ETV Bharat / state

ಡಾ.ಪ್ರಭಾ ಮಲ್ಲಿಕಾರ್ಜುನ್‌ ₹44 ಕೋಟಿ ಆಸ್ತಿ ಒಡತಿ; ಜಿ.ಬಿ.ವಿನಯ್ ಕುಮಾರ್ ಆಸ್ತಿ ಮೌಲ್ಯ ₹56 ಕೋಟಿ - Dr Prabha Mallikarjun - DR PRABHA MALLIKARJUN

ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಆಸ್ತಿ ವಿವರ ಹೀಗಿದೆ.

congress-candidate-dr-prabha-mallikarjun
ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌
author img

By ETV Bharat Karnataka Team

Published : Apr 12, 2024, 9:55 PM IST

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇದೇ ವೇಳೆ, ಅಫಿಡವಿಟ್‌ನಲ್ಲಿ ತಾವು 44.43 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ.

ಇವರು ತಮ್ಮ ಬಳಿ ಒಟ್ಟು 97.28 ಲಕ್ಷ ಸಾಲ ಇರುವುದಾಗಿ ವಿವರ ನೀಡಿದ್ದಾರೆ. 67,566 ರೂಪಾಯಿ ನಗದು, ವಿವಿಧ ಬ್ಯಾಂಕ್‌ಗಳಲ್ಲಿ 13,76,105 ಠೇವಣಿ ಹೊಂದಿದ್ದಾರೆ. ಷೇರು, ಡಿಬೆಂಚರ್ ಇತರೆಡೆ 2,65,20,500 ರೂಪಾಯಿ ಬಂಡವಾಳ ಹೂಡಿದ್ದಾರೆ.

1.80 ಕೋಟಿ ರೂಪಾಯಿ ಬೆಲೆಬಾಳುವ 3.189.528 ಗ್ರಾಂ ಚಿನ್ನ, ಇತರೆ 5.976 ಇತರೆ ಗ್ರಾಂ ಆಭರಣಗಳಿವೆ. ಬೆಳ್ಳಿಯ ಆಭರಣ ಇಲ್ಲ. 10,23,009 ರೂಪಾಯಿ ಮೌಲ್ಯದ ಇತರೆ ಆಸ್ತಿಗಳು ಇವರ ಹೆಸರಲ್ಲಿವೆ.

1.54 ಕೋಟಿ ಮೌಲ್ಯದ 47.11 ಎಕರೆ ಕೃಷಿ ಭೂಮಿ ಇದೆ. 16.1 ಲಕ್ಷ ಮೌಲ್ಯದ 11,050 ಚದರ ಅಡಿಯಷ್ಟು ಕೃಷಿಯೇತರ ಭೂಮಿ ಇದೆ. 21.4 ಲಕ್ಷ ಮೌಲ್ಯದ 34,483 ಚದರ ಅಡಿ ಮನೆಯ ಜತೆಗೆ 2500 ಚದರಡಿ ಬಿಲ್ಡ್ ಏರಿಯಾ ಇದೆ. ವೈಯಕ್ತಿಕವಾಗಿ ಯಾವುದೇ ಆಸ್ತಿ ಇಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಪತಿ ಎಸ್.ಎಸ್.ಮಲ್ಲಿಕಾರ್ಜುನ್‌ 194.88 ಕೋಟಿ ರೂ. ಮೌಲ್ಯದ ಆಸ್ತಿಗೆ ಮಾಲೀಕರು. ಪುತ್ರ ಸಮರ್ಥ ಮಲ್ಲಿಕಾರ್ಜುನ್ 34.70 ಲಕ್ಷ ರೂ.ಗಳ ಚರಾಸ್ತಿ ಹೊಂದಿದ್ದಾರೆ.

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಆಸ್ತಿ ವಿವರ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಿ.ಬಿ.ವಿನಯ್ ಕುಮಾರ್ ಆಸ್ತಿ ಮೌಲ್ಯ 56.21 ಕೋಟಿ ರೂ. ಎಂದು ನಾಮಪತ್ರದ ವೇಳೆ ನೀಡಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

2022-23ರ ಸಾಲಿನಲ್ಲಿ ಪಡೆದ ಒಟ್ಟು ಆದಾಯ 4.14 ಕೋಟಿ ರೂ ಇತ್ತು. ಒಟ್ಟು ಚರಾಸ್ತಿ ಮೌಲ್ಯ 9.07 ಕೋಟಿ ರೂ. ಇದ್ದು, ಸ್ಥಿರಾಸ್ತಿ ಮೌಲ್ಯ 47.14 ಕೋಟಿ ರೂ. ಇದೆ. 1.75 ಲಕ್ಷ ರೂಪಾಯಿ ನಗದು ಕೈಯಲ್ಲಿದೆ. 4.20 ಕೋಟಿ ರೂಪಾಯಿ ಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಠೇವಣಿ ಇರಿಸಲಾಗಿದೆ.

ಬಾಂಡ್‌ಗಳ ಮೇಲಿನ ಹೂಡಿಕೆ 40.97 ಲಕ್ಷ ರೂಪಾಯಿ ಇದ್ದು, ಹೂಡಿಕೆಗಳು 4.43 ಕೋಟಿ ರೂ ಇವೆ. 92.50 ಎಕರೆ ಜಮೀನಿದೆ. ಇದರ ಪ್ರಸಕ್ತ ಮಾರುಕಟ್ಟೆ ಮೌಲ್ಯ 14.41 ಕೋಟಿ ರೂ.

ಬ್ಯಾಂಕ್ ಮತ್ತಿತರೆ ಸಂಸ್ಥೆಗಳಿಂದ 9.58 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ. ಜಿ.ಎಸ್.ಟಿ, ಪಾಲಿಕೆ ತೆರಿಗೆ ಸೇರಿದಂತೆ ಒಟ್ಟಾರೆ ಸರ್ಕಾರಕ್ಕೆ 1.31 ಕೋಟಿ ರೂ.ಗಳ ಪಾವತಿ ಬಾಕಿ ಇದೆ.

ಜಿ.ಬಿ.ವಿನಯ್ ಕುಮಾರ್ ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿ ಪೂರೈಸಿದ್ದಾರೆ. ಪತ್ನಿ ಎಸ್.ಎಸ್.ಸ್ವಾತಿ ಕೈಯಲ್ಲಿ 5 ಸಾವಿರ ರೂ. ನಗದು, 13.48 ಲಕ್ಷ ರೂ.ಗಳ ಠೇವಣಿ ಹಾಗೂ 59.61 ಲಕ್ಷ ರೂ. ಗಳ ಹೂಡಿಕೆ ಹೊಂದಿದ್ದಾರೆ.

ಮೊದಲ ದಿನ 5 ಅಭ್ಯರ್ಥಿಗಳಿಂದ 6 ನಾಮಪತ್ರಗಳ ಸಲ್ಲಿಕೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ದಿನ 5 ಅಭ್ಯರ್ಥಿಗಳಿಂದ ಒಟ್ಟು 6 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ.ತಿಳಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಕಾಂಗ್ರೆಸ್​ನಿಂದ ಅಖಾಡಕ್ಕಿಳಿದ ಪ್ರಭಾ ಮಲ್ಲಿಕಾರ್ಜುನರನ್ನ ಕಟ್ಟಿ ಹಾಕ್ತಾರಾ ಗಾಯಿತ್ರಿ ಸಿದ್ದೇಶ್ವರ್ - Prabha Mallikarjun

ETV Bharat Logo

Copyright © 2024 Ushodaya Enterprises Pvt. Ltd., All Rights Reserved.