ETV Bharat / state

ವೀಣಾ ಕಾಶಪ್ಪನವರ ಕಾಂಗ್ರೆಸ್ ಮನೆಯ ಒಂದು ಭಾಗ, ಅವರ ಮನೆಯಲ್ಲೂ ನಮ್ಮ ಶಾಸಕರಿದ್ದಾರೆ: ಸಂಯುಕ್ತಾ ಪಾಟೀಲ - Lok Sabha Election 2024 - LOK SABHA ELECTION 2024

ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರು ಮುಧೋಳ, ಜಮಖಂಡಿ ಕ್ಷೇತ್ರದಾದ್ಯಂತ ಚುನಾವಣೆ ಪ್ರಚಾರ ಕೈಗೊಂಡರು.

Congress candidate Samyukta Patil campaigned
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಚುನಾವಣೆಯ ಪ್ರಚಾರ ಕೈಗೊಂಡರು
author img

By ETV Bharat Karnataka Team

Published : Mar 30, 2024, 8:59 PM IST

ಬಾಗಲಕೋಟೆ: ವೀಣಾ ಕಾಶಪ್ಪನವರು ನಮ್ಮ ಕಾಂಗ್ರೆಸ್ ಮನೆಯ ಒಂದು ಭಾಗ, ಅವರ ಮನೆಯಲ್ಲಿ ನಮ್ಮ ಶಾಸಕರು ಇದ್ದಾರೆ. ಪಕ್ಷದ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ತಿಳಿಸಿದ್ದಾರೆ.

ಮುಧೋಳ ಮತಕ್ಷೇತ್ರದ ರನ್ನ ಬೆಳಗಲಿ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ನಿರಂತರ ಪ್ರಚಾರ ಮಾಡುತ್ತಿದ್ದೇನೆ. ಪ್ರತಿಯೊಂದು ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಜನರ ಸೇವೆ ಮಾಡೋದು ನನ್ನ ಮೊದಲ ಆದ್ಯತೆ. ನಾನೊಬ್ಬಳು ಬಹಳ ಎಜ್ಯುಕೇಟೆಡ್‌ ಮಹಿಳೆ ಇದ್ದೀನಿ. ನನಗೊಂದು ಅವಕಾಶ ಮಾಡಿಕೊಟ್ರೆ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇನೆ. ಜಿಲ್ಲೆಯಲ್ಲಿ ಬಹಳಷ್ಟು ಕೆಲಸ ಮಾಡೋದು ಬಾಕಿ ಇದೆ ಎಂದು ಭರವಸೆ ನೀಡಿದರು.

ಪಕ್ಷ ನನಗೆ ಜವಾಬ್ದಾರಿ ಕೊಟ್ಟಿದೆ. ಆ ಜವಾಬ್ದಾರಿ ಏನು ಅಂದರೆ. ಪಕ್ಷದ ಬಾವುಟ ಹಾರಿಸಬೇಕಾಗಿದೆ. ಆ ಜವಾಬ್ದಾರಿ ನನ್ನೊಬ್ಬಳದೇ ಅಲ್ಲ, ಇಡೀ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದ ಸಂಯುಕ್ತ ಪಾಟೀಲ, ಎಲ್ಲ ಜನರಲ್ಲೂ ವಿನಂತಿ ಮಾಡುತ್ತೇನೆ. ನನಗೊಂದು ಅವಕಾಶ ಕೊಡಿ. ನಾನು ಬಹಳ ವರ್ಕರ್ ಆಗಿದ್ದೀನಿ. ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಕೆಲಸ ಮಾಡಿದ್ದೀನಿ. ಇಡೀ ಕರ್ನಾಟಕ ರಾಜ್ಯದಲ್ಲಿ ಯೂತ್ ಕಾಂಗ್ರೆಸ್ ಚುನಾವಣೆ ಅತಿ ಹೆಚ್ಚು ಮತ ಪಡೆದ ಎರಡನೇಯವಳು ನಾನು ಎಂದರು.

ಸ್ಪರ್ಶ ಪೌಂಡೇಶನ್​ದಿಂದ ಸಮಾಜ ಸೇವೆ ಮಾಡುತ್ತಿದ್ದೇನೆ. ಮಹಿಳೆಯರಿಗೆ ಸಹಾಯ ಮಾಡಿದ್ದೀನಿ. ವೀಣಾ ಕಾಶಪ್ಪನವರ ನಮ್ಮ‌ ಪಕ್ಷದ ಒಂದು ಭಾಗ ಅಂತ ನಂಬಿದ್ದೀನಿ. ಹೊಂದಾಣಿಕೆ ಮಾಡಿಕೊಂಡು ಒಗ್ಗಟ್ಟಾಗಿ ಎಲೆಕ್ಷನ್ ಮಾಡುತ್ತೇವೆ. ಕ್ಷೇತ್ರದಲ್ಲಿ ನಮ್ಮದೇ ಆದ ಪ್ರತ್ಯೇಕ ಅಭಿವೃದ್ಧಿ ಪ್ರಣಾಳಿಕೆ ಹೊರಡಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

20 ವರ್ಷಗಳಿಂದ ಬಾಗಲಕೋಟೆ ಜಿಲ್ಲೆಯ ಸಮಸ್ಯೆ ಬಗ್ಗೆ ಸಂಸತ್​ನಲ್ಲಿ ಯಾರೂ ಧ್ವನಿ ಎತ್ತಿಲ್ಲ, ಯಾವ ಅಭಿವೃದ್ಧಿ ಕೆಲಸ ಕಾರ್ಯವೂ ಆಗಿಲ್ಲ. ನನಗೊಂದು ಅವಕಾಶ ಮಾಡಿಕೊಟ್ರೆ ನನ್ನ ಧ್ವನಿ ಎತ್ತಿ ಇಲ್ಲಿನ ಜನರ ಸೇವೆ ಮಾಡುತ್ತೇನೆ ಎಂದು ಮನವಿ ಮಾಡಿದರು. ವೀಣಾ ಕಾಶಪ್ಪನವರ ಅಸಮಾಧಾನದ ಮಧ್ಯೆಯೂ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರು ಮುಧೋಳ, ಜಮಖಂಡಿ ಕ್ಷೇತ್ರದಾದ್ಯಂತ ಲೋಕಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂಓದಿ:ಕಾಂಗ್ರೆಸ್​ಗೆ ಕೋಲಾರ ಕಗ್ಗಂಟು, ಒಳ ಜಗಳದಲ್ಲಿ ಜೆಡಿಎಸ್​ಗೆ ಒಲಿಯುವುದೇ ಅದೃಷ್ಟ? - Lok Sabha election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.