ETV Bharat / state

2014ರಲ್ಲಿ ನಾನು ಸಿಎಂ ಆಗಿದ್ದಾಗಲೇ ಪತ್ನಿ ಮುಡಾ ಸೈಟ್​ಗೆ ಅರ್ಜಿ ಕೊಟ್ಟಿದ್ದರು: ಸಿದ್ದರಾಮಯ್ಯ - CM Siddaramaiah - CM SIDDARAMAIAH

'ಮುಡಾ ನಿವೇಶನ ಪಡೆಯುವ ಉದ್ದೇಶವಿದ್ದರೆ, ಸಿಎಂ ಆಗಿದ್ದಾಗಲೇ ನಾನೇ ಪತ್ನಿಗೆ ಕೊಡಿಸುತ್ತಿದ್ದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Aug 7, 2024, 12:52 PM IST

ಸಿಎಂ ಸಿದ್ದರಾಮಯ್ಯ (ETV Bharat)

ಮೈಸೂರು: "ನಾನು 2014ರಲ್ಲಿ ಸಿಎಂ ಆಗಿದ್ದಾಗ ನನ್ನ ಹೆಂಡತಿ ಅರ್ಜಿ ಕೊಟ್ಟಿದ್ದರು. ಇದನ್ನು ಮುಡಾ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದರು. ನಾನು ಸಿಎಂ ಆಗಿರುವಾಗ ಒಂದು ಗುಂಟೆ ಜಾಗವನ್ನೂ ಕೊಡಬೇಡಿ ಎಂದಿದ್ದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮುಡಾ ಪ್ರಕರಣ ಕುರಿತಂತೆ ಮೈಸೂರು ಮನೆಯ ಹತ್ತಿರ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ''ಬಳಿಕ ಮತ್ತೆ 2021 ರಲ್ಲಿ ಅರ್ಜಿ ಹಾಕಿದ್ದಾಳೆ. ಆವಾಗ ಬಿಜೆಪಿ ಸರ್ಕಾರವಿತ್ತು, ಕಾನೂನು ರೀತಿಯಲ್ಲಿ ಬದಲ್ಲಿ ಸೈಟ್ ಕೊಟ್ಟಿದ್ದಾರೆ. ನಾನು ಸೈಟು ಪಡೆಯಬೇಕು ಎಂಬ ಉದ್ದೇಶವಿದ್ದರೆ ಸಿಎಂ ಆಗಿದ್ದಾಗ ನಾನೇ ಸೈಟು ಕೊಡಿಸುತ್ತಿದ್ದೆ. ಸಿಎಂ ಆಗಿ ನನಗೆ ಅಧಿಕಾರ ಇತ್ತು. ನಾನೇ ಪ್ರಭಾವ ಬಳಸಿ ಸೈಟು ಕೊಡಬಹುದಿತ್ತು. ಆದರೆ ನಾನು ಆ ರೀತಿ ಮಾಡಿಲ್ಲ" ಎಂದು ಪ್ರತಿಕ್ರಿಯಿಸಿದರು.

ಯಡಿಯೂರಪ್ಪಗೆ ಮಾತನಾಡುವ ನೈತಿಕತೆ ಇಲ್ಲ: ಇದೇ ವೇಳೆ "ನನ್ನ ಬಗ್ಗೆ ಯಡಿಯೂರಪ್ಪ ಅವರಿಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಅವರು ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದಲಿ" ಎಂದು ಸಿದ್ದರಾಮಯ್ಯ ಕಿಡಿಕಾರಿದರು.

"ಯಡಿಯೂರಪ್ಪ ಅವರಿಗೆ ನನ್ನ ರಾಜೀನಾಮೆ ಕೇಳುವ ಯಾವ ನೈತಿಕತೆ ಇಲ್ಲ. ನ್ಯಾಯಾಲಯದ ದಯೆಯಿಂದ ಯಡಿಯೂರಪ್ಪ ಬದುಕಿದ್ದಾರೆ. ಅವರು ಫೋಕ್ಸೋ ಕೇಸಿನಲ್ಲಿ ಜಾಮೀನು ಸಿಕ್ಕಿಲ್ಲ. 82 ವಯಸ್ಸಿನಲ್ಲಿ ಅವರು ಹೆಣ್ಣು ಮಗುವಿನ ಮೇಲೆ ಈ ರೀತಿ ಮಾಡಿ ಫೋಕ್ಸೋ ಕೇಸಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ?" ಎಂದು ಯಡಿಯೂರಪ್ಪ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.

ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ - ಸಿಎಂ: "ಬಿಜೆಪಿ ಜೆಡಿಎಸ್​​​​ನವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮ ಸರ್ಕಾರವನ್ನು ಅಸ್ಥಿರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ‌. ಆದರೆ, ಇದರಲ್ಲಿ ಬಿಜೆಪಿ ಜೆಡಿಎಸ್​ ಯಶಸ್ವಿ ಆಗುವುದಿಲ್ಲ. ಜನತೆ ಇವರ ಸುಳ್ಳನ್ನು ನಂಬಲ್ಲ. ಈ ಹಿಂದೆ ಆಪರೇಶನ್ ಕಮಲ ಮಾಡಲು ಪ್ರಯತ್ನ ಮಾಡಿದ್ದರು. ಅದು ಆಗಲಿಲ್ಲ ವಿಫಲ ಆಯ್ತು. ಇದೀಗ ನನ್ನನ್ನು ಗುರಿಯಾಗಿಸಿದ್ದಾರೆ" ಎಂದು ಸಿಎಂ ಹೇಳಿದರು.

'ನೋಟಿಸ್​ಗೆ ಉತ್ತರ ಕೊಟ್ಟಿದ್ದೇನೆ' : "ರಾಜ್ಯಪಾಲರಿಂದ ನನಗೆ ಬಂದಿರುವುದು ಒಂದೇ ನೋಟಿಸ್. ಅದಕ್ಕೆ ಉತ್ತರ ಕೋಟ್ಟಿದ್ದೇನೆ. ಮುಖ್ಯ ಕಾರ್ಯದರ್ಶಿಗಳು ರಾಜ್ಯಪಾಲರ ಭೇಟಿ ಮಾಡಿದ್ದೆ ಬೇರೆ ವಿಚಾರಕ್ಕೆ, ಸಿ.ಎಸ್. ಭೇಟಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಹೊಸದಾಗಿ ನೇಮಕವಾದ ಹಿನ್ನಲೆ ಭೇಟಿ ಆಗಿದ್ದಾರೆ. ಕಾನೂನಾತ್ಮಕವಾಗಿ ನನ್ನ ತಪಿಲ್ಲ ಅಂತ ರಾಜ್ಯಪಾಲರು ಒಪ್ಪುತ್ತಾರೆ ಎಂಬ ಆಶಯ ಇದೆ. ಸಚಿವ ಸಂಪುಟದವರು ಉತ್ತರ ಕೋಟ್ಟಿದ್ದಾರೆ, ಇದನ್ನು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ವಿಪಕ್ಷಗಳ ಮುಳ್ಳುಗಳನ್ನು ಎದುರಿಸುವ ಶಕ್ತಿ ನನಗಿದೆ. ಬಿಜೆಪಿ ಅವರದ್ದು ಭ್ರಷ್ಟ ಸರ್ಕಾರ. ಅವರದೇ ಹಗರಣದ ತನಿಖೆಗಳು ನಡೆಯುತ್ತಿದೆ. ಇವರಿಗೆ ಯಾವ ನೈತಿಕತೆ ಇದೇ" ಎಂದು ವಿಪಕ್ಷಗಳ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.

ಸಮಾವೇಶದಲ್ಲಿ ಎಲ್ಲವನ್ನೂ ಹೇಳುತ್ತೇನೆ - ಸಿಎಂ ಸಿದ್ದರಾಮಯ್ಯ: "ಯಡಿಯೂರಪ್ಪ ಅವರು ಜೈಲಿಗೆ ಹೋಗಿದ್ದ ಪ್ರಕರಣವೇ ಬೇರೆ. ಯಡಿಯೂರಪ್ಪ ಚೆಕ್ ಮೂಲಕ ಹಣ ಪಡೆದಿದ್ದರು. ಡಿ ನೋಟಿಫೈ ಮಾಡಿದ್ದರು. ಅವರ ಪ್ರಕರಣವೇ ಬೇರೆ ನನ್ನ ಪ್ರಕರಣವೇ ಬೇರೆ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಯಡಿಯೂರಪ್ಪ ಅವರಿಗಿಲ್ಲ. ನಾಳಿದ್ದು ಮೈಸೂರಿನಲ್ಲಿ ಸಮಾವೇಶ ಇದೇ. ಆ ವೇಳೆ ಎಲ್ಲರ ಹಗರಣವನ್ನು ನಿಮ್ಮ ಮುಂದೆ ಬಿಚ್ಚಿಡುತ್ತೇನೆ. ಅದಕ್ಕಾಗಿ ಇಂದು ಪ್ರೆಸ್​ಮೀಟ್​​ ರದ್ದು ಮಾಡಿದ್ದೇನೆ. ನಾಳಿದ್ದು ಸಮಾವೇಶದಲ್ಲಿ ಎಲ್ಲವನ್ನೂ ಹೇಳುತ್ತೇನೆ" ಎಂದು ಹೇಳಿ ಸಿಎಂ ಸಿದ್ದರಾಮಯ್ಯ ತೆರಳಿದರು.

ಇದನ್ನೂ ಓದಿ: ಕುಮಾರಸ್ವಾಮಿ ತಮ್ಮ ಹಿಂದಿನ ಹೇಳಿಕೆ ಬಗ್ಗೆ ಉತ್ತರ ಕೊಡಲಿ: ಡಿಸಿಎಂ ಡಿ.ಕೆ.ಶಿವಕುಮಾರ್ - D K Shivakumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.