ETV Bharat / state

ಇಬ್ಬರು ಬಲಾಢ್ಯರು ನಾಯಕತ್ವ ವಹಿಸಿದ್ದರು, ಇಷ್ಟೊಂದು ಕಳಪೆ ಫಲಿತಾಂಶ ನಿರೀಕ್ಷಿಸಿರಲಿಲ್ಲ: ಬಿ.ಕೆ.ಹರಿಪ್ರಸಾದ್ - BK Hariprasad

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಇಬ್ಬರು ಬಲಾಢ್ಯರು ನಾಯಕತ್ವ ವಹಿಸಿದ್ದರು. ಕನಿಷ್ಠ ಪಕ್ಷ 15 ರಿಂದ 18, 20 ಸ್ಥಾನ ಬರುತ್ತವೆ ಎಂಬ ನಿರೀಕ್ಷೆ ಇತ್ತು. ಆದರೆ, ಯಾವ ಕಾರಣಕ್ಕೆ ಇಂತಹ ಕೆಟ್ಟ ಫಲಿತಾಂಶ ಬಂದಿದೆ ಎಂದು ಚರ್ಚೆ ಮಾಡಲಾಗುತ್ತದೆ. ಇದರ ನಂತರ ಎಐಸಿಸಿ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ನೋಡಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.

Congress leader B.K. Hariprasad
ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ (ETV Bharat)
author img

By ETV Bharat Karnataka Team

Published : Jun 29, 2024, 8:19 PM IST

ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ (ETV Bharat)

ಬೆಂಗಳೂರು: ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಇಬ್ಬರು ಬಲಾಢ್ಯರು ನಾಯಕತ್ವ ವಹಿಸಿದ್ದರು. ಕನಿಷ್ಠ ಪಕ್ಷ ಕಾಂಗ್ರೆಸ್​ಗೆ 15ರಿಂದ 18, 20 ಸ್ಥಾನ ಬರುತ್ತವೆ ಎಂಬ ನಿರೀಕ್ಷೆ ಇತ್ತು. ಆದರೆ, ಜವಾಬ್ದಾರಿ ತೆಗೆದುಕೊಂಡಿರುವಂತವರು ಪಕ್ಷಕ್ಕೆ ಅನುಕೂಲ ಮಾಡದಿರುವ ಸಂದರ್ಭದಲ್ಲಿ ಯಾರಾದರೂ ಜವಾಬ್ದಾರಿ ತೆಗೆದುಕೊಳ್ಳಬೇಕಲ್ವಾ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಮಾರ್ಮಿಕವಾಗಿ ಹೇಳಿದರು.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸಿಎಂ, ಡಿಸಿಎಂ ಬದಲಾವಣೆ ಕುರಿತು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಏಕಾಏಕಿ ಚರ್ಚೆಗೆ ಬರಲು ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ. ಬಹುಶಃ ಲೋಕಸಭೆ ಚುನಾವಣಾ ಫಲಿತಾಂಶದ ನೋಡಿ ಕೆಲವರು ಆ ವಿಚಾರಗಳನ್ನು ತೆಗೆದಿರಬಹುದು. ಯಾಕೆಂದರೆ, ಚುನಾವಣೆಗೂ ಮುನ್ನ ಡಿಸಿಎಂ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಎಲ್ಲ ವರ್ಗದವರನ್ನು ಜೊತೆಗೆ ತೆಗೆದುಕೊಂಡು ಹೋಗಲು ಉಪಮುಖ್ಯಮಂತ್ರಿ ಸ್ಥಾನ ಮತ್ತೊಂದಷ್ಟು ಸಮುದಾಯಗಳಿಗೆ ಬೇಕು ಎಂದಿದ್ದರು. ಈಗ ಫಲಿತಾಂಶ ಬಂದ ನಂತರ ಆಗಿರುವುದನ್ನು ನೋಡಿದಾಗ, ಎಲ್ಲೋ ನಾವು ಎಡವಿದ್ದೇವೆ ಎಂದು ಅವರಿಗೆ ಅನಿಸಬಹುದು. ಅದಕ್ಕೆ ತಮ್ಮ ಬೇಡಿಕೆಯನ್ನು ಪುನರುಚ್ಛಾರ ಮಾಡುತ್ತಿರಬಹುದು ಎಂದು ಅಭಿಪ್ರಾಯ ಪಟ್ಟರು.

