ETV Bharat / state

ರಾಜ್ಯದಲ್ಲಿ 21ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ - LIVESTOCK CENSUS

ರಾಷ್ಟ್ರೀಯ ಜಾನುವಾರು ಗಣತಿ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಜಾನುವಾರು ಗಣತಿ ಕಾರ್ಯಕ್ಕೆ ಚಾಲನೆ ನೀಡಿದರು.

CM launches 21st National Livestock Census program in the state
ರಾಜ್ಯ ಜಾನುವಾರು ಗಣತಿ ಕಾರ್ಯಕ್ಕೆ ಚಾಲನೆ ನೀಡಿದ ಸಿಎಂ (ETV Bharat)
author img

By ETV Bharat Karnataka Team

Published : Oct 29, 2024, 7:20 PM IST

ಬೆಂಗಳೂರು: 21ನೇ ರಾಷ್ಟ್ರೀಯ ಜಾನುವಾರು ಗಣತಿ ಸಮೀಕ್ಷೆಗೆ ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಜಾನುವಾರು ಗಣತಿ ಸಮೀಕ್ಷೆಯಲ್ಲಿ ರಾಜ್ಯದಲ್ಲಿನ ಎಲ್ಲಾ ಜಾನುವಾರುಗಳ ಸವಿವರ ಗಣತಿ ಸಂಗ್ರಹಿಸಲಾಗುವುದು. ಆ ಮೂಲಕ ಮೇವು ಅಗತ್ಯತೆ ಹಾಗೂ ನೀತಿ ರೂಪಿಸಲು ಸುಲಭವಾಗಲಿದೆ. ಜಾನುವಾರು ಸಮೀಕ್ಷೆ ಫೆಬ್ರವರಿ 2025ರ ವರೆಗೆ ನಡೆಯಲಿದೆ. ಆಧುನಿಕ ತಂತ್ರಜ್ಞಾನದ ಮೂಲಕ ನಿಖರವಾಗಿ ಜಾನುವಾರು ಗಣತಿ ಮಾಡಲಾಗುವುದು. ಈ ಸಮೀಕ್ಷಾ ವರದಿ ಪಶುಸಂಗೋಪನೆ ಅಭಿವೃದ್ಧಿ ಮತ್ತು ಆರೋಗ್ಯ, ಉತ್ಪಾದಕತೆ ಹೆಚ್ಚಿಸಲು ನೀತಿ, ಕಾರ್ಯಕ್ರಮ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ.

ಚಾಲನೆ ಬಳಿಕ ಮಾತನಾಡಿದ ಸಿಎಂ, ರಾಜ್ಯದ ಕೃಷಿ ಆಧಾರಿತ ಆರ್ಥಿಕತೆಗೆ ಜಾನುವಾರುಗಳ ಸಮೀಕ್ಷೆ ಪ್ರಮುಖ ಪಾತ್ರವಹಿಸಲಿದೆ. ಈ ಗಣತಿ ಮೂಲಕ ಜಾನುವಾರುಗಳ ಸಂಖ್ಯೆಯ ನಿಖರ ಮಾಹಿತಿ ಸಿಗಲಿದೆ. ಅದಕ್ಕನುಗುಣವಾಗಿ ನೀತಿ ರೂಪಿಸಲು ಸುಲಭವಾಗಲಿದೆ. ಅದರಿಂದ ಪಶು ಸಂಗೋಪನೆ ಅಭಿವೃದ್ಧಿ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದು ತಿಳಿಸಿದರು.

CM launches 21st National Livestock Census program in the state
ರಾಜ್ಯ ಜಾನುವಾರು ಗಣತಿ ಕಾರ್ಯಕ್ಕೆ ಚಾಲನೆ ನೀಡಿದ ಸಿಎಂ (ETV Bharat)

ಇದೇ ವೇಳೆ ಮಾತನಾಡಿದ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್, ಜಾನುವಾರು ಹೊಂದಿರುವ ರೈತರಿಗೆ ಈ ಗುಣತಿಯಿಂದ ಅನುಕೂಲವಾಗಲಿದೆ. ಇದರಿಂದ ಉತ್ತಮ ಯೋಜನೆ, ಸೇವೆ ಪೂರೈಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಪ್ರತಿ ಐದು ವರ್ಷಕ್ಕೊಮ್ಮೆ ಜಾನುವಾರು ಸಮೀಕ್ಷೆ ನಡೆಸಲಾಗುತ್ತೆ. ಸಾಕು ಜಾನುವಾರುಗಳು, ಪೌಲ್ಟ್ರಿ, ಬಿಡಾಡಿ ಜಾನುವಾರುಗಳ ಗಣತಿ ಮಾಡಲಿದ್ದಾರೆ. ಗಣತಿಯಲ್ಲಿ ಜಾನುವಾರುಗಳ ಜಾತಿಗಳು, ತಳಿ, ವಯಸ್ಸು, ಲಿಂಗ ಮತ್ತು ಮಾಲೀಕತ್ವದ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು.

1919ರಿಂದ ಈವರೆಗೆ 20 ಹಾನುವಾರು ಗಣತಿ ನಡೆಸಲಾಗಿದೆ. 2019ಕ್ಕೆ ಕೊನೆಯದಾಗಿ ಗಣತಿ ನಡೆಸಲಾಗಿತ್ತು‌. ಇದೀಗ 21ನೇ ರಾಷ್ಟ್ರೀಯ ಜಾನುವಾರು ಗಣತಿ ನಡೆಸಲಾಗುತ್ತಿದೆ. ಅಕ್ಟೋಬರ್ 2024ರಿಂದ ಫೆಬ್ರವರಿ 2025ರ ವರೆಗೆ ಗಣತಿ ನಡೆಸಲಾಗುವುದು. 2019ರಲ್ಲಿ ನಡೆದ ಜಾನುವಾರು ಗಣತಿಯಲ್ಲಿ ರಾಜ್ಯದಲ್ಲಿ ಒಟ್ಟು 3.03 ಕೋಟಿ ಜಾನುವಾರುಗಳಿದ್ದವು.

ಕಾರ್ಯಕ್ರಮದಲ್ಲಿ ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರೇಷ್ಮೆ ಸಚಿವರಾದ ಕೆ ವೆಂಕಟೇಶ್, ಪಶು ಸಂಗೋಪನಾ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ಡಾ. ಅಜಯ್ ನಾಗಭೂಷಣ್ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ವಿಜಯಪುರದಲ್ಲಿ ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ: ಸಿಎಂ ಅಭಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.