ETV Bharat / state

ಸಂವಿಧಾನ ವಿರೋಧಿಸುವವರು ನಮ್ಮ ವಿರೋಧಿಗಳು‌: ಸಿಎಂ ಸಿದ್ದರಾಮಯ್ಯ - Constitution

ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಆಗಬಾರದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
author img

By ETV Bharat Karnataka Team

Published : Feb 1, 2024, 8:05 AM IST

ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವರ ಅಭ್ಯುದಯ ಗಮನದಲ್ಲಿಸಿ ಹೋರಾಟ ಮಾಡಿ ಸಮ ಸಮಾಜದ ಸಂವಿಧಾನ ನೀಡದಿದ್ದರೆ ನಾನು ಇಂದು ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಸಂವಿಧಾನದ ಪರವಾಗಿ ಇರುವುದು ನಮ್ಮೆಲ್ಲರ ಕರ್ತವ್ಯ. ಇದನ್ನು ವಿರೋಧಿಸುವರು ನಮ್ಮೆಲ್ಲರ ವಿರೋಧಿಗಳು. ಅವರ ಜೊತೆ ಎಚ್ಚರದಿಂದ ಇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ ವರ್ಗದ ಜನರಿಗೆ ಸಹಾಯಧನ

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಹಾಗೂ ಆಯೋಗ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಪುನರ್ವಸತಿ ಸಹಾಯಧನ ವಿತರಣಾ ಸಮಾವೇಶ ಉದ್ಘಾಟನೆ ಹಾಗೂ ಮ್ಯಾನುಯಲ್ ಸ್ಕ್ಯಾವೇಂಜರ್ ಸಮಗ್ರ ಮಾಹಿತಿ ಒಳಗೊಂಡ ಮೊಬೈಲ್ ಆ್ಯಪ್ ಹಾಗೂ ವೆಬ್ ಆ್ಯಪ್ ಅನಾವರಣಗೊಳಿಸಿ ಅವರು ಮಾತನಾಡಿದರು.

ಸಂವಿಧಾನದ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲಬೇಕು. ಜೊತೆಗೆ ಅದನ್ನು ದುರ್ಬಳಕೆ‌ ಮಾಡುವವರನ್ನು ಗುರುತಿಸಬೇಕು. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದವರೊಂದಿಗೆ ಎಚ್ಚರಿಕೆಯಿಂದ ಇರಬೇಕಿದೆ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಆಗಕೂಡದು. ಸಂವಿಧಾನವನ್ನು ವಿರೋಧಿಸುವವರು ನಮ್ಮೆಲ್ಲರ ವಿರೋಧಿಗಳಾಗಬೇಕು. ಅವರ ಜೊತೆ ಹೋಗದಂತೆ ಎಚ್ಚರದಿಂದ ಇರಬೇಕು. ಆಗ ಮಾತ್ರ ನಿಮ್ಮ ಹಕ್ಕುಗಳ ರಕ್ಷಣೆ ಸಾಧ್ಯ ಎಂದರು.

ಮಲ ಹೊರಿಸಿದರೆ ಕಾನೂನು ಕ್ರಮ: ಮ್ಯಾನ್ಯುಯಲ್ ಸ್ಕ್ಯಾವೆಂಜರ್ ವರ್ಗದ ಜನರಿಗೆ ಆಯೋಗದ ವತಿಯಿಂದ ಇಂದು 4 ಸಾವಿರ ಜನರಿಗೆ 40 ಸಾವಿರ ರೂ ಸಹಾಯಧನ ವಿತರಿಸಲಾಗಿದೆ. ಸಮುದಾಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್​​ ಕೊಡಲಾಗಿದೆ. 1972ನೇ ಇಸವಿಯಲ್ಲಿ ಮಲ ಹೊರುವ ಪದ್ದತಿಯನ್ನು ನಿಲ್ಲಿಸಲಾಗಿತ್ತು. 1993ರಲ್ಲಿ ಕಾನೂನು ಮಾಡಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನಿಷೇಧ ಹೇರಲಾಗಿತ್ತು. ಇನ್ನೂ ಕೂಡ ಕೆಲವೆಡೆ ಮಲ ಹೊರುವ ಕೆಲಸ ಮಾಡುವುದು ಕಾಣಿಸುತ್ತಿದ್ದು, ಅದು ಅಪರಾಧ. ಇದನ್ನು ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್ ವಿತರಣೆ
ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್ ವಿತರಣೆ

ಸಫಾಯಿ ಕರ್ಮಚಾರಿ ಸಮುದಾಯ ಆರ್ಥಿಕ ಹಾಗೂ ಸಾಮಾಜಿಕ‌ ಅಭಿವೃದ್ಧಿಗಾಗಿ 2016ರಲ್ಲಿ ಸಫಾಯಿ ಕರ್ಮಚಾರಿ ನಿಗಮ ಸ್ಥಾಪನೆ ಮಾಡಲಾಯಿತು‌. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಗುತ್ತಿಗೆ‌ ಪದ್ದತಿ ರದ್ದು ಮಾಡಿದೆ. ಪೌರ ಕಾರ್ಮಿಕರಿಗೆ ಬರುತ್ತಿದ್ದ ಮಾಸಿಕ 7 ಸಾವಿರದಿಂದ 17 ಸಾವಿರ ರೂ. ವೇತನ ಬರುವಂತೆ ಮಾಡಿ ಕನಿಷ್ಠ ವೇತನ ಜಾರಿ ಮಾಡಿದ್ದೇನೆ. ಪೌರಕಾರ್ಮಿಕರನ್ನು ಖಾಯಂ ಮಾಡಬೇಕೆಂದು ಈಗಾಗಲೇ ಪೌರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು‌. ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದೆ. ಪೌರ ಕಾರ್ಮಿಕರು ಖಾಯಂ ಆಗಲೇಬೇಕು‌.