ಮುಂದುವರೆದು, ಜವಾಬ್ದಾರಿ ತೆಗೆದುಕೊಂಡಿರುವಂತವರು ಪಕ್ಷಕ್ಕೆ ಅನುಕೂಲ ಮಾಡದಿರುವ ಸಂದರ್ಭದಲ್ಲಿ ಯಾರಾದರೂ ಜವಾಬ್ದಾರಿ ತೆಗೆದುಕೊಳ್ಳಬೇಕಲ್ವಾ?. ಚುನಾವಣಾ ಫಲಿತಾಂಶದ ಬಹಳಷ್ಟು ನಿರೀಕ್ಷೆಯಲ್ಲಿದ್ದರು. ಕರ್ನಾಟಕದಲ್ಲಿ ಇಬ್ಬರು ಬಲಾಢ್ಯರು ನಾಯಕತ್ವ ವಹಿಸಿದ್ದಾರೆ. ಕನಿಷ್ಠ ಪಕ್ಷ 15ರಿಂದ 18, 20 ಸ್ಥಾನ ಬರುತ್ತವೆ ಎಂಬ ನಿರೀಕ್ಷೆ ಇತ್ತು. ರಾಹುಲ್​ ಗಾಂಧಿ ಅವರಿಗೆ ದೇಶದ ನಾಯಕತ್ವ ವಹಿಸಲು ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಬ್ಲಾಕ್​ ಮಟ್ಟದ ಕಾರ್ಯಕರ್ತರು ಸಹ ಹೋರಾಟ ಮಾಡುತ್ತಿದ್ದರು. ಆದರೆ, ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂದರು.

ಹೀಗಾಗಿ ನಿರೀಕ್ಷೆಯಿದ್ದ ಕೆಲವು ರಾಜ್ಯಗಳಲ್ಲಿ ಕಳಪೆ ಪ್ರದರ್ಶನದ ಬಗ್ಗೆ ವಿಚಾರಣೆ ಮಾಡಲು ಈಗಾಗಲೇ ಕಾಂಗ್ರೆಸ್​ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಮಧುಸೂಧನ್ ಮಿಸ್ತ್ರಿ ನೇತೃತ್ವದಲ್ಲಿ ಸಮಿತಿ ಕರ್ನಾಟಕಕ್ಕೆ ಬಂದು ವಿಚಾರಣೆ ಮಾಡಿದೆ. ಯಾವ ಕಾರಣಕ್ಕೆ ಇಂತಹ ಕೆಟ್ಟ ಫಲಿತಾಂಶ ಬಂದಿದೆ ಎಂದು ಚರ್ಚೆ ಮಾಡಲಾಗುತ್ತದೆ. ಇದರ ನಂತರ ಎಐಸಿಸಿ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ನಾವು ನೋಡಬೇಕಾಗುತ್ತದೆ ಎಂದು ತಿಳಿಸಿದರು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಖಿತ ಭಾರತ ಕಾಂಗ್ರೆಸ್​ ಸಮಿತಿಯ ಪ್ರಧಾನ ಕಾರ್ಯದರ್ಶಿಯಿಂದ ಹಿಡಿದು ಎಲ್ಲರೂ ಸಹ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕಾಗಿ 136 ಸ್ಥಾನಗಳು ಬಂದಿದ್ದವು. ಲೋಕಸಭೆ ಚುನಾವಣೆಯಲ್ಲಿ ಆ ಪ್ರಕ್ರಿಯೆ ಇರಲಿಲ್ಲ ಎಂಬುದು ನನ್ನ ಅನಿಸಿಕೆ. ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯುವ ಸಂದರ್ಭದಲ್ಲೇ ನಾನು ಯಾವ ರೀತಿ ಫಲಿತಾಂಶ ಬರುತ್ತದೆ ಎಂಬುದನ್ನು ಹೇಳಿದ್ದೆ. ಚುನಾವಣೆ ಬಂದ ನಂತರ, ಮಧ್ಯದಲ್ಲಿ ಹೇಳುವುದು ಬೇರೆ, ಪ್ರಕ್ರಿಯೆಯಲ್ಲೇ ನಾವು ಎಲ್ಲೋ ವಿಫಲವಾಗಿದ್ದೇವೆ ಎಂದು ಅನಿಸುತ್ತದೆ ಎಂದು ವಿವರಿಸಿದರು.

ಇದೇ ವೇಳೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಚಾರದ ಬಗ್ಗೆ ವೀರಪ್ಪ ‌ಮೊಯ್ಲಿ ಹೇಳಿದ್ದಾರೆ. ಮಂತ್ರಿಗಳ ಕ್ಷೇತ್ರದಲ್ಲಿ ಲೀಡ್ ಕಡಿಮೆ ಆಗಿದೆ. ಸಾರ್ವಜನಿಕವಾಗಿ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಸಂಘಟನೆ ಮಾಡಲು ಜಾತಿ ಬೇಕಾಗುತ್ತದೆ. ಸರ್ಕಾರ ಮಾಡಲು ಎಲ್ಲ ವರ್ಗದವರು ಬೇಕಾಗುತ್ತಾರೆ. ಹಿಂದುಳಿದ ವರ್ಗ ಬಹಳ ದೊಡ್ಡದಾಗಿದೆ. ಷೇರ್ ಅಂಡ್ ಕೇರ್ ಇರಬೇಕು ಎಂದು ಹೇಳಿದರು.

ಇದನ್ನೂ ಓದಿ: ಕುಣಿಗಲ್ ಶಾಸಕ ರಂಗನಾಥ್ ಆಯ್ಕೆ ಎತ್ತಿ ಹಿಡಿದ ಹೈಕೋರ್ಟ್; ಪರಾಜಿತ ಬಿಜೆಪಿ ಅಭ್ಯರ್ಥಿ ಅರ್ಜಿ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.