ETV Bharat / state

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ: ಭರತ್ ಬೊಮ್ಮಾಯಿ

ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ನೀಡಿರುವುದು ಶಾಶ್ವತ ಗ್ಯಾರಂಟಿ. ನಾವು ಪರ್ಮನೆಂಟ್ ಕೆಲಸಗಳನ್ನೇ ಮಾಡೋದು ಎಂದು ಶಿಗ್ಗಾಂವಿ ಎನ್​ಡಿಎ ಅಭ್ಯರ್ಥಿ ಭರತ್​ ಬೊಮ್ಮಾಯಿ ಹೇಳಿದರು.

ಭರತ್ ಬೊಮ್ಮಾಯಿ
ಭರತ್ ಬೊಮ್ಮಾಯಿ (ETV Bharat)
author img

By ETV Bharat Karnataka Team

Published : Oct 27, 2024, 3:21 PM IST

ಹಾವೇರಿ: "ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ. ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ನೀಡಿರುವುದು ಶಾಶ್ವತ ಗ್ಯಾರಂಟಿ" ಎಂದು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಎನ್​ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿದರು. ಶಿಗ್ಗಾಂವಿ ತಾಲೂಕಿನ ಮಣ್ಣೂರಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದ ಬಳಿಕ ಮಾತನಾಡಿದರು.

"ನಾವು ಇಲ್ಲಿ 5 ಸಾವಿರ ಹೆಣ್ಣು ಮಕ್ಕಳಿಗೆ ಕೆಲಸ ಕೊಟ್ಟಿದ್ದೇವೆ, ಇದು ಪರ್ಮನೆಂಟ್ ಗ್ಯಾರಂಟಿ. ಇದನ್ನು ಯಾರೂ ಕಿತ್ತುಕೊಳ್ಳೋಕೆ ಆಗಲ್ಲ. ಅಧಿಕಾರಕ್ಕೆ ಬರಲು ಕಾಂಗ್ರೆಸ್ ನೀಡಿದ ಗ್ಯಾರಂಟಿಗಳು‌ ಟೆಂಪರರಿ ಗ್ಯಾರಂಟಿ. ಕೃಷಿಗೆ, ಕುಡಿಯಲು‌ ನೀರು ಕೊಟ್ಟಿದ್ದೇವೆ. ನಾವು ಪರ್ಮನೆಂಟ್ ಕೆಲಸಗಳನ್ನೇ ಮಾಡೋದು" ಎಂದು ಹೇಳಿದರು.

ಭರತ್ ಬೊಮ್ಮಾಯಿ (ETV Bharat)

"ಹಿಂದೆ 2018, 2023ರಲ್ಲಿ ಎಲ್ಲಾ ಊರು, ಪಟ್ಟಣಗಳಲ್ಲಿ ಓಡಾಡಿ ತಂದೆಯ ಪರ ಪ್ರಚಾರ ಮಾಡಿದ್ದೆ. ಈಗ ನನಗೆ ಆಶೀರ್ವಾದ ಮಾಡಿ‌. ತಂದೆಯವರ ಮೂರ್ನಾಲ್ಕು ಕನಸಿದೆ, ಅದನ್ನು ನನಸು ಮಾಡುವೆ. ಯುವಕನಾಗಿ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡುವೆ. ನಮ್ಮ ತಂದೆ ನ್ಯಾಷನಲ್ ಪಾರ್ಲಿಮೆಂಟರಿ ಕಮಿಟಿ ಸ್ಕಿಲ್ ಡೆವಲಪ್ಮೆಂಟ್ ಚೇರ್ಮನ್​ ಆಗಿದ್ದಾರೆ. ಇಲ್ಲಿ ಇನ್ನಷ್ಟು ಕೈಗಾರಿಕೆಗಳನ್ನು ತರುವ ಉದ್ದೇಶ ಇದೆ" ಎಂದರು.

"ಎಲ್ಲಾ ಕಡೆ ಒಳ್ಳೆ ಪ್ರತಿಕ್ರಿಯೆ ಇದೆ. ಕಾರ್ಯಕರ್ತರು, ಎಲ್ಲಾ ಸಮುದಾಯದ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ತಂದೆಯ ಕೆಲಸಗಳ ಬಗ್ಗೆ ಜನ ಹೇಳೋದು ಕೇಳಿ ಹೆಮ್ಮೆ ಅನಿಸುತ್ತಿದೆ. ತಂದೆ ಮಾರ್ಗದರ್ಶನದಲ್ಲಿ ಹೆಚ್ಚಿ‌ನ ಅಭಿವೃದ್ಧಿ ಕೆಲಸ‌ ಮಾಡುವೆ" ಎಂದು ಭರತ್​ ಬೊಮ್ಮಾಯಿ ಭರವಸೆ ನೀಡಿದರು.

ಇದನ್ನೂ ಓದಿ: ಕ್ಷೇತ್ರದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡಿದ್ದೇನೆ: ನಿಖಿಲ್ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.