ETV Bharat / state

ಜಾತಿ ಗಣತಿ, ಉಪ ಚುನಾವಣೆ, ಒಳ ಮೀಸಲಾತಿ ಚರ್ಚೆಗೆ ಇಂದು ಸಚಿವರೊಂದಿಗೆ ಸಿಎಂ ಸಭೆ - CM SIDDARAMAIAH CALLS MEETING

ಉಪ ಚುನಾವಣೆ, ಜಾತಿ ಗಣತಿ ಹಾಗೂ ಒಳ ಮೀಸಲಾತಿ ಬಗ್ಗೆ ಚರ್ಚೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಚಿವರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.

siddaramaiah
ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Oct 20, 2024, 7:48 AM IST

ಬೆಂಗಳೂರು: ವಿಧಾನಸಭೆಯ 3 ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆ, ಜಾತಿ ಗಣತಿ ಹಾಗೂ ಮೀಸಲಾತಿ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಸಚಿವರ ಸಭೆ ಕರೆದಿದ್ದಾರೆ.

ಸಂಜೆ 6 ಗಂಟೆಗೆ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಯಲಿದೆ. ಉಪ ಚುನಾವಣೆ ತಯಾರಿ, ಆಕಾಂಕ್ಷಿಗಳು, ಪ್ರಸಕ್ತ ರಾಜಕೀಯ ವಿದ್ಯಮಾನ, ಮುಡಾ ಪ್ರಕರಣ, ಇ.ಡಿ. ತನಿಖೆ ಸಂಬಂಧ ಚರ್ಚೆ ನಡೆಯಲಿದೆ. ಪಂಚಮಸಾಲಿ ಮೀಸಲಾತಿ, ವಾಲ್ಮೀಕಿ ಪ್ರಕರಣಗಳ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ.

ಪ್ರಮುಖವಾಗಿ ಜಾತಿ ಗಣತಿ, ಒಳ ಮೀಸಲಾತಿ ಸಂಬಂಧ ಸಚಿವರ ಜೊತೆ ಚರ್ಚೆ ನಡೆಯಲಿದೆ. ಜಾತಿ ಗಣತಿ ಸಂಬಂಧ ಈಗಾಗಲೇ ಆಡಳಿತಾರೂಢ ಪಕ್ಷದಲ್ಲೇ ಅಪಸ್ವರ ಎದ್ದಿದೆ. ಒಕ್ಕಲಿಗ ಹಾಗೂ ಲಿಂಗಾಯತ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಲ್ಲಿನ ಗೊಂದಲ ಹಾಗೂ ಆತಂಕ ನಿವಾರಿಸಲು ಸಿಎಂ ಯತ್ನಿಸಲಿದ್ದಾರೆ.

ಇದನ್ನೂ ಓದಿ: ಶಿಗ್ಗಾಂವ್ ಉಪಚುನಾವಣೆ ; ಬೊಮ್ಮಾಯಿ ಪುತ್ರನಿಗೆ ಟಿಕೆಟ್ - ಇಲ್ಲಿದೆ ಭರತ್ ಬೊಮ್ಮಾಯಿ ಕಿರುಪರಿಚಯ​

ಸಂಪುಟ ಸಭೆ ಮುಂದೆ ತಂದು ಚರ್ಚೆ ನಡೆಸೋಣ. ಏನಾದರೂ ಲೋಪಗಳಿದ್ದರೆ ಸರಿಪಡಿಸಿ ಕ್ರಮ ಕೈಗೊಳ್ಳೋಣ. ಯಾರಿಗೂ ಇದರಲ್ಲಿ ಅನ್ಯಾಯವಾಗುವುದಿಲ್ಲ ಎಂಬುದನ್ನು ಸಚಿವರುಗಳಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ.

ಇದನ್ನೂ ಓದಿ: ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬೇಕು: ಸಚಿವ ಈಶ್ವರ ಖಂಡ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.