ETV Bharat / state

ಕಾಂಗ್ರೆಸ್ ಪರಾವಲಂಬಿ ಪಕ್ಷ, ಸರ್ಕಾರದ ಗ್ಯಾರಂಟಿಗಳು ಕೆಲಸ ಮಾಡುತ್ತಿಲ್ಲ: ಪ್ರಲ್ಹಾದ್​ ಜೋಶಿ - PRALHAD JOSHI

ದೇಶದ ಬಹುತೇಕ ಕಡೆ ಕಾಂಗ್ರೆಸ್ ಸೋತಿದೆ. ಗೆದ್ದೇ ಬಿಟ್ಟೆವು ಎಂದು ಜಿಲೇಬಿ ಹಂಚಿದ್ದ ಹರಿಯಾಣದಲ್ಲೂ ಆ ಪಕ್ಷ ಸೋಲು ಅನುಭವಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಟೀಕಿಸಿದರು.

ಪ್ರಲ್ಹಾದ್​ ಜೋಶಿ
ಪ್ರಲ್ಹಾದ್​ ಜೋಶಿ (ETV Bharat)
author img

By ETV Bharat Karnataka Team

Published : Oct 25, 2024, 6:13 PM IST

ಹಾವೇರಿ: "ಕಾಂಗ್ರೆಸ್ ಒಂದು ರೀತಿಯಲ್ಲಿ ಪರಾವಲಂಬಿ ಪಕ್ಷ. ದೇಶದ ಬಹುತೇಕ ಕಡೆ ಕಾಂಗ್ರೆಸ್ ಸೋತಿದೆ. ಗೆದ್ದೇ ಬಿಟ್ಟಿದ್ದೇವೆ ಎಂದು ಜಿಲೇಬಿ ಹಂಚಿದ್ದ ಹರಿಯಾಣದಲ್ಲೂ ಸೋಲು ಅನುಭವಿಸಿದೆ" ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಟೀಕಿಸಿದ್ದಾರೆ.

ಶಿಗ್ಗಾಂವಿಯಲ್ಲಿಂದು ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರದ ಗ್ಯಾರಂಟಿಗಳು ಕೆಲಸ ಮಾಡುತ್ತಿಲ್ಲ. ಮಹಿಳೆಯರಿಗೆ ಬಸ್ ಉಚಿತ ಇದೆ. ಆದರೆ ಬಸ್ ಸಂಖ್ಯೆ ಕಡಿಮೆ ಮಾಡಿದ್ದಾರೆ. ರಾಜ್ಯದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ 28 ರೂಪಾಯಿಗೆ ಕೆ.ಜಿ ಅಕ್ಕಿ ಕೊಡುತ್ತೇವೆ ಅಂದರೂ ಖರೀದಿಗೆ ಬರುತ್ತಿಲ್ಲ. ಕಾರಣ ಸರ್ಕಾರದ ಬಳಿ ದುಡ್ಡಿಲ್ಲ" ಎಂದು ಹೇಳಿದರು.

"ಕಾಂಗ್ರೆಸ್ ಪಕ್ಷದಂತೆ ನಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ. ಈ ಹಿಂದೆ ಬಸವರಾಜ ಬೊಮ್ಮಾಯಿ ಪಕ್ಷದ ಅಧ್ಯಕ್ಷರಾಗಿದ್ದರೆ, ಅವರ ಪುತ್ರನನ್ನು ಈಗ ಅಧ್ಯಕ್ಷನನ್ನಾಗಿ ಮಾಡಿದರೆ ಅದು ಕುಟುಂಬ ರಾಜಕೀಯ. ಆದರೆ ನಮ್ಮದು ಕುಟುಂಬ ರಾಜಕೀಯ ಅಲ್ಲ" ಎಂದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, "ದೊಡ್ಡ ಮತಗಳ ಅಂತರದಲ್ಲಿ ಶಿಗ್ಗಾಂವಿ ಕ್ಷೇತ್ರ ಗೆಲ್ಲುತ್ತೇವೆ. ಚುನಾವಣೆ ಫಲಿತಾಂಶದವರೆಗೆ ಕಾಯುವ ಅವಶ್ಯಕತೆ ಇಲ್ಲ. ಇವತ್ತಿನ ಮೆರವಣಿಗೆ ನೋಡಿದರೆ ನಿಮಗೇ ಅರ್ಥವಾಗುತ್ತೆ. ಮೂರು ಕ್ಷೇತ್ರಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯಕ್ಕೆ ಎಲ್ಲ ವರ್ಗದ ಜನರು ನಮಗೆ ಬೆಂಬಲ ನೀಡುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, "ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿಯಾಗಿ ಭರತ್ ನಿನ್ನೆ ಒಳ್ಳೆಯ ಸಮಯದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇಂದು ರಾಜ್ಯ ಮಟ್ಟದ ನಾಯಕರ ಜೊತೆ ಹೋಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ದಾಖಲೆ ಮತಗಳ ಅಂತರದಿಂದ ನಾವು ಗೆಲ್ಲುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆ: ಇಂದು ಯಾಸೀರ್ ಖಾನ್ ಪಠಾಣ್, ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.