ETV Bharat / state

'ಅಮ್ಮಾ ನಿರ್ಮಲಮ್ಮ ರಾಜ್ಯದ ತೆರಿಗೆ ಪಾಲು ಕೊಡಮ್ಮ': ಸಿಎಂ ಸಿದ್ದರಾಮಯ್ಯ - ತೆರಿಗೆ ಪಾಲು

ರಾಜ್ಯದ ತೆರಿಗೆ ಪಾಲು ಮತ್ತು ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ವಿಶಿಷ್ಟವಾಗಿ ಆಗ್ರಹಿಸಿದರು.

E'ಅಮ್ಮಾ ನಿರ್ಮಲಮ್ಮ ರಾಜ್ಯದ ತೆರಿಗೆ ಪಾಲು ಕೊಡಮ್ಮ': ವಿಶಿಷ್ಟವಾಗಿ ಬೇಡಿದ ಸಿಎಂ ಸಿದ್ದರಾಮಯ್ಯ!
'ಅಮ್ಮಾ ನಿರ್ಮಲಮ್ಮ ರಾಜ್ಯದ ತೆರಿಗೆ ಪಾಲು ಕೊಡಮ್ಮ': ವಿಶಿಷ್ಟವಾಗಿ ಬೇಡಿದ ಸಿಎಂ ಸಿದ್ದರಾಮಯ್ಯ!
author img

By ETV Bharat Karnataka Team

Published : Feb 29, 2024, 6:34 PM IST

ಬೆಂಗಳೂರು: ರಾಜ್ಯದ ನ್ಯಾಯಯುತ ತೆರಿಗೆ ಪಾಲು ಮತ್ತು ಅನುದಾನಗಳನ್ನು ನೀಡುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಿಎಂ ಸಿದ್ದರಾಮಯ್ಯ ಅವರಿಂದು ನಾಟಕೀಯವಾಗಿ ಬೇಡಿಕೊಂಡ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ, ಈ ಮೂಲಕ ಕೇಂದ್ರಕ್ಕೆ ವಿಶಿಷ್ಟ ರೀತಿಯ ಚಾಟಿ ಬೀಸಿದರು. "ಅಮ್ಮಾ ನಿರ್ಮಲಮ್ಮಾ ನಮ್ಮ ಹಣವನ್ನು ಕೊಡಿ ತಾಯಿ. ಭದ್ರಾ ಮೇಲ್ದಂಡೆಗೆ ಘೋಷಿಸಿರುವ 5,300 ಕೋಟಿ ಸೇರಿದಂತೆ ಬರಬೇಕಾಗಿರುವ ಎಲ್ಲವನ್ನೂ ಕೊಡಿ. ಏಕಮ್ಮಾ ನಿಮಗೆ ಕರ್ನಾಟಕದ ಮೇಲೆ ಸಿಟ್ಟು? ನೀವು ಇಲ್ಲಿಂದಲೇ ಆಯ್ಕೆಯಾಗಿ ರಾಜ್ಯಸಭೆಗೆ ಹೋಗಿದ್ದೀರಿ ತಾಯಿ" ಎಂದು ಸಿದ್ದರಾಮಯ್ಯ ಅವರದ್ದೇ ಆದ ಧಾಟಿಯಲ್ಲಿ ಮಾತನಾಡಿದರು.

"ರಾಜ್ಯಕ್ಕೆ ತೆರಿಗೆ ಪಾಲು ಮತ್ತು ಆದಾಯದಲ್ಲಿ ಅನ್ಯಾಯವಾಗಿರುವಾಗ ನಾವು ಧ್ವನಿ ಎತ್ತುವುದು ತಪ್ಪೇ? ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮೊದಲಾದ ರಾಜ್ಯಗಳಿಗೆ ಶೇ 40ರವರೆಗೆ ಪಾಲು ನೀಡುವ ಕೇಂದ್ರದಿಂದ ನಮಗೆ ಶೇ 12ರಷ್ಟೂ ಬರುತ್ತಿಲ್ಲ" ಎಂದರು.

ಬಜೆಟ್ ಅಂಗೀಕಾರ: ಸಿಎಂ ಉತ್ತರದ ನಂತರ, ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ, 2024-25ನೇ ಸಾಲಿನ ಒಟ್ಟು 3,71,383 ಲಕ್ಷ ಕೋಟಿ ರೂಪಾಯಿ ಮೊತ್ತದ ಆಯವ್ಯಯಕ್ಕೆ ಉಭಯ ಸದನಗಳು ಅಂಗೀಕಾರ ನೀಡಿದವು. ಮುಖ್ಯಮಂತ್ರಿಗಳು ಧನ ವಿನಿಯೋಗ ವಿಧೇಯಕ ಮಂಡಿಸಿದಾಗ, ಪ್ರತಿಪಕ್ಷದ ಧರಣಿ ಮತ್ತು ಸಭಾತ್ಯಾಗದ ನಡುವೆ ಕಾಂಗ್ರೆಸ್ ಶಾಸಕರು ಕಡ್ಡಾಯವಾಗಿ ಹಾಜರಿರುವಂತೆ ವಿಪ್ ನೀಡಲಾಗಿತ್ತು. ನಂತರ ವಿಧೇಯಕ ಅಂಗೀಕಾರಗೊಂಡಿತು.

ಇದನ್ನೂ ಓದಿ: ಹಿಂದೂ ಧಾರ್ಮಿಕ ದತ್ತಿ ಮಸೂದೆಗೆ ಮತ್ತೆ ವಿಧಾನಸಭೆ ಒಪ್ಪಿಗೆ, ಎಲ್ಲರ ಚಿತ್ತ ರಾಜ್ಯಪಾಲರತ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.