ಎಲ್ಲರಂತೆ ಈ ಸಮುದಾಯವು ಮರ್ಯಾದೆಯಿಂದ ಬಾಳುವ ಪರಿಸ್ಥಿತಿ ಬರಬೇಕು. ಕಟ್ಟ ಕಡೆಯ ವ್ಯಕ್ತಿಗೂ ಆರ್ಥಿಕ, ಸಾಮಾಜಿಕ‌ ಶಕ್ತಿ ಬರಬೇಕು. ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ನಿಮ್ಮ‌ ಮಕ್ಕಳು‌ ಸಫಾಯಿಗಳಾಗುವುದಿಲ್ಲ. ನಿಮ್ಮ‌ ಮಕ್ಕಳು ಪ್ರೊಫೆಸರ್, ಡಾಕ್ಟರ್ ಆಗಬೇಕು. ಮೇಲ್ವರ್ಗದವರು ಮಾತ್ರ ಇವೆಲ್ಲ ಆಗಬೇಕಾ? ಕೆಳವರ್ಗದವರಿಗೂ ಅವಕಾಶ ಸಿಗಬೇಕು. ಶಿಕ್ಷಣ ಸಿಕ್ಕರೆ ನಿಮ್ಮ ಮಕ್ಕಳೂ ಮೇಲೆ ಬರುತ್ತಾರೆ. ಎಷ್ಟೇ ಕಷ್ಟವಾದರೂ ನಿಮ್ಮ‌ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ನಿಮ್ಮ‌ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ: ಪೌರ ಕಾರ್ಮಿಕರಿಗೆ ಸಿಎಂ ಕರೆ

ಇದಕ್ಕೂ ಮುನ್ನ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ರಾಜ್ಯದಲ್ಲಿ‌ ಮೊದಲ ಬಾರಿಗೆ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿಗೆ ಸಹಾಯಧನ ವಿತರಿಸುತ್ತಿರುವುದು ಐತಿಹಾಸಿಕ ಹಾಗೂ ಅವಿಸ್ಮರಣೀಯ ಕ್ಷಣವಾಗಿದೆ. ಶತಶತಮಾನಗಳಿಂದ ಅವಮಾನ, ಶೋಷಣೆ ಹಾಗೂ ದಬ್ಬಾಳಿಕೆಗೆ ಒಳಗಾಗಿದ್ದ ದಲಿತ ಸಮುದಾಯದ ವಿಮೋಚನೆಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವಿಶ್ವ ಶೇಷ್ಠ ಸಂವಿಧಾನ ನೀಡಿ 75 ವರ್ಷ ಕಳೆದಿದೆ. ಇಂದಿಗೂ ಸಫಾಯಿ ಕರ್ಮಚಾರಿ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ಔದ್ಯೋಗಿಕ ಸಮಸ್ಯೆಗಳಿಗೆ ಸಂವಿಧಾ‌ನದ‌ ಆಶ್ರಯಗಳಿಗೆ ಸರಿದೂಗಿಸಲು ಸಾಧ್ಯವಾಗಿಲ್ಲ.

ಪರಿಶಿಷ್ಠ ಹಾಗೂ ಪರಿಶಿಷ್ಠ ಪಂಗಡದಲ್ಲಿ 101 ಜಾತಿಗಳಿವೆ. ಸಾಮಾಜಿಕ ಆಭಿವೃದ್ಧಿಯಲ್ಲಿ ಸಮುದಾಯದಲ್ಲಿ ಕೊನೆ ಸಾಲಿನಲ್ಲಿ ಸಫಾಯಿ ಕರ್ಮಚಾರಿ ಸಮುದಾಯವಿದೆ. 2013 ರಿಂದ 18 ಅವಧಿಯಲ್ಲಿ 1.32 ಲಕ್ಷ 8 ಸಾವಿರ ಜನ ಮ್ಯಾನುವೆಲ್ ಸ್ಕ್ಯಾವೆಂಜರ್ ಗುರುತಿಸಲಾಗಿತ್ತು. 2016ರಲ್ಲಿ ಸಫಾಯಿ ಕರ್ಮಚಾರಿ‌ ಅಯೋಗ ಮಾಡಲಾಯಿತು. ಗುರುತಿಸಲಾಗಿದ್ದ 7,483 ಮ್ಯಾನುಯಲ್ ಸ್ಕ್ಯಾವೆಂಜರ್ ಪೈಕಿ 2,833 ಜನ ಮಾತ್ರ ಕೇಂದ್ರ ಸರ್ಕಾರ ಸಹಾಯಧನ ನೀಡಿ ಬಾಕಿ 4,630 ಮಂದಿಗೆ‌ ಸಹಾಯಧನ ವಿತರಿಸಲು ನಿರಾಕರಿಸಿತು. ಹೀಗಾಗಿ ಇಂದು 7,650 ಫಲಾನುಭವಿಗಳಿಗೆ ತಲಾ 40 ಸಾವಿರ ರೂಪಾಯಿವೆಂಬಂತೆ 18.60 ಕೋಟಿ ವೆಚ್ಚದಲ್ಲಿ ನಗದು ತೀರ್ಮಾನಿಸಿ‌ ವಿತರಿಸಲಾಗಿದೆ ಎಂದರು.

ಇದನ್ನೂ ಓದಿ: 'ಪ್ರಗತಿ ಮೊಬೈಲ್ ಅಪ್ಲಿಕೇಶನ್'ಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.