ETV Bharat / state

ಕನ್ನಡ ಗೊತ್ತಿಲ್ಲ, ಇಂಗ್ಲಿಷ್ ಬರಲ್ಲ: ಕಳ್ಳರು ಮನೆಗೆ ನುಗ್ಗಿದರೂ ಪೊಲೀಸರಿಗೆ ವಿವರಿಸಲಾಗದೆ ಪರದಾಡಿದ ಸ್ಪೇನ್ ಪ್ರಜೆ - THEFT IN SPAIN CITIZEN HOUSE

ಸ್ಪೇನ್​ ಪ್ರಜೆಯೊಬ್ಬರು ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿದರೂ, ಘಟನೆ ಬಗ್ಗೆ ವಿವರಿಸಲಾಗದೆ, ಅವರ ಮನೆಯಲ್ಲಿ ಕಳ್ಳತನ ನಡೆದಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

Ashoka Nagar Police Station
ಅಶೋಕನಗರ ಪೊಲೀಸ್​ ಠಾಣೆ (ETV Bharat)
author img

By ETV Bharat Karnataka Team

Published : Jan 18, 2025, 3:54 PM IST

ಬೆಂಗಳೂರು: ಸ್ಪೇನ್ ಪ್ರಜೆಯ ಅಸಹಾಯಕತೆ ಕಳ್ಳತನಕ್ಕೆ ದಾರಿಯಾದ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ. ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರೂ ಸಹ ಪರಿಸ್ಥಿತಿ ವಿವರಿಸಲಾರದ ಸ್ಪೇನ್ ಪ್ರಜೆಯ ಮನೆಯಲ್ಲಿ ಕಳ್ಳರು ಕೈಚಳಕ ತೋರಿರುವ ಘಟನೆ ಜನವರಿ 15ರ ರಾತ್ರಿ ಅಶೋಕನಗರ ಠಾಣೆ ವ್ಯಾಪ್ತಿಯ ಲ್ಯಾಂಗ್ ಫೋರ್ಡ್ ಟೌನ್‌ನ ಮನೆಯೊಂದರಲ್ಲಿ ನಡೆದಿದೆ.

ಜನವರಿ 15ರಂದು ರಾತ್ರಿ 8.30ರ ಸುಮಾರಿಗೆ ಸ್ಪೇನ್ ಪ್ರಜೆ ಜೀಸಸ್ ಅಬ್ರಿಲ್ ಎಂಬವರ ಬಾಡಿಗೆಗೆ ವಾಸವಿದ್ದ ಲ್ಯಾಂಗ್ ಫೋರ್ಡ್ ಟೌನ್‌ನ ಮನೆಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ. ಈ ವೇಳೆ ಆತಂಕಗೊಂಡ ಜೀಸಸ್ ಅಬ್ರಿಲ್, ಮತ್ತೊಂದು ರೂಮ್‌ಗೆ ಹೋಗಿ ಲಾಕ್ ಮಾಡಿಕೊಂಡಿದ್ದಾರೆ. ಬಳಿಕ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸಹಾಯವಾಣಿ ಸಿಬ್ಬಂದಿ ಕರೆ ಸ್ವೀಕರಿಸಿದಾಗ ಕನ್ನಡ ಬಾರದ ಜೀಸಸ್ ಅಬ್ರಿಲ್, ಗಾಬರಿಯಿಂದಾಗಿ ಇಂಗ್ಲೀಷ್‌ನಲ್ಲಿಯೂ ವಿವರಿಸದೆ ಪೇಚಿಗೆ ಸಿಲುಕಿದ್ದಾರೆ.

ಸ್ಪ್ಯಾನಿಷ್ ಅರ್ಥವಾಗದ ಸಹಾಯವಾಣಿ ಸಿಬ್ಬಂದಿ ಬೇರೆ ವಿಧಿಯಿರದೆ ಕರೆ ಸ್ಥಗಿತಗೊಳಿಸಿದ್ದಾರೆ. ಈ ವೇಳೆ ಮನೆಗೆ ನುಗ್ಗಿದ್ದ ಖದೀಮರು ಅಷ್ಟೊತ್ತಿಗಾಗಲೇ ನಗದು, ಲ್ಯಾಪ್‌ಟಾಪ್, ಪ್ಲಾಟಿನಂ ಉಂಗುರ, ಸ್ಪೇನ್‌ನ ಐಡಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಡೆಬಿಟ್ ಕಾರ್ಡ್, ಭಾರತದ ಡೆಬಿಟ್ ಕಾರ್ಡ್‌ಗಳು ಸೇರಿದಂತೆ 82 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

ಸೂಕ್ತ ಸಮಯಕ್ಕೆ ಪೊಲೀಸರ ನೆರವು ಸಿಗದೆ ಭಯಗೊಂಡಿದ್ದ ಜೀಸಸ್ ಅಬ್ರಿಲ್ ಬೆಳಗ್ಗೆ 8.30ರ ಬಳಿಕ ಮನೆ ಮಾಲೀಕರಿಗೆ ಕರೆ ಮಾಡಿ, ಅವರ ಮೂಲಕ ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ. ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಜೀಸಸ್ ಅಬ್ರೀಲ್, 2 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಕನ್ನಡ ಬರುತ್ತಿರಲಿಲ್ಲ, ಇಂಗ್ಲಿಷ್ ಕೂಡ ಅಷ್ಟಾಗಿ ಕಲಿತಿರಲಿಲ್ಲ, ಆದ್ದರಿಂದ ಘಟನೆ ವಿವರಿಸಲಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಹುಡುಕಾಟ ಮುಂದುವರೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿದ್ದ ಚಾಕೊಲೇಟ್ ತಿನ್ನುತ್ತಾ ₹5.5 ಲಕ್ಷ ನಗದು, 15 ಕೆಜಿ ಬೆಳ್ಳಿ, ಮುಕ್ಕಾಲು ಕೆಜಿ ಚಿನ್ನ ದೋಚಿದ ಕಳ್ಳರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.