ಚಾಮರಾಜನಗರ: ಗರ್ಭಾಶಯ ಗಡ್ಡೆ ಮೂತ್ರಕೋಶದ ತನಕ ಬೆಳೆದು ಯಾತನೆ ಪಡುತ್ತಿದ್ದ ಮಹಿಳೆಯ ನೋವಿಗೆ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಸಮುದಾಯ ಆರೋಗ್ಯ ಕೇಂದ್ರವು ಮುಕ್ತಿ ಕೊಟ್ಟಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ 45 ವರ್ಷದ ಪುಟ್ಟಮ್ಮ ಎಂಬವರು ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆ. ಸಾಮಾನ್ಯವಾಗಿ ಗರ್ಭಕೋಶದ ಹೊರಮೈ ಹಾಗೂ ಒಳಗಡೆ ಗೆಡ್ಡೆ ಬೆಳೆಯಲಿದೆ. ಆದರೆ, ಈ ಈ ಮಹಿಳೆಗೆ ಗರ್ಭಕೋಶ ಹಾಗೂ ಮೂತ್ರಕೋಶದ ನಡುವೆ ಗೆಡ್ಡೆ ಬೆಳೆದು ಎರಡು ಅಂಟಿಕೊಂಡಿದ್ದವು.
ವೈದ್ಯಕೀಯ ಲೋಕದಲ್ಲಿ ಅಪರೂಪವಾದ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಕಬ್ಬಹಳ್ಳಿ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯ ಡಾ.ವೆಂಕಟಸ್ವಾಮಿ 2.5 ತಾಸು ಶಸ್ತ್ರಚಿಕಿತ್ಸೆ ನಡೆಸಿ 4.5 ಕೆಜಿ ತೂಕದ ಗೆಡ್ಡೆಯನ್ನು ಹೊರತೆಗೆದಿದ್ದಾರೆ. ಡಾ.ವೆಂಕಟಸ್ವಾಮಿ ಪ್ರತಿಕ್ರಿಯಿಸಿ, ಈ ಅಪರೂಪ ಪ್ರಕರಣದಲ್ಲಿ ಗೆಡ್ಡೆ ತೆಗೆಯುವುದೇ ಕಷ್ಟವಾಗಿತ್ತು. ಸದ್ಯ, ಮಹಿಳೆ ಆರೋಗ್ಯವಾಗಿದ್ದಾರೆ. ಕಬ್ಬಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ರೀತಿ ಕಠಿಣ ಶಸ್ತ್ರಚಿಕಿತ್ಸೆ ಇದೇ ಮೊದಲು ಎಂದರು
ಇದನ್ನೂ ಓದಿ: ಮಹಿಳೆಯ ಗರ್ಭಕೋಶದ ಸುತ್ತ 4.5 ಕೆ.ಜಿ ಗಡ್ಡೆ: ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