ಮೈಸೂರು: ಮೊದಲ ಹಂತದ ಮತದಾನ ರಾಜ್ಯದಲ್ಲಿ ನಡೆಯುತ್ತಿದೆ. ಮತದಾರರು ಸಂತಸದಿಂದಲೇ ಬೂತ್ಗೆ ಆಗಮಿಸಿ ಹಕ್ಕು ಚಲಾಯಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಬರುವ ಮೈಸೂರು ಜಿಲ್ಲೆ ವರುಣಾ ಕ್ಷೇತ್ರದ ಸಿದ್ದರಾಮನಹುಂಡಿ ಗ್ರಾಮದ ಮತಗಟ್ಟೆಯಲ್ಲಿ ಬೆಳಂಬೆಳಗ್ಗೆ ಸರತಿ ಸಾಲಿನಲ್ಲಿ ನಿಂತು ತಮ್ಮ ಮತ ಚಲಾಯಿಸಿದರು. ಮತದಾನದ ಬಳಿಕ ಶಾಹಿ ಹಾಕಲಾದ ತಮ್ಮ ಬೆರಳನ್ನು ಕ್ಯಾಮರಾ ಮುಂದೆ ತೋರಿಸಿದರು. ಪುತ್ರ ಯತೀಂದ್ರ ಕೂಡ ಈ ವೇಳೆ ಹಾಜರಿದ್ದರು.
-
#WATCH | Karnataka CM Siddaramaiah shows his inked finger after casting his vote at a polling booth in Siddaramana Hundi village of Chamarajanagar.#LokSabhaElections2024 pic.twitter.com/3gvb3fstXn
— ANI (@ANI) April 26, 2024
ವಿವಿಧ ಪಕ್ಷಗಳ ಅಭ್ಯರ್ಥಿಗಳು, ಗಣ್ಯರು ಮತಗಟ್ಟೆಗಳಲ್ಲಿ ವೋಟ್ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಬೇಕು ಎಂದು ಕೋರಿದರು. ಸಿನಿ ತಾರೆಯರು ಕೂಡ ಬೆಳಿಗ್ಗೆಯಿಂದಲೇ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಪ್ರಕಾಶ್ ರಾಜ್, ಸಪ್ತಮಿ ಗೌಡ, ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಅಮೂಲ್ಯ, ಗಣೇಶ್ ಸೇರಿದಂತೆ ಸೆಲೆಬ್ರಿಟಿಗಳಿಂದ ಮತದಾನ ನಡೆದಿದೆ.