ETV Bharat / state

ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸಲು ಹಾಸನದಲ್ಲಿ ಸಮಾವೇಶ: ಸಿಎಂ ಸಿದ್ದರಾಮಯ್ಯ

ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸುತ್ತಿರುವುದನ್ನು ಜೆಡಿಎಸ್​ ಹಾಗೂ ಬಿಜೆಪಿ ನಾಯಕರು ಟೀಕಿಸಿದ್ದು, ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

CM Siddaramaiah
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : 2 hours ago

Updated : 1 hours ago

ಬೆಂಗಳೂರು: "ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸಲು ಪಕ್ಷ ಹಾಗೂ ಸ್ವಾಭಿಮಾನಿಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ಹಾಸನದಲ್ಲಿ ಸಮಾವೇಶ ನಡೆಸಲಾಗುತ್ತಿದೆ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಹಿಂದೆ ಜೆಡಿಎಸ್ ಬಿಟ್ಟಾಗಲೂ ಸಿದ್ದರಾಮಯ್ಯ ಸಮಾವೇಶ ಮಾಡಿದ್ದರು ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿ, "ನಾನು ಜೆಡಿಎಸ್ ಬಿಟ್ಟಿರಲಿಲ್ಲ. ಅವರು ಸುಳ್ಳು ಹೇಳುತ್ತಾರೆ. ದೇವೇಗೌಡರು ನನ್ನನ್ನು ಜೆಡಿಎಸ್​ನಿಂದ ವಜಾ ಮಾಡಿದ್ದರು. ಆ ಕಾರಣಕ್ಕೆ ಅಂದು ಸಮಾವೇಶ ಮಾಡಿದ್ದೆ" ಎಂದರು.

ಸಿಎಂ ಸಿದ್ದರಾಮಯ್ಯ (ETV Bharat)

"ಆಗ ಬೇರೆ ದಾರಿ ಇಲ್ಲದೇ ಅಹಿಂದ ಸಂಘಟನೆ ಮಾಡಲು ಶುರು ಮಾಡಿದೆ. ಅಹಿಂದ ಸಮಾವೇಶ ಮಾಡಿದ್ದೇನೆ. ಈಗ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಲು ಪಕ್ಷ ಹಾಗೂ ಸ್ವಾಭಿಮಾನಿಗಳ ಒಕ್ಕೂಟದಿಂದ ಏರ್ಪಡಿಸಿರುವ ಸಮಾವೇಶವಿದು. ಬರೀ ಸ್ವಾಭಿಮಾನಿ ಒಕ್ಕೂಟವೇ ಹಾಸನ ಸಮಾವೇಶ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ಸ್ವಾಭಿಮಾನಿಗಳ ಒಕ್ಕೂಟದಿಂದ ಜಂಟಿ ಆಶ್ರಯದಲ್ಲಿ ಮಾಡುತ್ತಿರುವ ಸಮಾವೇಶ. ಇದಕ್ಕೆ ಸುರ್ಜೇವಾಲ, ಮಲ್ಲಿಕಾರ್ಜುನ ಖರ್ಗೆಯವರನ್ನೂ ಆಹ್ವಾನಿಸಿದ್ದೇನೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರು ಸಭೆ ಮಾಡಲಿದ್ದಾರೆ. ಪಕ್ಷವೂ ಸಕ್ರಿಯವಾಗಿ ಭಾಗವಹಿಸಲಿದೆ" ಎಂದು ತಿಳಿಸಿದರು.

"ನಾನು ಜೆಡಿಎಸ್​ನಿಂದ ವಜಾ ಆದ ಮೇಲೆ ಏನು ಮಾಡಬೇಕು? ವಜಾ ಮಾಡಿರುವುದನ್ನು ವಿರೋಧ ಮಾಡಬೇಕೋ, ಬೇಡವೋ? ಜೆಡಿಎಸ್ ಪಕ್ಷ ಕಟ್ಟಿದವರು ನಾವು. ಜನತಾ ದಳ ಸೆಕ್ಯುಲರ್ ಈಗ ಸೆಕ್ಯುಲರ್ ಆಗಿ ಉಳಿದಿದೆಯೇ? ಕೋಮುವಾದಿಗಳ ಜೊತೆ ಸೇರಿ ಯಾವ ಸೆಕ್ಯುಲರ್ ಆಗಿ ಉಳಿದಿದ್ದಾರೆ? ಜೆಡಿಎಸ್ ಯಾವ ಹಿನ್ನೆಲೆಯಲ್ಲಿ ಆಯಿತು ಎಂಬುದು ಕುಮಾರಸ್ವಾಮಿಗೆ ಗೊತ್ತಿಲ್ಲ. ಏಕೆಂದರೆ ಜೆಡಿಎಸ್ ಪಕ್ಷ ರಚನೆಯಾದಾಗ ಕುಮಾರಸ್ವಾಮಿ ಇರಲಿಲ್ಲ. ನಾನು, ದೇವೇಗೌಡ, ಸಿ.ಎಂ.ಇಬ್ರಾಹಿಂ, ಸತೀಶ್ ಜಾರಕಿಹೊಳಿ, ಮಹದೇವಪ್ಪ, ವೆಂಕಟೇಶ್, ಲಕ್ಷ್ಮಿ ಸಾಗರ್ ಇವರೆಲ್ಲಾ ಸೇರಿ ಪಕ್ಷ ರಚನೆ ಮಾಡಿರುವುದು. ಇತಿಹಾಸ ಗೊತ್ತಿಲ್ಲದವರು ಏನೇನೋ ಮಾತನಾಡುತ್ತಾರೆ. ಕುಮಾರಸ್ವಾಮಿ ಸುಳ್ಳು ಹೇಳುತ್ತಾರೆ" ಎಂದು ದೂರಿದರು.

ಚಂದ್ರಶೇಖರ ಸ್ವಾಮೀಜಿ ವಿರುದ್ಧ ದಾಖಲಿಸಲಾದ ಎಫ್​ಐಆರ್ ದ್ವೇಷಪೂರಿತ ಎಂಬ ಆರೋಪಕ್ಕೆ, "ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತಾರೆ ಅಷ್ಟೇ. ಕಾನೂನು ಚೌಕಟ್ಟಿನಲ್ಲಿ ಬರಲ್ಲವೆಂದರೆ ಏನೂ ಮಾಡುವುದಿಲ್ಲ" ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಹಾಸನದಲ್ಲಿ ಸಮಾವೇಶ ಮಾಡ್ತಿದ್ದಾರೆ; ನಿಖಿಲ್ ಕುಮಾರಸ್ವಾಮಿ ಟೀಕೆ

Last Updated : 1 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.