ETV Bharat / state

ಬೆಂಗಳೂರು: ಪಾಸ್‌ಪೋರ್ಟ್​ ವೆರಿಫಿಕೇಷನ್​ ವೇಳೆ ಯುವತಿಗೆ ಕಿರುಕುಳ ಆರೋಪ: ಕಾನ್ಸ್‌ಟೇಬಲ್‌ ಅಮಾನತು - CONSTABLE SUSPENDED

ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಯುವತಿಗೆ ಪಾಸ್‌ಪೋರ್ಟ್​ ವೆರಿಫಿಕೇಷನ್​ ಸಂದರ್ಭದಲ್ಲಿ ಕಿರುಕುಳ ನೀಡಿದ ಆರೋಪಕ್ಕೆ ಕಾನ್ಸ್‌ಟೇಬಲ್​ರನ್ನು ಅಮಾನತುಗೊಳಿಸಲಾಗಿದೆ.

HARASSMENT BY CONSTABLE
ಬೆಂಗಳೂರು: ಪಾಸ್‌ಪೋರ್ಟ್​ ವೆರಿಫಿಕೇಷನ್​ ವೇಳೆ ಯುವತಿಗೆ ಕಿರುಕುಳ ನೀಡಿದ ಆರೋಪ : ಕಾನ್ಸ್‌ಟೇಬಲ್‌ ಅಮಾನತು (ETV Bharat)
author img

By ETV Bharat Karnataka Team

Published : Dec 2, 2024, 1:27 PM IST

ಬೆಂಗಳೂರು: ಪಾಸ್‌ಪೋರ್ಟ್​ ವೆರಿಫಿಕೇಷನ್​ ಸಂದರ್ಭದಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪ ಪೊಲೀಸ್​​​ ಕಾನ್ಸ್‌ಟೇಬಲ್‌ವೊಬ್ಬರ ವಿರುದ್ದ ಕೇಳಿ ಬಂದಿದೆ.

ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಹಿಳಾ ಟೆಕ್ಕಿಯಿಂದ ಆರೋಪ ಕೇಳಿ ಬಂದ ಬೆನ್ನಲ್ಲೇ, ಅಸಭ್ಯ ವರ್ತನೆ ತೋರಿದ ಕಾನ್ಸ್‌ಟೇಬಲ್​​ ಕಿರಣ್​ ಎಂಬಾತನನ್ನು ಅಮಾನತುಗೊಳಿಸಲಾಗಿದೆ. ಬಾಪೂಜಿ ನಗರದ ನಿವಾಸಿಯಾಗಿರುವ ಯುವತಿಯೊಬ್ಬರು ವಿದೇಶದಲ್ಲಿ ಉನ್ನತ ವ್ಯಾಸಂಗ ಪಡೆಯಲು ಇತ್ತೀಚೆಗೆ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಪಾಸ್​ಪೋರ್ಟ್​​ ವೆರಿಫಿಕೇಷನ್​ಗೆ ಎಂದು ಯುವತಿಯ ಮನೆಗೆ ತೆರಳಿದ್ದ ಬ್ಯಾಟರಾಯನಪುರ ಠಾಣೆಯ ಪೊಲೀಸ್​ ಕಾನ್​ಸ್ಟೇಬಲ್​ ಕಿರಣ್​, ಅಸಭ್ಯ ವರ್ತನೆ ತೋರಿದ್ದ ಎಂದು ಆರೋಪಿಸಲಾಗಿದೆ.

ವೆರಿಫಿಕೇಷನ್​​​ ನೆಪದಲ್ಲಿ ಯುವತಿಯ ಮನೆಗೆ ಬಂದ ಕಾನ್ಸ್​​​​ಟೇಬಲ್​ ​ಕಿರಣ್​, ಮನೆ ಒಳ ಪ್ರವೇಶಿಸಿ ಅರ್ಧ ಬಾಗಿಲು ಮುಚ್ಚಿದ್ದಾನೆ. ನಂತರ ಯುವತಿ ಬಳಿ, "ನಿಮ್ಮ ಸಹೋದರ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ನಿನ್ನ ಪಾಸ್​ಪೋರ್ಟ್ ಕ್ಯಾನ್ಸಲ್ ಆಗಬಹುದು. ನೀನು ನನಗೆ ಸಹಕರಿಸಬೇಕು, ಬಾಗಿಲು ಹಾಕು" ಎಂದಿದ್ದಾನೆ. ಯುವತಿ ಒಪ್ಪದಿದ್ದಾಗ ತಾನೇ ಹೋಗಿ ಬಾಗಿಲು ಮುಚ್ಚಿದ್ದಾನೆ. ಅಲ್ಲದೇ, ಯಾರಿಗೂ ಹೇಳಬೇಡ, ಒಂದೇ ಒಂದ್ ಸಲ ಹಗ್ ಮಾಡುತ್ತೇನೆ" ಎಂದಿದ್ದಾಗಿ ಆರೋಪಿಸಲಾಗಿದೆ.

"ಯುವತಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಂತೆಯೇ ಮನೆಯ ಮತ್ತೊಂದು ಕೊಠಡಿಯಲ್ಲಿ ಆಕೆಯ ಸಹೋದರ ಇರುವುದು ಪೊಲೀಸ್ ಕಾನ್ಸ್​​​ಟೇಬಲ್​​ ಗಮನಕ್ಕೆ ಬಂದಿದೆ. ಆಗ ವರಸೆ ಬದಲಾಯಿಸಿದ ಕಿರಣ್​, "ನೀನು ಒಳಗೆ ಇದ್ದೆ ಎಂದೇ ನಾನು ಹೀಗೆ ವರ್ತಿಸಿದೆ. ನಿನ್ನ ತಂಗಿ ನನ್ನ ತಂಗಿ ಇದ್ದ ಹಾಗೆ" ಎಂದು ಮನೆಯಿಂದ ತೆರಳಿದ್ದಾನೆ. ಬಳಿಕ ವೆರಿಫಿಕೇಷನ್ ಬಗ್ಗೆ ಮಾಹಿತಿ ನೀಡದೇ ನಂಬರ್ ಬ್ಲಾಕ್ ಮಾಡಿದ್ದಾನೆ" ಎಂದು ಯುವತಿ ಪಶ್ಚಿಮ ವಿಭಾಗ ಡಿಸಿಪಿಗೆ ದೂರು ನೀಡಿದ್ದರು.

ತನಿಖೆ ನಡಿಸಿದ ಬಳಿಕ ಕಾನ್ಸ್‌ಟೇಬಲ್​ ಕಿರಣ್​ನನ್ನು ಪಶ್ಚಿಮ ವಿಭಾಗದ ಡಿಸಿಪಿ ಎಸ್​. ಗಿರೀಶ್​​ ಅಮಾನತುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಹುಬ್ಬಳ್ಳಿ: ತಂದೆ ಕೊಲೆ ಮಾಡಿ ಪರಾರಿಯಾಗಿದ್ದ ಮಗ - ಸೊಸೆ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.