ETV Bharat / state

ಜೀವ ಕಳೆದುಕೊಳ್ಳಬೇಡಿ, ನಾನಿದ್ದೇನೆ: ಹನಿಟ್ರ್ಯಾಪ್​​, ಬ್ಲ್ಯಾಕ್‌ಮೇಲ್ ವಿರುದ್ಧ ಪ್ರತಿಭಾ ಕುಳಾಯಿ ಅಭಿಯಾನ - PRATIBHA KULAI CAMPAIGN

ಸಮಾಜದಲ್ಲಿ ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್‌ ಪ್ರಕರಣಗಳು ಹೆಚ್ಚುತ್ತಿದ್ದು, ಕೆಲವರು ಮಾನಕ್ಕೆ ಅಂಜಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲೆಂದೇ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ.

ಹನಿಟ್ರ್ಯಾಪ್​​, ಬ್ಲ್ಯಾಕ್‌ಮೇಲ್ ವಿರುದ್ಧ ಪ್ರತಿಭಾ ಕುಳಾಯಿ ಅಭಿಯಾನ
ಹನಿಟ್ರ್ಯಾಪ್​​, ಬ್ಲ್ಯಾಕ್‌ಮೇಲ್ ವಿರುದ್ಧ ಪ್ರತಿಭಾ ಕುಳಾಯಿ ಅಭಿಯಾನ (ETV Bharat)
author img

By ETV Bharat Karnataka Team

Published : Nov 15, 2024, 3:20 PM IST

ಮಂಗಳೂರು: ಡಿಜಿಟಲ್​​ ಜಗತ್ತಿನಲ್ಲಿ ಅಪರಾಧಗಳು ತೀವ್ರಗೊಳ್ಳುತ್ತಿದೆ. ಇದರಿಂದಾಗಿ ಸಮಾಜದಲ್ಲಿ ಸಾಕಷ್ಟು ಜನ ಹನಿಟ್ರ್ಯಾಪ್​ ಹಾಗೂ ಬ್ಲ್ಯಾಕ್‌ಮೇಲ್‌ಗೊಳಗಾಗುತ್ತಿದ್ದಾರೆ. ಪುರುಷರು ಮತ್ತು ಮಹಿಳೆಯರು ಭಯದಿಂದ ತಮ್ಮ ಮಾನ ಕಾಪಾಡಿಕೊಳ್ಳಲು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ, ಇನ್ನು ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲ್ ವಿರುದ್ಧ ಜನರಲ್ಲಿ ಧೈರ್ಯ ತುಂಬಲು ಒಂದು ಅಭಿಯಾನ ಆರಂಭಿಸಿದ್ದಾರೆ.

ಹನಿಟ್ರ್ಯಾಪ್‌ಗಾಗಿ ಪ್ರಾಣ ಕಳೆದುಕೊಂಡ ಘಟನೆ ಹಿನ್ನೆಲೆ: ಮಾಜಿ ಶಾಸಕ ಮೊಯ್ದಿನ್​ ಬಾವ ಅವರ ಸಹೋದರ, ಉದ್ಯಮಿ ಮುಮ್ತಾಜ್​ ಅಲಿ ಇತ್ತೀಚೆಗೆ ಹನಿಟ್ರ್ಯಾಪ್​ನ ಬಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಪ್ರತಿಭಾ ಕುಳಾಯಿ ಅವರಲ್ಲಿ ಆಘಾತ ಮೂಡಿಸಿದೆ ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಜನರಲ್ಲಿ ಜಾಗೃತಿ ಮೂಡಿಸಲು, ಧೈರ್ಯ ತುಂಬಲು ಅವರು ಮುಂದಾಗಿದ್ದಾರೆ.

ಹನಿಟ್ರ್ಯಾಪ್​​, ಬ್ಲ್ಯಾಕ್‌ಮೇಲ್ ವಿರುದ್ಧ ಪ್ರತಿಭಾ ಕುಳಾಯಿ ಅಭಿಯಾನ (ETV Bharat)

