ETV Bharat / state

ಕಾಂಗ್ರೆಸ್ ಯಾರ ಮೇಲೂ ದ್ವೇಷ ರಾಜಕಾರಣ ಮಾಡಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ - D K Shivakumar - D K SHIVAKUMAR

ಕಾಂಗ್ರೆಸ್ ಯಾರ ಮೇಲೆ ದ್ವೇಷ ರಾಜಕಾರಣ ಮಾಡುವುದಿಲ್ಲ. ನಮಗೆ ಅದರ ಅವಶ್ಯಕತೆ ಇಲ್ಲ. ಆದರೆ ಬಿಜೆಪಿ ದ್ವೇಷ ರಾಜಕಾರಣದ ಬಗ್ಗೆ ಮಾತನಾಡಿದ್ರೆ ಅದು ಎಲ್ಲೆಲ್ಲಿಗೋ ಹೋಗುತ್ತದೆ ಎಂದು ಡಿಸಿಎಂ ತಿರುಗೇಟು ನೀಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)
author img

By ETV Bharat Karnataka Team

Published : Jun 14, 2024, 5:53 PM IST

ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

ಬೆಂಗಳೂರು: ನಾವು ಯಾರ ಮೇಲೂ ದ್ವೇಷದ ರಾಜಕೀಯ ‌ಮಾಡಲ್ಲ. ಆ ರೀತಿಯ ರಾಜಕೀಯ ಮಾಡಿದ್ದರೆ ಮೊದಲ ದಿನವೇ ‌ಮಾಡುತ್ತಿದ್ವಿ. ನಮಗೆ ಅದರ ಅವಶ್ಯಕತೆ ಇಲ್ಲ. ನಾವು ಯಾವುದಕ್ಕೂ ಮಧ್ಯೆ ಹೋಗಲ್ಲ. ದ್ವೇಷ ರಾಜಕಾರಣ ಮಾಡುವುದಾದರೆ ಪ್ರಕರಣ ದಾಖಲಾದ ತಕ್ಷಣ ಕ್ರಮ ತೆಗೆದುಕೊಳ್ಳುತ್ತಿದ್ದೆವು. ಪಾಪ ಅವರು ಮಾತನಾಡಬೇಕು ಮಾತನಾಡ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿ ಬಳಿ ಮಾತನಾಡಿದ ಅವರು, ಯಡಿಯೂರಪ್ಪ ಮೇಲೆ ದ್ವೇಷದ ರಾಜಕೀಯ ಅಂತ‌ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನೋಡಿ ನಾವ್ಯಾಕೆ ದ್ವೇಷದ ರಾಜಕೀಯ ‌ಮಾಡಬೇಕು?. ನಮಗೆ ಅವಶ್ಯಕತೆ ಇಲ್ಲ ಎಂದರು.

ಬಿಜೆಪಿಯವರು ಕೇಸ್​​ ಹಾಕಿಸಿದ್ರು: ಕಾಂಗ್ರೆಸ್ ಯಾರ ಮೇಲೆ ದ್ವೇಷ ರಾಜಕಾರಣ ಮಾಡುವುದಿಲ್ಲ. ಬಿಜೆಪಿಯವರು ನಮ್ಮ ಮೇಲೆ ಕೇಸು ಹಾಕಿಸಿ ಕೋರ್ಟಿಗೆ ಹೋಗುವಂತೆ ಮಾಡಿದ್ದು ದ್ವೇಷ ರಾಜಕಾರಣ ಅಲ್ಲವೇ ಎಂದು ಬಿಬಿಎಂಪಿ ವತಿಯಿಂದ ಕಬ್ಬನ್‌ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದ ನಂತರ ಡಿಕೆಶಿ ವರದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ದ್ವೇಷ ರಾಜಕಾರಣದ ಬಗ್ಗೆ ನಾನು ಮಾತನಾಡಲು ಆರಂಭಿಸಿದರೆ ಅದು ಎಲ್ಲೆಲ್ಲಿಗೋ ಹೋಗುತ್ತದೆ. ನನಗೆ ಅದರ ನೋವು ಗೊತ್ತು. ನಾನು ಅನುಭವಿಸಿದ್ದೇನೆ. ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ. ಹಿಂದಿನ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜಾಹೀರಾತು ನೀಡಿದ್ದ ಬಗ್ಗೆ ನಮ್ಮ ಮೇಲೆ ಕೇಸು ದಾಖಲಿಸಿದೆ, ಅದನ್ನು ಎದುರಿಸುತ್ತೇವೆ. ಆದರೆ ರಾಹುಲ್‌ಗಾಂಧಿ ಅವರನ್ನು ಮಧ್ಯೆ ತರಲು ಅವರೇನು ಕೆಪಿಸಿಸಿ ಅಥವಾ ಎಐಸಿಸಿ ಅಧ್ಯಕ್ಷರಾಗಿದ್ದರೇ? ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಕಾಮನ್‌ಸೆನ್ಸ್ ಇರಲಿಲ್ಲವೇ? ಅವರ ಪಕ್ಷದ ಎಂಎಲ್‌ಸಿ ಮೂಲಕ ಕೇಸು ಹಾಕಿಸಿದ್ದೇಕೆ ಎಂದು ಪ್ರಶ್ನಿಸಿದರು.

