ETV Bharat / state

ಜಗಮಗಿಸುವ ಮೈಸೂರು ದಸರಾ ದೀಪಾಲಂಕಾರಕ್ಕೆ ಮನಸೋತ ಸಿಎಂ; ಸಚಿವರೊಂದಿಗೆ ಅಂಬಾರಿ ಬಸ್​ನಲ್ಲಿ ರೌಂಡ್ಸ್

ಮೈಸೂರಿನ ಆಕರ್ಷಕ ದಸರಾ ದೀಪಾಲಂಕಾರವನ್ನು ಸಿಎಂ ಸಿದ್ದರಾಮಯ್ಯ ಮೆಚ್ಚಿಕೊಂಡಿದ್ದಾರೆ.

cm-siddaramaiah
ಮೈಸೂರು ದಸರಾ ದೀಪಾಲಂಕಾರ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Oct 11, 2024, 10:44 PM IST

Updated : Oct 11, 2024, 11:01 PM IST

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಕೊನೆಯ ದಿನವಾದ ಇಂದು ಸಿಎಂ ಸಿದ್ದರಾಮಯ್ಯ ನಗರದ ಆಯ್ದ ಭಾಗಗಳ ದೀಪಾಲಂಕಾರ ವೀಕ್ಷಿಸಿದ್ದು, ಅದ್ಭುತ ದೃಶ್ಯಗಳಿಗೆ ಮನಸೋತರು.

ಅಂಬಾರಿ ಬಸ್ ಮೂಲಕ ಸಿಟಿ ರೌಂಡ್ಸ್ ಹೊರಟ ಸಿಎಂ ಜೊತೆಗೆ ಇಂಧನ ಸಚಿವ ಕೆ.ಜೆ.ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತದ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್ ಪ್ರಸಾದ್, ಮುಡಾ ಅಧ್ಯಕ್ಷ ಮರಿಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.

ಜಗಮಗಿಸುವ ಮೈಸೂರು ದಸರಾ ದೀಪಾಲಂಕಾರಕ್ಕೆ ಮನಸೋತ ಸಿಎಂ (ETV Bharat)

ಈ ಸಂದರ್ಭದಲ್ಲಿ ಅಂಬಾರಿ ಬಸ್​ನಲ್ಲಿಯೇ ಕುಳಿತು ಬನ್ನಿಮಂಟಪದಲ್ಲಿ ನಡೆಯುತ್ತಿರುವ ಡ್ರೋನ್ ಶೋ ವೀಕ್ಷಿಸಿದ ಸಿಎಂ ಸಂತಸ ವ್ಯಕ್ತಪಡಿಸಿದರು.

Dasara
ದಸರಾ ದೀಪಾಲಂಕಾರ (ETV Bharat)

ರಾಮಸ್ವಾಮಿ ವೃತ್ತದಿಂದ ಆರಂಭವಾದ ದೀಪಾಲಂಕಾರ ವೀಕ್ಷಣೆ ಬಸವೇಶ್ವರ ವೃತ್ತ, ವಿದ್ಯಾಪೀಠ ವೃತ್ತ, ಹಾರ್ಡಿಂಜ್ ಸರ್ಕಲ್, ಕೆ.ಆರ್.ಸರ್ಕಲ್, ಆಯುರ್ವೇದಿಕ್ ವೃತ್ತ, ಹೈವೇ ವೃತ್ತದ ಮೂಲಕ ಸಾಗಿ ಎಲ್ಐಸಿ ವೃತ್ತದಲ್ಲಿ ಮುಕ್ತಾಯಗೊಂಡಿತು.

Dasara
ಮೈಸೂರು ದಸರಾ ದೀಪಾಲಂಕಾರ (ETV Bharat)

ದೀಪಾಲಂಕಾರ ನೋಡಲು ತಮ್ಮ ಜೊತೆ ಆಗಮಿಸಿದ್ದ ಸಚಿವರಿಗೆ ಅರಮನೆ ಹಾಗೂ ಮಾರ್ಗಮಧ್ಯೆ ಬರುವ ಸ್ಥಳಗಳ ಹಿನ್ನೆಲೆ ಹಾಗೂ ಮಹತ್ವವನ್ನು ಸಿಎಂ ತಿಳಿಸಿದರು.

Dasara
ದೀಪಾಲಂಕಾರ (ETV Bharat)

ಇದನ್ನೂ ಓದಿ: ನಾಳೆ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ: ವಿಜಯದಶಮಿ ಪೂಜಾ ವಿಧಾನಗಳ ಮಾಹಿತಿ ಇಲ್ಲಿದೆ

Last Updated : Oct 11, 2024, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.