ಹನಿಟ್ರ್ಯಾಪ್​ಗೆ ಒಳಗಾದವರು ಅಥವಾ ಬ್ಲ್ಯಾಕ್​ ಮೇಲ್​ಗೆ ತುತ್ತಾದವರು ಪ್ರತಿಭಾ ಕುಳಾಯಿ ಅವರಲ್ಲಿ ಬಂದರೆ ಮೊದಲಿಗೆ ಅವರಲ್ಲಿ ಮನೋ ಧೈರ್ಯ ತುಂಬಿಸುತ್ತಾರೆ. ಎಂಎಸ್​ಡಬ್ಲ್ಯು ಪದವೀಧರೆಯಾಗಿರುವ ಪ್ರತಿಭಾ ಕುಳಾಯಿ ಈ ಬಗ್ಗೆ ಅರಿತುಕೊಂಡಿದ್ದಾರೆ. ಆ ಬಳಿಕ ಸಂತ್ರಸ್ತರಿಗೆ ಕಾನೂನು ನೆರವು ನೀಡುತ್ತಾರೆ. ನೇರವಾಗಿ ಕಮಿಷನರ್​​ ಅಥವಾ ಉನ್ನತ ಅಧಿಕಾರಿಗಳ ಬಳಿಗೆ ಕರೆದುಕೊಂಡು ಹೋಗಿ ಸಮಸ್ಯೆ ಬಗೆ ಹರಿಸಲು ಯತ್ನಿಸುತ್ತಾರೆ. ಈ ಯಾವುದೇ ವಿಚಾರಗಳು ಮಾಧ್ಯಮ ಸೇರಿದಂತೆ ಎಲ್ಲಿಯೂ ಹೊರಬರದಂತೆ ನೋಡಿಕೊಳ್ಳುತ್ತಾರೆ. ಈಗಾಗಲೇ ಇವರ ಬಳಿ 7 ಪ್ರಕರಣಗಳು ಬಂದಿದ್ದು, ಇದರಲ್ಲಿ 5 ಪ್ರಕರಣಗಳ ಇತ್ಯರ್ಥ ಆಗಿದೆ.

ಈ ಬಗ್ಗೆ ಕುಳಾಯಿ ಹೇಳುವುದೇನು?: ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಪ್ರತಿಭಾ ಕುಳಾಯಿ, "ಹನಿಟ್ರ್ಯಾಪ್​ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣಗಳು ಇತ್ತೀಚೆಗೆ ಸಾಮಾನ್ಯವಾಗಿದ್ದು, ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಮೊಬೈಲ್​ ಮೂಲಕ, ವಾಟ್ಸ್​ಆ್ಯಪ್​​ ಸಂದೇಶಗಳ ಮೂಲಕ, ಹಲವರು ಬ್ಲ್ಯಾಕ್‌ಮೇಲ್‌ಗೆ ಒಳಗಾಗುತ್ತಿದ್ದಾರೆ. ನಾನು ಹಿಂದೆ ಈ ಬಗ್ಗೆ ಹೇಳಿಕೆ ನೀಡಿದ್ದೇನೆ. ಯಾರಾದರೂ ಹನಿಟ್ರ್ಯಾಪ್ ಅಥವಾ ಬ್ಲ್ಯಾಕ್‌ಮೇಲ್‌ನಿಂದ ತೊಂದರೆ ಅನುಭವಿಸುತ್ತಿದ್ದರೆ, ನನ್ನ ಬಳಿ ಸಹಾಯ ಕೇಳಬಹುದು ಎಂದು ಹೇಳಿದ್ದೇನೆ".

"ಮೊದಲು, ನಾನು ಪುರುಷರು ಮಾತ್ರ ಈ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ ಎಂದು ಭಾವಿಸಿದೆ. ಆದರೆ ಈಗಿರುವಂತೆ ಏಳು - ಎಂಟು ಮಹಿಳೆಯರು ಸಹ ನನ್ನ ಬಳಿ ಬಂದು ಸಹಾಯ ಕೇಳಿದ್ದಾರೆ. ಈ ಮಹಿಳೆಯರು ತಮಗೆ ಬ್ಲ್ಯಾಕ್‌ಮೇಲ್ ಆಗುತ್ತಿರುವ ಬಗ್ಗೆ ವಿವರಿಸಿದ್ದಾರೆ. ಅವುಗಳಲ್ಲಿ ಕೆಲವರು 12,000 ರೂಪಾಯಿಗಳಷ್ಟು ಹಣ ನೀಡುತ್ತಲೇ ಇರುವ ಪರಿಸ್ಥಿತಿ. ಈ ಮಹಿಳೆಯನ್ನು ಪ್ರೀತಿಯಲ್ಲಿ ಬಲೆಗೆ ಬಿಸಿ, ಅವರ ವಿಡಿಯೋ ಮಾಡುವುದು ಮತ್ತು ಅದರಿಂದ ಬ್ಲ್ಯಾಕ್‌ಮೇಲ್ ಮಾಡುವುದು ನಡೆದಿದೆ" ಎಂದರು.

"ಮಣಿಪಾಲದಲ್ಲಿ ಕೆಲವು ವರ್ಷಗಳ ಹಿಂದೆಯೂ ಇದೇ ರೀತಿಯ ಪ್ರಕರಣವೊಂದು ನಡೆದಿತ್ತು. ಒಬ್ಬ ಮದುವೆಯಾದ ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡಿ ಪ್ರಾಣ ಕಳೆದುಕೊಂಡ ಘಟನೆ ಉಂಟಾಗಿದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು, ವಿಶೇಷವಾಗಿ ನಮ್ಮ ಪೊಲೀಸ್ ಕಮಿಷನರ್, ಇಂತಹ ಪ್ರಕರಣಗಳನ್ನು ನಿಭಾಯಿಸುವಲ್ಲಿ ಅತ್ಯುತ್ತಮರು. ಇವರ ನೆರವು ನಿಜಕ್ಕೂ ಜನರಿಗೆ ಅನುಕೂಲವಾಗುತ್ತದೆ. ನಾವು ಪ್ರತಿಯೊಬ್ಬರೂ ನಮ್ಮ ಮೊಬೈಲ್ ಬಳಸುವಾಗ ಎಚ್ಚರದಿಂದ ಇರಬೇಕು".