ರಾಹುಲ್‌ ಗಾಂಧಿ ಅವರಿಗೆ ಅವರದ್ದೇ ಆದ ತೊಂದರೆಗಳಿವೆ. ಯಡಿಯೂರಪ್ಪ ಅವರ ಪ್ರಕರಣದಲ್ಲಿ ಮೂಗು ತೂರಿಸುವ ಅಗತ್ಯ ಅವರಿಗಿಲ್ಲ. ಕಾಂಗ್ರೆಸ್‌‍ನವರು ದ್ವೇಷ ಸಾಧಿಸಲು ನೀಚ ರಾಜಕಾರಣ ಮಾಡುವುದಿಲ್ಲ ಎಂದರು.

ಇದನ್ನೂ ಓದಿ: 159 ಬಾರಿ ರಕ್ತದಾನ ಮಾಡಿ 80 ನವಜಾತು ಶಿಶುಗಳನ್ನು ಉಳಿಸಿರುವ ರಕ್ತದಾನಿ ಆದಿ ಕೇಶವ್: ಬೆಣ್ಣೆ ನಗರಿಯಲ್ಲಿದೆ ರಕ್ತದಾನಿ ಕುಟುಂಬ - Blood Donor Family

ಇವತ್ತು ಪಕ್ಷದ ಹಿರಿಯ ‌ನಾಯರ ಸಭೆ ಮಾಡಿದೆವು. ಪಕ್ಷದ ಸಂಘಟನೆ ಬಗ್ಗೆ ಸಲಹೆ ‌ಪಡೆದಿದ್ದೇನೆ. ಮೂಲ ಸಿದ್ಧಾಂತದ ಮೇಲೆ ಪಕ್ಷ ಕಟ್ಟಲು ಸಲಹೆ ಕೊಟ್ಟಿದ್ದಾರೆ. ನಿಗಮ ಮಂಡಳಿ‌ ಚೇರ್ಮನ್​​ಗಳ ಸಭೆ ಕೂಡ ಮಾಡಿದ್ದೇನೆ. ಪಕ್ಷದ ಜೊತೆಗೆ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬ ಬಗ್ಗೆ ಸೂಚನೆ ಕೊಟ್ಟಿದ್ದೇನೆ‌‌. ಬಹಳ ಹುಷಾರಾಗಿರಲು ಹೇಳಿದ್ದೇನೆ. ಯಾವ ರೀತಿಯಲ್ಲಿ ಟ್ರ್ಯಾಪ್ ಮಾಡ್ತಾರೆ ಅಂತ ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.

2028ಕ್ಕೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದೇ ತರುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಎಲ್ಲಾ ಸದಸ್ಯರು ಇದಕ್ಕಾಗಿ ಹಗಲು-ರಾತ್ರಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ನಾವು ವಿಶ್ವಮಾನವರಾಗಲು ಸಮಾಜದ ಅಭಿಪ್ರಾಯ ಮುಖ್ಯ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ಹಿನ್ನಡೆಯಾಗಿರುವುದು ಹಾಗೂ ಮತದಾನ ಏಕೆ ಈ ರೀತಿ ಆಗಿದೆ ಎಂಬುದರ ಕುರಿತು ನಿನ್ನೆ ರಾತ್ರಿ ಒಕ್ಕಲಿಗ ಮುಖಂಡರ ಸಭೆಯಲ್ಲಿ ದೊಡ್ಡ ಚರ್ಚೆಯಾಗಿದೆ. ಕಾಂಗ್ರೆಸ್‌‍ ಪಕ್ಷ ಸೋತಿದೆ. ಸೋಲನ್ನು ಒಪ್ಪಿಕೊಳ್ಳುತ್ತೇವೆ. ರಾಜಕಾರಣದಲ್ಲಿ ಸೋಲು-ಗೆಲುವು ಸಾಮಾನ್ಯ. ಚೆಲುವರಾಯಸ್ವಾಮಿ, ಬಾಲಕೃಷ್ಣ, ಬಂಡಿ ಸಿದ್ದನಗೌಡ ಸೇರಿದಂತೆ ಹಲವರು 50 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ಅದರ ನಂತರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆರು ತಿಂಗಳಲ್ಲಿ ಪರಿಸ್ಥಿತಿ ಬದಲಾಗುತ್ತಿದೆ. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಒಂದೇ ಸ್ಥಾನದಲ್ಲಿ ಗೆದ್ದಿತ್ತು. ಈಗ 9 ಸ್ಥಾನಗಳನ್ನು ಗೆದ್ದಿದ್ದೇವೆ. ಇನ್ನೂ ನಾಲ್ಕೈದು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಹಿನ್ನಡೆಯಾಗಿದೆ ಎಂದರು.

ಇದನ್ನೂ ಓದಿ: ಬಿ ರಿಪೋರ್ಟ್ ಹಾಕುವ ಕೇಸ್​ನಲ್ಲಿ ಬಿಎಸ್​ವೈ ಬಂಧನ ಯತ್ನ, ನಿಮಗೆ ದೊಡ್ಡ ನಷ್ಟವಾಗಲಿದೆ: ಕಾಂಗ್ರೆಸ್​ಗೆ ಸಿಟಿ ರವಿ ಟಾಂಗ್​ - CT Ravi Press Meet

ETV Bharat Logo

Copyright © 2025 Ushodaya Enterprises Pvt. Ltd., All Rights Reserved.