಿ: ಕುಕ್ಕರ್ ಸ್ಫೋಟಗೊಂಡು ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಸವದತ್ತಿಯಲ್ಲಿ ಮಂಗಳವಾರ ನಡೆಯಿತು. ಗಾಯಾಳುಗಳು ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕೆ ಬಂದಿದ್ದರು.

ಕುಕ್ಕರ್ ಸ್ಫೋಟ (ETV Bharat)

ಬೆಂಗಳೂರಿನಿಂದ 5, ಯಾದಗಿರಿ ಜಿಲ್ಲೆಯಿಂದ ಆಗಮಿಸಿದ್ದ ಮೂವರು ಸವದತ್ತಿಯ ಶ್ರೀ ರೇಣುಕಾ ಸಾಗರ ಲಾಡ್ಜ್​ನಲ್ಲಿ ತಂಗಿದ್ದರು. ಈ ವೇಳೆ ಹೋಳಿಗೆ‌ ಮಾಡಲು ಕುಕ್ಕರ್​ನಲ್ಲಿ ಬೇಳೆ ಬೇಯಿಸಲು ಗ್ಯಾಸ್ ಹೊತ್ತಿಸಿದ್ದಾರೆ. ಕುಕ್ಕರ್ ಎರಡು ಸೀಟಿಯಾದ ಬಳಿಕ ಸ್ಫೋಟಗೊಂಡಿದೆ.

ಗಂಭೀರವಾಗಿ ಗಾಯಗೊಂಡ ಇಬ್ಬರು ಮಹಿಳೆಯರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ, ಸಣ್ಣಪುಟ್ಟ ಗಾಯಗೊಂಡ 6 ಜನರನ್ನು ಸವದತ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ‌ ನಂದಿಸಲು ಹರಸಾಹಸಪಟ್ಟರು.

ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಳಗಾವಿ ಬೆಂಕಿ ದುರಂತ: ಮೃತ ಕಾರ್ಮಿಕನ ಕುಟುಂಬಸ್ಥರಿಗೆ ಸಚಿವೆ ಹೆಬ್ಬಾಳ್ಕರ್ ಸಾಂತ್ವನ - Belagavi Fire Tragedy

Last Updated : Aug 13, 2024, 7:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.