"ಸಾಮಾನ್ಯವಾಗಿ ಪುರುಷರಿಂದ ಸಂದೇಶ ಬಂದರೆ ಮಹಿಳೆಯರು ಉತ್ತರ ನೀಡಲು ಚಿಂತಿಸುತ್ತಾರೆ, ಆದರೆ ಮಹಿಳೆಯ ಹೆಸರಿನಲ್ಲಿ ಸಂದೇಶ ಬಂದರೆ ತಕ್ಷಣವೇ ನಂಬುತ್ತಾರೆ. ಹಲವಾರು ಮೊಬೈಲ್ ಮಾರಾಟದ ಹೆಸರಿನಲ್ಲಿ ಮೊದಲು ಪರಿಚಯ ಬೆಳೆಸುತ್ತಾರೆ, ನಂತರ ಕಿರುಕುಳಕ್ಕೆ ಒಳಪಡಿಸುತ್ತಾರೆ. ಈ ಹೊಸ ಟ್ರೆಂಡ್‌ಗೆ ತುತ್ತಾಗದಂತೆ ನಾವು ಎಚ್ಚರಿಕೆಯಿಂದ ಇರಬೇಕು" ಎಂದರು.

ಮಕ್ಕಳ ಬಳಕೆಯ ಕುರಿತಾಗಿ ಎಚ್ಚರಿಕೆ: "ನಮ್ಮ ಮಕ್ಕಳ ಮೊಬೈಲ್ ಬಳಕೆಯ ಕುರಿತಾಗಿಯೂ ಹೆಚ್ಚು ಜಾಗ್ರತೆ ವಹಿಸಬೇಕು. ಅವರ ಚಲನವಲನಗಳ ಮೇಲೆ ಗಮನ ಹರಿಸಬೇಕು ಎಂದು ಪೋಷಕರಿಗೆ ಪ್ರತಿಭಾ ಕುಳಾಯಿ ಎಚ್ಚರಿಕೆ ನೀಡಿದ್ದಾರೆ.

"ನಮ್ಮ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ಇಲಾಖೆ ಮತ್ತು ಕಾನೂನಿನ ವಿರುದ್ಧ ಭಯಪಡುವ ಅಗತ್ಯವಿಲ್ಲ. ನಾನು ಮಂಗಳೂರಿನ ಕಮಿಷನರ್​ ಕಚೇರಿಯಲ್ಲಿ ನಿಂತು ಈ ಸಂದೇಶವನ್ನು ಹಂಚುತ್ತಿದ್ದೇನೆ. ಯಾವುದೇ ಬಲೆಗೆ ಬಿದ್ದವರ ಹೆಸರನ್ನು ಬಹಿರಂಗ ಮಾಡುವುದಿಲ್ಲ. ಧೈರ್ಯದಿಂದ ಪೊಲೀಸರ ಬಳಿ ಹೋಗಿ ಕಾನೂನಿನ ನೆರವು ಪಡೆಯಲು ಚಿಂತಿಸಬೇಡಿ" ಎಂದಿದ್ದಾರೆ.

ಪ್ರತಿಭಾ ಕುಳಾಯಿ ಅವರ ಈ ಅಭಿಯಾನವು ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್​ ಪ್ರಕರಣಗಳಿಗೆ ಬಲಿಯಾಗುವವರಿಗೆ ಧೈರ್ಯ ತುಂಬಲು, ಕಾನೂನಿನ ನೆರವು ನೀಡಲು ಮತ್ತು ಸಮಾಜವನ್ನು ಈ ಅಪರಾಧಗಳಿಂದ ಮುಕ್ತಗೊಳಿಸಲು ಪ್ರಮುಖ ಹೆಜ್ಜೆಯಾಗಿದೆ.

ಇದನ್ನೂ ಓದಿ: ಧಾರವಾಡ: ಹನಿಟ್ರ್ಯಾಪ್ ಮಾಡುತ್ತಿದ್ದ ನಾಲ್ವರು ಸೆರೆ, ಚಿನ್ನಾಭರಣ ವಶಕ್ಕೆ

ಇದನ್ನೂ ಓದಿ: ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ; ಹನಿಟ್ರ್ಯಾಪ್ ಆರೋಪದಲ್ಲಿ ಮತ್ತೆ ಮೂವರ ಬಂಧನ

ಇದನ್ನೂ ಓದಿ: 'ಮುನಿರತ್ನ ಇಬ್ಬರು ಮಾಜಿ ಸಿಎಂಗಳನ್ನು ಹನಿಟ್ರ್ಯಾಪ್ ಮಾಡಿ, ಬೆದರಿಸಿ ಸಚಿವ ಸ್ಥಾನ ಪಡೆದರು': ಸಂತ್ರಸ್ತ ಮಹಿಳೆಯ ಗಂಭೀರ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.